ಧಾರವಾಡ 28: ಕುಮಾರೇಶ್ವರನಗರದ ಈಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ನಿನಾದ ಟ್ರಸ್ಟ್ ಧಾರವಾಡ ಆಶ್ರಯದಲ್ಲಿ "ಶ್ರಾವಣ ಸಂಗೀತೋತ್ಸವ" ಕಾರ್ಯಕ್ರಮ ದಿ.26ರಂದು ಅದ್ಭುತವಾಗಿ ಜರುಗಿತು.
ವಿದುಷಿ ಡಾ.ಜ್ಯೋತಿಲಕ್ಷ್ಮೀ ಡಿ.ಪಿ ಕೂಡ್ಲಗಿ ಅವರು ಮತ್ತು ನಾದ ಸುರಭಿ ಸಂಗೀತ ವಿದ್ಯಾಲಯದ ವಿದ್ಯಾಲಯದ ವಿದ್ಯಾಥರ್ಿಗಳು, ವಿದುಷಿ ಭಾರ್ಗವಿ ಕುಲಕಣರ್ಿ ಅವರು ನಡೆಸಿದ ಭಕ್ತಿ ಸುಧೆ ಸಂಗೀತ ಕಾರ್ಯಕ್ರಮದಲ್ಲಿ 'ಗಣಪತಿ ಸ್ತುತಿ ಗೌರಿತನಯ ನಮೋ ಸ್ತುತೇ', 'ತಾಯಿ ಸರಸ್ವತಿ', 'ನಿಮ್ಮ ಶರಣರಿಗೆ ಶರಣೆಂಬುದು ಕರುಣೆಯ ಕೂಡಲ ಸಂಗಮದೇವಾ', 'ಬಾರೇ ಭಾಗ್ಯದ ನಿಧಿಯೇ', 'ಎಂಥಾ ಚಲುವಗೆ ಮಗಳನ್ನು ಕೊಟ್ಟನು ಗಿರಿರಾಜನೇ', ಬೇಂದ್ರೆಯವರ 'ಶ್ರಾವಣ ಬಂತು ನಾಡಿಗೆ, ಬಂತು ಕಾಡಿಗೆ', ಡಾ.ವಿ.ಸಿ.ಐರಸಂಗ ರಚನೆಯ 'ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ', ಡಾ.ಎ.ಎಲ್.ದೇಸಾಯಿ ರಚನೆಯ 'ಶ್ರೀ ಗುರು ಪುಟ್ಟರಾಜ' ಮುಂತಾದ ಹಾಡುಗಳನ್ನು ತುಂಬಾ ಸುಶ್ರ್ಯಾವ್ಯವಾಗಿ ಹಾಡಿ ಸೇರಿದ್ದ ಜನರನ್ನು ಭಕ್ತಿಸಾಗರದಲ್ಲಿ ತೇಲಿಸಿದರು.
ತಬಲಾದಲ್ಲಿ ರಮೇಶ ರಾಥೋಡ್ ಮತ್ತು ಡಾ.ತಿಪ್ಪೇಸ್ವಾಮಿ ಹಾಗೂ ಹಾಮರ್ೊನಿಯಂದಲ್ಲಿ ಎಂ.ಆರ್.ಬಾವಾಖಾನ್ ಸಮರ್ಥ ಸಾಥ್ ನಿರ್ವಹಿಸಿದರು. ನಿನಾದ ಟ್ರಸ್ಟ್ ಕಾರ್ಯದಶರ್ಿ ಶಿಲ್ಪಾ ನವಲಿಮಠ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ಜೆ.ವಾಯ್.ತೋಟದ ವಂದಿಸಿದರು. ವಿದುಷಿ ಡಾ.ಜ್ಯೋತಿಲಕ್ಷ್ಮೀ ಡಿ.ಪಿ. ಅವರನ್ನು ಸನ್ಮಾನಿಸಲಾಯಿತು.
ಪ್ರೊ.ಎಂ.ಈಶ್ವರಯ್ಯ, ಪಂ.ಸೋಮಶೇಖರ ಮರಡಿಮಠ ಜಿ.ಎಂ.ಹುಲ್ಲೂರ, ಮಲ್ಲಿಕಾಜರ್ುನ ಸೊಲಗಿ, ಎಂ.ಎಂ.ಚಿಕ್ಕಮಠ, ಜಿ.ಎನ್.ವಿ.ಪಾಟೀಲ ಬಿ.ಎ.ಹಿರೇಮಠ, ಡಾ.ಎಸ್.ಡಿ.ಕಣದಾಳಿ, ಪಿ.ಎನ್.ಉಮಾಪತಿ, ಪಾಮೋಲಿ, ಎಂ.ಡಿ.ಪಾಟೀಲ, ಬಸವರಾಜ ಶಿರೂರ, ಎಸ್.ಬಿ.ತೊರಗಲ್, ಎನ್.ಜಿ.ವಾರಿ, ಎಫ್.ಬಿ.ಮೊರಬ, ಕೆ.ಸಿ.ದಿನ್ನಿಮಠ, ಕಳ್ಳಿಗುಡ್ಡ, ನಂದಾ ಗುಳೇದಗುಡ್ಡ, ವಂದನಾ ಪೂಜಾರಿ, ಜಯಶ್ರೀ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.