ರೇಣುಕಾ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು
ರಾಯಬಾಗ 15: ತಾಲೂಕಿನ ದಿಗ್ಗೆವಾಡಿ ಗ್ರಾಮದ ಚೌಗುಲೆ ಗಲ್ಲಿಯಲ್ಲಿ ಪ್ರಥಮಬಾರಿಗೆ ರೇಣುಕಾ ದೇವಿ ಜಾತ್ರಾ ಮಹೋತ್ಸವ ಅತೀವಿಜೃಂಭಣೆಯಿಂದ ಇಂದು ಜರುಗಿತು. ಶನಿವಾರದಂದು ಶ್ರೀ ಯಲ್ಲಮ್ಮ ಜಗವನ್ನು ದಿಗ್ಗೇವಾಡಿ ಗ್ರಾಮದಿಂದ ಹಳೇದಿಗ್ಗೆವಾಡಿ ವರೆಗೆ ವಿವಿಧ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ನಂತರ ಕೃಷ್ಣ ನದಿ ತೀರದಲ್ಲಿ ಮಹಿಳೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಂತರ ಸಂಜೆ ವೇಳೆ ಮಹಾನೈವೇದ್ಯ ಕಾರ್ಯಕ್ರಮ ನಡೆಯಿತು.
ಈ ಸಮಯದಲ್ಲಿ ಸಹಸ್ರಾರು ಭಕ್ತಾಧಿಗಳು ದೇವಿಗೆ ನೈವೇದ್ಯ ತೋರಿಸಿ ತಮ್ಮ ಭಕ್ತಿ ಮೆರೆದರು. ರವಿವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಜರುಗಿತು. ನಂತರ ಸಹಸ್ರಾರು ಭಕ್ತಾಧಿಗಳು ಕಿಚ್ಚ ಹಾಯುವ ಮೂಲಕ ಹರಕೆ ತೀರಿಸಿದರು. ನಂತರ ದಿಗ್ಗೇವಾಡಿ, ಹಳೆದಿಗ್ಗೇವಾಡಿ ಸೇರಿದಂತೆ ಸಹಸ್ರಾರು ಭಕ್ತಾಧಿಗಳು ಮಹಾಪ್ರಸಾದ ಸೇವಿಸಿದರು. ಎಲ್ಲ ಭಕ್ತಾಧಿಗಳು ಭಂಡಾರದಲ್ಲಿ ಮಿಂದೆದ್ದರು.ಈ ವೇಳೆ ಶ್ರೀ ರೇಣುಕಾದೇವಿ ಜಾತ್ರಾ ಕಮಿಟಿಯ ಸದಸ್ಯರು ಗಣ್ಯರು ಉಪಸ್ಥಿತರಿದ್ದರು.ರಾಯಬಾಗ : 6 ಪೋಟೊ ಶಿರ್ಷಿಕೆ ತಾಲ್ಲೂಕಿನ ದಿಗ್ಹೇವಾಡಿ ಗ್ರಾಮದ ಕೃಷ್ಣ ನದಿ ದಡದಲ್ಲಿ ಶ್ರೀರೇಣುಕಾದೇವಿಗೆ ಉಡಿ ತುಂಬುವಾಗ ಹಲವು ಭಕ್ತಾಧಿಗಳು..