ವಿಕಲಚೇತರಿಗಾಗುವ ಮಲತಾಯಿ ದೋರಣೆ, ಅನ್ಯಾಯವನ್ನು ಖಂಡಿಸಿ ಉತ್ತರ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಆಗ್ರಹ
The North Karnataka Christian Defence Forum condemns the injustice against the disabled.
ಲೋಕದರ್ಶನ ವರದಿ
ಗದಗ 16:- ಆಡಳಿತಾರೂಢ ಘನ್ ರಾಜ್ಯ ಸರ್ಕಾರವು ಐತಿಹಾಸಿಕ ಜಾಗತಿಕ ಧಾಖಲೆ ಬರೆದ ಪಂಚ ಗ್ಯಾರಂಟಿ ಯೋಜನೆಯಾದ ಸ್ತ್ರೀ ಶಕ್ತಿ ಯೋಜನೆ ಅಡಿಯಲ್ಲಿ ಸಮಸ್ತ ರಾಜ್ಯವ್ಯಾಪಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿರುವುದು ಶ್ಲಾಘನೀಯ. ಇದರಿಂದಾಗಿ ಇಂದು ಮಹಿಳೆಯರು ತಮ್ಮ ಪ್ರಯಾಣದ ಸಮಯದಲ್ಲಿ ಕೇವಲ ತಮ್ಮ ಆಧಾರ್ ಕಾರ್ಡ್ನಿರ್ವಾಹಕರಿಗೆ ತೋರಿಸಿದರೆ ಸಾಕು ಉಚಿತ ಪ್ರಯಾಣದ ಸೌಲಭ್ಯ ಪಡೆಯುವರು. ಈ ಒಂದು ಸರಳತೆ ಮತ್ತು ಮಾನವೀಯತೆಯುಳ್ಳ ಸರಳೀಕರಣ ನೀತಿಯು ಪ್ರತಿಯೊಬ್ಬರು ಹೆಮ್ಮೆ ಪಡುವ ಸಂಗತಿಯಾಗಿರುತ್ತದೆ.
ಆದರೆ “ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ" ಎಂಬ ಮಾತು ಇಂದಿನ ಕರ್ನಾಟಕದ ಕೆಲವು ಸರ್ಕಾರಿ ಯೋಜನೆಗಳಿಗೆ ಅಕ್ಷರಶಃ ಸತ್ಯವಾಗಿ ಪರಿಣಮಿಸುತ್ತಿದೆ. ಎಂಬುದು ಕಹಿ ಆದರೆ ಇದು ನೈಜವಾದ ಕಟುಸತ್ಯ.ಘನ ರಾಜ್ಯ ಸರ್ಕಾರವು ಮಹಿಳೆಯರಿಗೆ ಸಮಸ್ತ ರಾಜ್ಯವ್ಯಾಪಿ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಪಂಚ ಗ್ಯಾರಂಟಿ ಯೋಜನೆ ಅಡಿಯಲ್ಲಿ ನೀಡಿರುವುದು,
ಇದೇ ಸಮಾಜ್ಯೋನ್ಮುಖಿ ಸೌಲಭ್ಯಗಳು ರಾಜ್ಯದಲ್ಲಿನ ವಿಕಲಚೇತನರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಾಮಿಸಿದೆ. ವಿಕಲಚೇತನರು ಮೊದಲೇ ದೈಹಿಕ ಮಾನಸಿಕ ಹಾಗೂ ಅಂಧಕಾರದ ಸಂಕಷ್ಟದಲ್ಲಿ ಬದುಕುತ್ತಿರುವವರು. ಅದರ ಮೇಲೆ ಸರ್ಕಾರದ ನೀತಿಗಳೇ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿರುವುದು ಅತ್ಯಂತ ವಿಷಾಧನೀಯವಾಗಿದೆ. ಕಾರಣ ವಿಕಲಚೇತನರು ಈ ಹಿಂದೆ ಆಡಳಿತಾರೂಢ ಘನ್ ಕಾಂಗ್ರೇಸ್ ಸರಕಾರವು ಸನ್ 2001 ರಲ್ಲಿ ್ರ್ರಥಮವಾಗಿ ವಿಕಲಚೇತನರಿಗಾಗಿ 40ಅ ಕ್ಕಿಂತಲೂ ಹೆಚ್ಚಿನ ವಿಕಲತೆಯನ್ನು ಹೊಂದಿರುವವರಿಗೆ 3 ವರ್ಷದ ಅವಧಿಯುಳ್ಳ ರಾಜ್ಯಾದ್ಯೇಠ ಸಂಪೂರ್ಣ ಉಚಿತವಾಗಿಬಸ್ ಪಾಸ್ ಗಳನ್ನು ನೀಡಿ ಐತಿಹಾಸಿಕವಾಗಿ ವಿಕಲಚೇತನರಿಗೆ ಒಂದು ಆಶಾದಾಯಕ ಯೋಜನೆಯನ್ನು ನೀಡಿದ ಸರಕಾರ ಇಂದು ವಿಕಲಚೇತನರು
ಪ್ರತಿವರ್ಷ ಕಡ್ಡಾಯವಾಗಿ ರೂ.660 ನೀಡಿ ಬಸ್ ಪಾಸ್ ತೆಗೆದುಕೊಳ್ಳಬೇಕು. ರಿಯಾಯತಿ ಬಸ್ ಪಾಸ್ ಪಡೆಯಲು ಅಗತ್ಯ ಧಾಖಲೆಗಳಿಗೆ ಗೆಜೆಟೆಡ್ ಅಧಿಕಾರಿಗಳಿಂದ ದಾಖಲೆ ದೃಢೀಕರಣ ಮಾಡಿಸಬೇಕು. ಸರಕಾರಿ ಕಚೇರಿಗಳಿಗೆ ಅನೇಕ ಬಾರಿ ಖುದ್ದಾಗಿಯೇ ಹಾಜರಾಗಬೇಕು ಆದರೂ ಹಲವು ದಿನಗಳ ನಂತರ ಮಾತ್ರ ಪಾಸ್ ಪಡೆಯಬೇಕು. ಇಷ್ಟೆಲ್ಲಾ ಅವಮಾನಕಾರಿ ಪ್ರಕ್ರಿಯೆಗಳ ಬಳಿಕ ಸಿಗುವಬಸ್ ಪಾಸ್ ಕೂಡ ಕೇವಲ 100 ಕಿಲೋಮೀಟರ್ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದೆ. ಇದು ಸಹಾಯವೇ?ಅಥವಾ ವಿಕಲಚೇತನರಿಗೆ ವಿಧಿಸುವ ಮತ್ತೊಂದು ಶಿಕ್ಷೆಯೇ?
ಸದೃಢ ಆರೋಗ್ಯವಂತ ಮಹಿಳೆಯರಿಗೆ ಶಾಶ್ವತ ಉಚಿತ ಪ್ರಯಾಣ ಸೌಲಭ್ಯ ನೀಡಿದ ಸರ್ಕಾರ, ಶಾಶ್ವತ ವಿಕಲತೆಯೊಂದಿಗೆ ಬದುಕುತ್ತಿರುವ ಲಕ್ಷಾಂತರ ವಿಕಲಚೇತನರೊಂದಿಗೆ ತಾರತಮ್ಯ ಮಾಡುತ್ತಿದೆ.
ಆದುದರಿಂದ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುವಂತೆ, ವಿಕಲಚೇತನರು ತಮ್ಮ ಅಂಗವಿಕಲತಾ ಗುರುತಿನ ಚೀಟಿ (ಯು ಡಿ ಐ ಡಿ / ದಿಸಾಬಿಲಿಟಿ ಕಾರ್ಡ್) ತೋರಿಸಿ, ಯಾವುದೇ ಹಣ,ಬಸ್ ಪಾಸ್, ಅನಗತ್ಯ ವಾರ್ಷಿಕ ಪ್ರಕ್ರಿಯೆಗಳಿಲ್ಲದೆ -ಸಮಸ್ತ ಕರ್ನಾಟಕದಾದ್ಯಂತ ಶಾಶ್ವತವಾಗಿ ಉಚಿತವಾಗಿ ಪ್ರಯಾಣಿಸುವ ವ್ಯವಸ್ಥೆ ಜಾರಿಗೊಳಿಸಬೇಕು.
ಇದು ದಾನವಲ್ಲ.ಇದು ಅನುಕಂಪವೂ ಅಲ್ಲ. ಇದು ಅವರ ಸಂವಿಧಾನಾತ್ಮಕ ಹಕ್ಕು. ಇಂತಹ ಐತಿಹಾಸಿಕ ತೀರ್ಮಾನದಿಂದ ಮಾತ್ರ ಕರ್ನಾಟಕ ಸರ್ಕಾರ ಅಂಗವಿಕಲರ ಶಾಪದಿಂದ ಅಲ್ಲ, ಅವರ ಹೃದಯಪೂರ್ವಕ ಆಶೀರ್ವಾದದಿಂದ ಆಡಳಿತ ನಡೆಸುವಂತಾಗುತ್ತದೆ.
ಈ ಗಂಭೀರ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕೆಂದು ಒತ್ತಾಯಪೂರ್ವಕವಾಗಿ ಹಾಗೂ ವಿನಮ್ರವಾಗಿ ಆಗ್ರಹಪೂರ್ವಕ ಮನವಿಯನ್ನು ಸನ್ಮಾನ್ಯ ಗದಗ ಜಿಲ್ಲಾಧಿಕಾರಿಗಳು ಮುಖಾಂತರ ಸನ್ಮಾನ್ಯ ಘನ್ ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿಯನ್ನು ಕ್ರೈಸ್ತರ ರಕ್ಷಣೆ ವೇದಿಕೆ ಉತ್ತರ ಕರ್ನಾಟಕ ಕ್ರೈಸ್ತ ಮುಖಂಡರು, ಭಾರತೀಯರ ಸೇವಾ ಸಮಿತಿ ಉತ್ತರ ಕರ್ನಾಟಕ ಅಧ್ಯಕ್ಷರಾದ ಪಾಸ್ಟರ ಫ್ರಾನ್ಸಿಸ್ ಕನ್ನಯ್ಯ ರವರು ಮನವಿಯನ್ನು ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 