ಚೆನ್ನೈ, ಮೇ 13, ಕೋವಿಡ್ 19 ಲಾಕ್ ಡೌನ್ ಬಿಕ್ಕಟ್ಟು ಹಾಗೂ ಆರ್ಥಿಕ ಚೇತರಿಕೆ ಕುರಿತ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಉತ್ಸಾಹವನ್ನು ಹೆಚ್ಚಿಸಿದ್ದು, ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸುತ್ತದೆ ಎಂದು ಅಶೋಕ್ ಲೇಲ್ಯಾಂಡ್ ವ್ಯವಸ್ಥಾಪಕ ನಿರ್ಏಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಪಿನ್ ಸೋಂಧಿ ಹೇಳಿದ್ದಾರೆ.
ಪ್ರಧಾನಿಯವರು ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಕುರಿತು ಹೇಳಿಕೆ ನೀಡಿರುವ ಅವರು, ಮೋದಿಯವರ ಭಾಷಣ ಅಂತರ್ಗತ, ಸಮಗ್ರ ಹಾಗೂ ಆತ್ಮಬಲವನ್ನು ಹೆಚ್ಚಿಸಿದೆ ಎಂದಿದ್ದಾರೆ. ನಾವು ವಿವರಗಳಿಗಾಗಿ ಕಾಯುತ್ತಿರುವಾಗ, ಸುಧಾರಣೆಗಳ ಘೋಷಣೆ ಜಿಡಿಪಿಯ ಶೇಕಡ 10 ರಷ್ಟಿರುವ. 20 ಲಕ್ಷ ಕೋಟಿ ರೂ. ಪ್ಯಾಕೇಜ್ , ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಿಗೆ ಪ್ರಯೋಜನ ಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. "ಉದ್ಯಮಗಳು ಮತ್ತು ನಿರ್ದಿಷ್ಟವಾಗಿ ‘ಸಿವಿ’ ಉದ್ಯಮಕ್ಕೆ ಲಾಭವಾಗಲಿದ್ದು, ಆರ್ಥಿಕತೆಯ ಚಲನೆ ಮತ್ತೆ ಪ್ರಾರಂಭವಾಗುತ್ತದೆ ''ಎಂದಿದ್ದಾರೆ. ಸ್ಥಳೀಯ ಬೇಡಿಕೆಯನ್ನು ಪೂರೈಸುವುದರ ಜತೆಗೆ ಸ್ವಾವಲಂಬನೆಗೆ ಒತ್ತು ನೀಡುವುದರ ಮೂಲಕ ಆರ್ಥಿಕತೆಗೆ ಒತ್ತು ನೀಡಬೇಕು. ಗುಣಮಟ್ಟದ ಮೇಕ್ ಇನ್ ಇಂಡಿಯಾ ಮೂಲಕ ಬಲವಾದ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯ ಎಂದು ವಿಪಿನ್ ಸೋಂಧಿ ಹೇಳಿದ್ದಾರೆ.