ದಿ.ಎಸ್. ಆರ್. ಬೊಮ್ಮಾಯಿ ಯವರ ಹುಟ್ಟು ಹಬ್ಬ ಶಾಲಾ ಮಕ್ಕಳಿಗೆ ಬಟ್ಟೆ ಹಾಗೂ ನೋಟ್ ಪುಸ್ತಕಗಳ ವಿತರಣೆ

ಹುಬ್ಬಳ್ಳಿ 20: ಇತ್ತೀಚೆಗೆ  ದಿವಂಗತ ಎಸ್. ಆರ್. ಬೊಮ್ಮಾಯಿ ಯವರ ಹುಟ್ಟು ಹಬ್ಬದ ಸ್ಮರಣಾರ್ಥ ಹುಬ್ಬಳ್ಳಿ ಅಶೋಕ ನಗರ, ನಂ-13, ಸ.ಕ.ಹಿ.ಪ್ರಾ. ಶಾಲೆಯ ಎಲ್ಲಾ ಮಕ್ಕಳಿಗೆ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿಠ್ಠಲ ಕಡ್ಲಿಮಟ್ಟಿ ಯವರು ಬಟ್ಟೆ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿದರು.

ಶಾಲೆಯ ಹಳೆಯ ವಿದ್ಯಾರ್ಥಿಯಾದ ಮೋಹನ ಆರ್. ಥಿಟೆಯವರ ಇವರು ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಷಯವಾರು/ ವರ್ಗವಾರು ಟ್ರೋಪಿ, ಶಾಲಾ ಬ್ಯಾಗ್ ಪುಸ್ತಕ, ಜ್ಯಾಮಿಟ್ರಿ ಬಾಕ್ಸ್ಗಳನ್ನು ಅವರ ಮಗನಾದ ವೈಭವ ಥಿಟೆಯವರ ರವರು ವಿತರಿಸಿದರು.

ಗಾಯತ್ರಿ ಪಿ. ರವರು ನಿರೂಪಿಸಿದರು.ಎಲ್. ಎಲ್. ಕೇಸರಿಯವರು ಸ್ವಾಗತಿಸಿದರು. ಜೆ.ಜಿ. ಮಂಡಕ್ಕಿ & ಎನ್. ಬಿ. ಕಲ್ಯಾಣಿ ಯವರು ಹಾಗೂ ಎಸ್.ಡಿ. ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು.