ಕೊಂಕಣಿ ವಿವಾದ: ರಾಧಿಕಾ ತಿರುಗೇಟು

ಬೆಂಗಳೂರು, ಅ 04:   ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ 8 ತಿಂಗಳ ಪುತ್ರಿ ಪೋಟೋದಲ್ಲಿ ತಂದೆಯನ್ನು ಗುರುತಿಸುವ ಸಂಗತಿಯನ್ನು ಹಂಚಿಕೊಂಡಿದ್ದರು. ಆದರೆ ಈ ಕುರಿತ ವಿಡಿಯೋ ದಲ್ಲಿ ರಾಧಿಕಾ ಪುತ್ರಿ ಐರಾಳೊಂದಿಗೆ ತಮ್ಮ ಮಾತೃಭಾಷೆ ಕೊಂಕಣಿಯಲ್ಲಿ ಮಾತನಾಡಿದ್ದು, ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ತುತ್ತಾಗಿತ್ತು.  ಬೆಳೆಯೋಕೆ ಕನ್ನಡ, ಕರ್ನಾಟಕ ಬೇಕು, ಆದರೆ ತಮ್ಮ ಮಕ್ಕಳಿಗೆ ಯಾಕೆ ಕನ್ನಡ ಕಲಿಸಿಕೊಡುತ್ತಿಲ್ಲ. ಕನ್ನಡ ಕಲಿಸಿ ಕನ್ನಡ ಮಾತಾನಾಡಿ  ಎಂದು ಕಮೆಂಟ್ಸ್ ಮಾಡಿ ಕಿಡಿಕಾರಿದ್ದವರಿಗೆ ಇದೀಗ ರಾಧಿಕಾ ಖಡಕ್ ಆಗಿ ಉತ್ತರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೊಲ್ ಗೆ ಗುರಿಯಾಗುತ್ತಿದ್ದಂತೆ ರಾಧಿಕಾ ಪಂಡಿತ್ ರಿಯಾಕ್ಟ್ ಮಾಡಿದ್ದು, 'ಐರಾ ತನ್ನ ತಂದೆಯ ಮಾತೃಭಾಷೆ ಕನ್ನಡ ಹಾಗೂ ತಾಯಿಯ ಮಾತೃಭಾಷೆ ಕೊಂಕಣಿ ಎರಡಕ್ಕೂ ತುಂಬಾ ಚೆನ್ನಾಗಿಯೇ ಪ್ರತಿಕ್ರಿಯೆ ನೀಡುತ್ತಾಳೆ. ಎಂದು ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗೆ ಅದ್ಯಾಕೋ ಗೊತ್ತಿಲ್ಲ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಮಾಡಿದ್ದೆಲ್ಲ ವಿವಾದಕ್ಕೆ ಕಾರಣವಾಗುತ್ತಿದೆ. ಇತ್ತಿಚಿಗಷ್ಟೇ ಮಗಳಿಗೆ ಸಿಕ್ಕ ವಿಶೇಷವಾದ ಉಡುಗೊರೆಯನ್ನು ಹಿಡಿದು ರಾಕಿಂಗ್ ಸ್ಟಾರ್ ದಂಪತಿ ಫುಲ್ ಇಂಗ್ಲೀಷ್ ನಲ್ಲಿ ವಿವರಣೆ ನೀಡಿದ್ದರು. ಇದನ್ನು ನೋಡಿ ಅಭಿಮಾನಿಗಳು ರಾಕಿಂಗ್ ದಂಪತಿ ವಿರುದ್ಧ ರೊಚ್ಚಿಗೆದ್ದಿದ್ದರು. ಒಂದೇ ಒಂದು ಪದವನ್ನು ಕನ್ನಡದಲ್ಲಿ ಮಾತನಾಡದೆ ವಿಡಿಯೋ ಪೂತರ್ಿ ಇಂಗ್ಲೀಷ್ ನಲ್ಲಿ ಮಾತನಾಡಿದ್ದರು ಯಶ್ ದಂಪತಿ. ಹಾಗಾಗಿ ನೀವೇನು ಇಂಗ್ಲೆಂಡ್ ನಿಂದ ಬಂದಿದ್ದ. ನಿಮಗೆ ಕನ್ನಡ ಅಭಿಮಾನಿಗಳೆ ಜಾಸ್ತಿ ಇರುವುದು ಕನ್ನಡದಲ್ಲಿ ಹೇಳಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ನಿನ್ನೆ ಮಗಳ ಜೊತೆ ರಾಧಿಕ ಮಗಳ ಜೊತೆ ಕೊಂಕಣಿ ಮಾತನಾಡುತ್ತಿದ್ದಾರೆ. ಕೊಂಕಣಿಯಲ್ಲೆ ಮಗಳಿಗೆ ಡಾಡ ಎಲ್ಲಿದ್ದಾರೆ ಮತ್ತು ಮಮ್ಮ ಎಲ್ಲಿದ್ದಾರೆ ಎಂದು ಕೇಳುತ್ತಿದ್ದಾರೆ. ಅಮ್ಮನ ಪ್ರಶ್ನೆಗೆ ಮದ್ದು ಮಗಳು ಫೋಟೋದಲ್ಲಿರುವ ಅಪ್ಪ ಮತ್ತು ಅಮ್ಮನನ್ನು ಗುರುತಿಸಿ ತೋರಿಸುತ್ತೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು ಇದೀಗ ನಾವು ಐರಾ ಗೆ ಕನ್ನಡ ಹಾಗೂ ಕೊಂಕಣಿ ಎರಡು ಭಾಷೆಯನ್ನು ಹೇಳಿಕೊಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡುವುದರ ಮೂಲಕ ಎಲ್ಲಾ ವಿವಾದಗಳಿಗೂ ರಾಧಿಕಾ ಪಂಡಿತ್ ತೆರೆ ಎಳೆದಿದ್ದಾರೆ.