ಅವಳಿ ನಗರದ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಗರಸಭೆಯು ಸಂಪೂರ್ಣ ವಿಫಲ

ಅವಳಿ ನಗರದ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಗರಸಭೆಯು ಸಂಪೂರ್ಣ ವಿಫಲ The Municipal Corporation has completely failed to provide necessary infrastructure to the citizens

ಅವಳಿ ನಗರದ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಗರಸಭೆಯು ಸಂಪೂರ್ಣ ವಿಫಲ

ಗದಗ 14:-  ಇತ್ತೀಚಿಗಷ್ಟೇ ಈ ಒಂದು ನಗರವು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಾ!! ಎಚ್ ಕೆ ಪಾಟೀಲ್ ಸಾಹೇಬರ ನೇತೃತ್ವದಲ್ಲಿ ಹೈಟೆಕ್ ನಗರವಾಗಿ ಪರಿವರ್ತನೆಯಾಗುವ ಹೊಸ್ತಿಲಿನಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ರಚನೆಯೊಂದಿಗೆ ಅಭಿವೃದ್ಧಿ ಪಥದತ್ ಸಾಗಿರುತ್ತದೆ. ಹೀಗಿರುವಾಗ ಐತಿಹಾಸಿಕ ಹಿನ್ನೆಲೆಯುಳ್ಳ ಗದಗ ಬೆಟಗೇರಿ ಅವಳಿ ನಗರದ ನಾಗರಿಕರು ದಶಕಗಳಿಂದಲೂ ಕಂಡರಿಯದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುವಂಟಾಗಿರುತ್ತದೆ. ಅವಳಿ ನಗರದ ನಾಗರಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಸಮರ​‍್ಕ ಕುಡಿಯುವ ವ್ಯವಸ್ಥೆ, ರಸ್ತೆಗಳ ಅಭಿವೃದ್ಧಿಯ ಕೊರತೆ, ಬೀಡಾಡಿ ದನಗಳು ಹಾಗೂ ಬೀದಿ ನಾಯಿಗಳ ನಿಯಂತ್ರಣ, ಬೀದಿ ದೀಪಗಳ ವ್ಯವಸ್ಥೆ,ಹೀಗೆ ಹಲವಾರು ಮೂಲಭೂತ ಸೌಕರ್ಯಗಳ ಕೋರತೆಯ ಆಗರದಲ್ಲಿ ಬದುಕುವಂತಾಗಿರುತ್ತದೆ. ಅಂತಹದರಲ್ಲಿ ಈ ಬಾರಿಯ ಮಳೆಗಾಲವು ಅತೀ ಚುರುಕಾಗಿ ಆಗಿದ್ದು, ಕೆರೆ ಕಟ್ಟೆಗಳು ನದಿಗಳೆಲ್ಲವೂ ತುಂಬಿ ಹರಿಯುತ್ತಿದ್ದರೂ ನಗರದ ನಾಗರಿಕರು ಮಾತ್ರ ಅಗತ್ಯ ಕುಡಿಯುವ ನೀರಿಗಾಗಿ 18 ರಿಂದ 20 ದಿನಗಳ ವರೆಗೂ ಕಾಯುವಂತಹ ದುಃಸ್ಥಿಯುಂಟಾಗಿರುತ್ತದೆ.                  

 ಇದಕ್ಕೆಲ್ಲಾ ಮೂಲ ಕಾರಣ ಗದಗ ಬೆಟಗೇರಿ ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇದ್ದರೂ ಇಲ್ಲದಂತಾಗಿರುತ್ತದೆ. ನಗರಸಭೆಯ ಆಡಳಿತವು ಜಿಲ್ಲಾಡಳಿತದ ಸುಪರ್ದಿಯಲ್ಲಿ ಇರುವುದರಿಂದ ಜನಸಾಮಾನ್ಯರು ತಮಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆಯುವುದರಲ್ಲಿ ಯಾರನ್ನು ಸಂಪರ್ಕಿಸುವದು ಎಂಬುದೇ ತಿಳಿಯದಾಗಿದೆ. ಅವಳಿ ನಗರದ 23 ನೇ ವಾರ್ಡಿನಲ್ಲಿ ಕಳೆದ ತಿಂಗಳು ಅಂದರೆ ದಿನಾಂಕ 27/09/2025 ರಂದು ನಗರಸಭೆಯಿಂದ ಕುಡಿಯುವ ನೀರು ಪೂರೈಸಲಾಗಿತ್ತು. ಅದು ಇಂದಿಗೆ 20 ದಿನಗಳು ಕಳೆಯುತ್ತಾ ಬಂದರೂ ಇಲ್ಲಿಯವರೆಗೆ ಕುಡಿಯುವ ನೀರು ಪೂರೈಸಿರುವುದಿಲ್ಲ. ಇದರಿಂದ ಬಹುದಿನಗಳಿಂದ ಸಂಗ್ರಹಣೆ ಮಾಡಿಕೊಂಡ ನೀರಿನಲ್ಲಿ ಹುಳಗಳು ಆಗಿ ಬಳಕೆಗೆ ಹಾಗೂ ಕುಡಿಯಲು ಬಾರದಂತಾಗಿರುತ್ತದೆ. ನಗರದ ನಾಗರಿಕರಿಗೆ ಕುಡಿಯುವ ನೀರು ಪೂರೈಸುವಂತೆ ವಾರ್ಡಿನ ಚುನಾಯಿತ ಜನಪ್ರತಿನಿಧಿಗಳಿಗೆ ಕೇಳಿದರೆ ನಗರಕ್ಕೆ ನೀರು ಪೂರೈಸುವ ಪೈಪ್ ಗಳು ಒಡೆದಿರುತ್ತವೆ. ದುರಸ್ಥಿ ಕಾರ್ಯ ಪ್ರಗತಿಯಲ್ಲಿದೆ. ಬೇಕಾದರೆ ಮೇಲಾಧಿಕಾರಿಗಳಿಗೆ ಕೇಳಿರಿ ಎಂದು ಹಾರಿಕೆಯ ಪ್ರತಿಕ್ರಿಯೆ ನೀಡುತ್ತಿರುವರು ಆದರೆ ನಗರದ ನಾಗರಿಕರು ಮಾತ್ರ ದುರ್ವಾಸನೆ ಭರಿತ, ಹುಳಗಳಿಂದ ಕೂಡಿದ ನೀರಿನ ಬಳಕೆಯಿಂದ ಅನಾರೋಗ್ಯ ಪೀಡಿತರಾಗುವ ಭೀತಿಯಲ್ಲಿ ಜೀವಿಸುವಂಟಾಗಿರುತ್ತದೆ.                    

  ಒಟ್ಟಿನಲ್ಲಿ ಗದಗ ಬೆಟಗೇರಿ ನಗರಸಭೆಯು ಮಾತ್ರ ಅವಳಿ ನಗರದ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ  ಸಂಪೂರ್ಣ ವಿಫಲವಾಗಿದೆ ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಕ್ರೋಶವನ್ನು ವ್ಯಕ್ತಪಡಿಸಿರುತ್ತಾರೆ.ಗದಗ 14/10/2025.*ರಾಘವೇಂದ್ರ ಪಾಲನಕರ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರು ಗದಗ. 

*ಫೋ :-9986497452.*ಕುಡಿಯುವ ನೀರಿನ ವ್ಯೆತ್ಯಯದ ನಡುವೆ ಅಸಮರ​‍್ಕ ವಿದ್ಯುತ್ ಪೂರೈಕೆ : ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದಂತೆ ನಗರದ ನಾಗರಿಕರಿಗೆ ಅಗತ್ಯವಿರುವ ಜೀವನಾವಶ್ಯಕ ಕುಡಿಯುವ ನೀರಿನ ಆಹಾಕಾರದ ನಡುವೆ ಗ್ರಹ ಜ್ಯೋತಿ ಎಂದೇ ಖ್ಯಾತಿಯನ್ನು ಪಡೆದ ವಿದ್ಯುತ್ ಪೂರೈಕೆಯಲ್ಲಿಯೂ ಕೊರತೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿರುತ್ತದೆ. ಮೊದಲೇ ತಿಂಗಳಿಗೊಮ್ಮೆ ಪೂರೈಕೆಯಾಗುವ ನೀರನ್ನು ಸಂಗ್ರಹಣೆ ಮಾಡಿಕೊಳ್ಳಬೇಕು ಎಂದರೆ ವಿದ್ಯುತ್ ಅಭಾವದಿಂದ ಮೂಲಭೂತ ಸೌಕರ್ಯಗಳ ವಿಚಾರವಾಗಿ ದೇವರು ವರ ಕೊಟ್ಟರೂ ಪೂಜಾರಿ ಪ್ರಸಾದ್ ನೀಡಲಿಲ್ಲ ಎಂಬಂತಾಗಿರುತ್ತದೆ. ಅದರಲ್ಲೂ ಕುಡಿಯುವ ನೀರಿನ ಅಭಾವದ ನಡುವೆ ಪೈಪ್ ಲೈನ್ ದುರಸ್ಥಿಕಾರ್ಯ ಕೈಗೊಳ್ಳುವದು ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೊಡಲು ಮುಂದಾದಂತಾಗಿದೆ.