ನವದೆಹಲಿ,
ಏ 18, ಕರೋನ ನಿವಾರಣೆಗಾಗಿ ಆರೋಗ್ಯ ಸೇತು ಮಾದರಿಯಂತೆ ಈಗ ರೈತರ ಪಾಲಿಗೆ
ವರವಾಗುವ ಕಿಸಾನ್ ರಥ ಆಪ್ ಸಿಹಿಸುದ್ದಿ ಬಂದಿದೆ. ರೈತರ ಹಣ್ಣು ಕಾಯಿ ತರಕಾರಿ
ಮುಂತಾದ ಉತ್ಪನ್ನಗಳನ್ನೂ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ಓಲಾ ಹಾಗೂ ಊಬರ್ ಗಳು
ಕಾರ್ಯ ನಿರ್ವಹಿಸುವ ರೀತಿಯಂತೆ ಕಿಸಾನ್ ರಥ ಸಿದ್ದವಾಗಿದೆ.ಇದಕ್ಕಾಗಿ ಆಪ್
ಕೂಡ ಸಿದ್ದಪಡಿಸಲಾಗಿದೆ. ಲಾಕ್ ಡೌನ್ ನಿಂದ ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ
ಸಾಗಿಸಲು ಪರದಾಡುತ್ತಿರುವ ರೈತರ ಸಮಸ್ಯೆಗಳನ್ನು ಬಗೆಹರಿಸಲು ಇದು ವರದಾನವಾಗಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ಆಪ್ ನ್ನು ಬಿಡುಗಡೆ ಮಾಡಿದ್ದು,
ಲಾಕ್ ಡೌನ್ ನಿಂದ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಬಹುದಾಗಿದೆ. ಕಿಸಾನ್ ರಥ ದ ಮೂಲಕ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಬಹುದು ಎಂದು ಹೇಳಿದ್ದಾರೆ.ಕೇಂದ್ರ
ಸರ್ಕಾರವು ಬಿಡುಗಡೆ ಮಾಡಿರುವ ಈ ನೂತನ ಕಿಸಾನ್ ರಥ್ ಮೂಲಕ ರೈತರು ತಮ್ಮ ಬೆಳೆಗಳನ್ನು
ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸಬಹುದಾಗಿದೆ. ತಕ್ಷಣದ ಅಗತ್ಯವನ್ನು
ಪೂರೈಸಲು ಮನಗಂಡ ಕೇಂದ್ರ ಸರ್ಕಾರ ಉಪಯೋಗ ಮಾಡಿಕೊಂಡು ರೈತರ ನೆರವಿಗೆ ಧಾವಿಸಿದೆ.