ಲೋಕದರ್ಶನ ವರದಿ
ಮಹಾಲಿಂಗಪೂರ 23: ಸಮೀಪದ ಬೆಳಗಲಿ ಪಟ್ಟಣದಲ್ಲಿ ಶಂಭುಲಿಂಗ ಮಹಾಸ್ವಾಮಿಗಳ 11ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಫೆ.23 ರಂದು ಸಿದ್ಧಾರೂಢ ಹಾಗೂ ಶಂಭುಲಿಂಗ ಶ್ರೀಗಳ ಭಾವಚಿತ್ರ ಮೆರವಣಿಗೆಯು ಮು.10 ಘ.ಗೆ ಬೆಳಗಲಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಕರಡಿ ಮಜಲು, ಝಾಂಜ್ ಪಥಕ, ಇನ್ನೂ ಅನೇಕ ವಾದ್ಯ ವ್ರಂದಗಳೊಂದಿಗೆ ಪಟ್ಟಣದ ಪ್ರಮೂಖ ಬೀದಿಗಳಲ್ಲಿ ಗುರು ಬಸವ ಲಿಂಗಾಯ ನಮಃ ಎಂಬ ಘೋಷಣೆ ಹಾಗೂ ಷಡಕ್ಷರಿ ಮಂತ್ರ ಪಠಿಸುತ್ತ ಜನರಲ್ಲಿ ಭಕ್ತಿಯ ಭಾವ ಮೂಡಿಸುತ್ತ ಸಾಗಿತು. ದಾರಿಯ ಎರಡೂ ಬದಿಯಲ್ಲಿ ಜನ ಭಾವ ಪರವಷರಾಗಿ ನೊಡುತ್ತಿದ್ದರು.
ಮೆರವಣಿಗೆಯಲ್ಲಿ ವೀರಭದ್ರ ದೇವರ ಪುರವಂತರು ವೇಷಧಾರಿಗಳಾಗಿ ಆಗಮಿಸಿದ್ದರು. ಸದ್ಗುರುಗಳ ಶಿಷ್ಯರು, ಸದ್ಭಕ್ತರು, ಆರತಿ ಸಮೇತ ಆಗಮಿಸಿದ ಸುಮಂಗಲೆಯರು, ಶಾಲಾ ವಿದ್ಯಾಥರ್ಿ/ನಿಯರು, ಊರಿನ ಪ್ರಮುಖರು ಆಗಮಿಸಿ ಮೆರವಣಿಗೆ ಮೆರಗು ಹೆಚ್ಚಿಸಿದರು.
ನಂತರ ಮೆರವಣಿಗೆ ಸಿದ್ಧಾರೂಢ ಮಠಕ್ಕೆ ಆಗಮಿಸಿತು. ಭವ್ಯ ವೇದಿಕೆಯಲ್ಲಿ ಅಧ್ಯಾತ್ಮದ ಚಿಂತನ ಕಾರ್ಯಕ್ರಮದ ಗಜೇಂದ್ರಗಡ ದ ಶರಣ ಬಸವ ಕಾಲಜ್ಞಾನ ಮಠದ ಶ್ರೀಗಳು ಸಾನಿಧ್ಯ ವಹಿಸಿ ನಿಸರ್ಗದಲ್ಲಿ ಹಲವು ಬದಲಾವಣೆಗಳು ಸಂಭವಿಸಲಿದೆ, ನಮ್ಮ ನಮ್ಮಲ್ಲಿ ಭೇದಭಾವ ತೊರೆದು ನಾವೆಲ್ಲಾ ದೇಶಕ್ಕಾಗಿ ಒಂದು ಎಂದು ಸಾರಬೇಕಾಗಿದೆ ಎಂದು ನುಡಿದರು.
ಅಧ್ಯಕ್ಷತೆ ಶರಣ ಕ್ರಿಷ್ಣಗೌಡ ಪಾಟೀಲ, ಗಂಗಾವತಿಯ ರೇವಣ ಶಿದ್ದೇಶ್ವರ ತಾತನವರು ನೇತ್ರುತ್ವವಹಿಸಿದ್ದರು , ಅಧ್ಯಕ್ಷತೆ ಗೌರವಾಧ್ಯಕ್ಷ ಸಿದ್ಧಾರೂಢ ಮಠ,
ಉಪಸ್ಥಿತಿಪೂಜ್ಯರಲ್ಲಿ ಕಾಶಿಭಾಯಿ ಪೂರಾಣಿಕ, ಮಂಗಳೂರಿನ ಶ್ರೀಶೈಲಯ್ಯಾ ಸ್ವಾಮಿ ಶ್ರೀಗಳು, ಇದ್ದರು.
ಮುಖ್ಯ ಅಥಿತಿಗಳಾಗಿ ವಿಜಯವಾಣಿ ಉಪ ಸಂಪಾದಕ ಮಹೇಶ ಮನ್ನ್ಯಯ್ಯಮಠ, ಕಾ.ನಿ.ಪ ಅಧ್ಯಕ್ಷ ಜಯರಾಮ್ ಶೆಟ್ಟಿ, ಆರ್.ಎಚ್.ಕಂಬಾರ್, ಡಾ. ಎ.ಆರ್.ಬೆಳಗಲಿ ಪಿ.ಬಿ.ಪೂಜೇರಿ, ಸಿದ್ದಪ್ಪ ಕೊನ್ನೂರ್, ವೆಂಕಣ್ಣ ಜೈನಾಪೂರ್, ರನ್ನ ವಾಹಿನಿಯ ಶಿವಶಂಕರ್ ಕಡಬಲ್ಲವರ್, ಬಸವರಾಜ್ ಪುರಾಣಿಕ, ಪು.ಸಭೆ ಸದಸ್ಯ ಈರಪ್ಪ ಕಿತ್ತೂರ್, ಸ್ವಾಗತ ದರೆಪ್ಪ ಸಾಂಗ್ಲಿಕರ್ ಅಧ್ಯಕ್ಷ ಸಿದ್ಧಾರೂಢ ಮಠ, ನಿರೂಪನೆ ರಾಘವೇಂದ್ರ ನೀಲನ್ನವರ್ ಮಾಡಿದರು.