ನಾಳೆ ಕನಸು ಕಾಯುವ ಹಾದಿ ಕವನ ಸಂಕಲನ ಲೋಕಾರೆ್ಣ
ರಾಯಬಾಗ, 07; ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಅವರು ರಚಿಸಿರುವ ಕನಸು ಕಾಯುವ ಹಾದಿ ಕವನ ಸಂಕಲನ ಲೋಕಾರೆ್ಣ ಕಾರ್ಯಕ್ರಮ ಮಾ.9 ರಂದು ಮುಂ.9.30 ಗಂಟೆಗೆ ಪಟ್ಟಣದ ಶಾರದಾ ಟುಟೋರಿಯಲ್ಸ್ ಸಭಾಂಗಣದಲ್ಲಿ ನಡೆಯಲಿದೆ. ತಹಶೀಲ್ದಾರ ಸುರೇಶ ಮುಂಜೆ ಕವನ ಸಂಕಲನ ಲೋಕಾರೆ್ಣ ಮಾಡಲಿದ್ದಾರೆ. ಬೆಳಗಾವಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಅತಿಥಿಗಳಾಗಿ ಆಗಮಿಸಲಿದ್ದು, ಸಾಹಿತಿ ಡಾ.ಕೆ.ಎನ್.ದೊಡ್ಡಮನಿ ಕೃತಿ ಪರಿಚಯ ಮಾಡಿಕೊಡುವರು. ಸಾಹಿತಿ ಡಾ.ಪಿ.ಜಿ.ಕೆಂಪ್ಪಣವರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾಯಬಾಗ ಸಂಘರ್ಷ ಸಾಹಿತ್ಯಕೂಟದ 17ನೇ ಪ್ರಕಟಣೆ ಇದಾಗಿದ್ದು, ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಅವರು ಕಾಲೇಜಿನಲ್ಲಿ ಇಂಗ್ಲಿಷ ಉಪನ್ಯಾಸಕರಾಗಿದ್ದರು ಕನ್ನಡದಲ್ಲಿ ಸಾಹಿತ್ಯ ರಚಿಸುವುದರ ಜೊತೆಗೆ ಅನೇಕ ಯುವಕರಿಗೆ ಪ್ರೋತ್ಸಾಹ ನೀಡಿ ಯುವ ಕವಿಗಳನ್ನು ರೂಪಿಸಿದ್ದಾರೆ. ಶಿವಾನಂದ ಬೆಳಕೂಡ ಅವರು ಮುಗಳಖೋಡದಲ್ಲಿ ನಡೆದ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ರಾಯಬಾಗದಲ್ಲಿ ಸಂಘರ್ಷ ಸಾಹಿತ್ಯ ಕೂಟದ ಮೂಲಕ ಅನೇಕ ಕೃತಿಗಳನ್ನು ಪ್ರಕಟಿಸಿ ನಿರಂತರ ಸಾಹಿತ್ಯ ಚಟುವಟಿಕೆ ಕೈಗೊಂಡಿರುವುದು ಶಿವಾನಂದ ಬೆಳಕೂಡ ಅವರ ಕನ್ನಡ ಸಾಹಿತ್ಯದ ಮೇಲಿನ ಅವರ ಪ್ರೀತಿ ತೋರಿಸುತ್ತದೆ.