ಮಹಿಳೆಯರ ಸ್ವಾವಲಂಬನೆಗೆ ಸಿರಿ ಸಂಸ್ಥೆ ಆಶಾಕಿರಣವಾಗಿದೆ: ಸ್ವಾಮಿವಿವೇಕಾನಂದ ಆಶ್ರಮದ ಶ್ರೀ ಚೈತನ್ಯನಂದ ಸ್ವಾಮಿಜೀ

ಲೋಕದರ್ಶನ ವರದಿ

ಕೊಪ್ಪಳ: ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಸಿರಿ ಮಳಿಗೆ ಮಾರಾಟ ಕೇಂದ್ರ ಈ ಸಂಸ್ಥೆ ಮಹಿಳೆಯರ ಸ್ವಾವಲಂಬನೆಗೆ ಆಶಾಕಿರಣವಾಗಿದೆ ಎಂದು ಸ್ವಾಮಿವಿವೇಕಾನಂದ ಆಶ್ರಮದ ಶ್ರೀ ಚೈತನ್ಯನಂದ ಸ್ವಾಮಿಜೀ ನುಡಿದರು. 

ಅವರು ನಗರದ ಸಾಲಾರಜಂಗ್ ರಸ್ತೆ ಅಂಬೇಡ್ಕರ್ ಸರ್ಕಲ್ ಬಳಿ ಸೋಮವಾರ ಬೆಳಿಗೆ ಶ್ರೀಧರ್ಮಸ್ಥಳ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿದೆ ವೇಧ ಭಾರತಿ ಸಿರಿ ಮಳಿಗೆ ಗ್ರಾಮೀಣ ಸಿರಿ ಮಳಿಗೆಯ ಉದ್ಘಾಟಿಸಿ ಮಾತನಾಡಿದರು. 

ಮುಂದುವರಿದು ಮಾತನಾಡಿದ ಅವರು ಸಿರಿ ಸಂಸ್ಥೆಯಿಂದ ಮಹಿಳಾ ಸ್ವಾವಲಂಬನೆಯಾಗಲು ಸಾಧ್ಯ. ಮಹಿಳೆಯರು ಆಥರ್ಿಕವಾಗಿ ಸದೃಡರಾಗಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರ ಪಾಲಿಗೆ ಸಂಜೀವಿನಿಯಾಗಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಚೈತನ್ಯನಂದ ಸ್ವಾಮಿಜೀ ಮಹಿಳೆಯರಿಗೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿದರ್ೇಶಕ ಹೆಚ್.ಎಲ್ ಮುರುಳಿದರ ವಹಿಸಿ ಮಾತನಾಡಿ, ಮಹಿಳೆಯರ ಆರ್ಥಿಕ ಸಬಲಿಕರಣಕ್ಕೆ ರೂಪಿಸಿರುವ ನಮ್ಮ ಸಂಸ್ಥೆಯ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಲು ಮತ್ತು ಕೊಪ್ಪಳ ನಗರದಲ್ಲಿ ಆರಂಭಿಸಿರುವ ಸಿರಿ ಮಳಿಗೆಯ ಸದುಪಯೋಗ ಪಡೆದುಕೊಳ್ಳಲು ಮಹಿಳೆಯರು ಮುಂದಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ನಂತರ ಗವಿಮಠದ ಶ್ರೀಗವಿಸಿದ್ದೇಶ್ವರ ಮಾಹಾಸ್ವಾಮಿಗಳು ಸಂಸದ ಸಂಗಣ್ಣ ಕರಡಿ, ನಗರಸಬೇಯ ಸದಸ್ಯ ಅಮ್ಜದ್ ಪಟೇಲ್ ಮತ್ತಿತರರು ಗ್ರಾಮೀಣ ಸಿರಿ ಮಳಿಗೆ ನೂತನ ಕೇಂದ್ರಕ್ಕೆ ಭೇಟಿ ಮಾಡಿ ವೀಕ್ಷಿಸಿ ತಮ್ಮ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. 

    ಕಾರ್ಯಕ್ರಮದಲ್ಲಿ ತಾಲೂಕ ಯೋಜನಾಧಿಕಾರಿ ಸುರೇಂದ್ರ ನಾಯಕ್ರವರು ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಗುರು ಬಸವರಾಜ್ ಅಂಗಡಿ ಮತ್ತು ದೇವರಾಜ್ ವೇಧ ಭಾರತಿ ಸಿರಿ ಮಳಿಗೆ ಅಂಗಡಿಯ ಮಾಲೀಕರಾದ ರೇಖಾ ಉಪಸ್ಥಿತರಿದ್ದು, ವಲಯದ ಮೇಲ್ವ್ವಿಚಾರಕಿ ಶಿಲ್ಪಾ ಪಾಟೀಲ್ ರವರು ಸ್ವಾಗತಿಸಿದರೆ ಇನ್ನೋರ್ವ ಮೇಲ್ವಿಚಾರಕಿ ಸುಮಂಗಳಾರವರು ಕೊನೆಯಲ್ಲಿ ವಂದಿಸಿದರು ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಸಂಸ್ಥೆಯ ಸ್ವಸಹಾಯ ಸಂಘದ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ವಲಯದ ಸೇವಾ ಪ್ರತಿನಿದಿಗಳು ಭಾಗವಹಿಸಿದರು.