ಮುಸ್ಲಿಮರಿಂದ ಬಕ್ರೀದ್ ವೇಳೆಯ ಕುಬರ್ಾನಿ ಹಣ ಪರಿಹಾರ ನಿಧಿಗೆ


ಬೆಂಗಳೂರು: ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಕೇರಳ ಹಾಗೂ ಕನರ್ಾಟಕದ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮುಸ್ಲಿಮರು ಸಹಾಯ ಹಸ್ತ ಚಾಚಿದ್ದು, ಈ ಬಾರಿಯ ಬಕ್ರೀದ್ ಹಬ್ಬದ ವೇಳೆ ಬಂದ ಕುಬರ್ಾನಿ ಹಣವನ್ನು ದಾನ ಮಾಡಲು ನಿರ್ಧರಿಸಿದ್ದಾರೆ.  

ಮುಸ್ಲಿಂ ಸಮುದಾಯದ ಕೆಲ ಸದಸ್ಯರು 2 ದಿನಗಳ ಹಿಂದಷ್ಟೇ ಕುಬರ್ಾನಿ ಹಣವನ್ನು ನೆರೆ ಸಂತ್ರಸ್ತರಿಗೆ ದಾನ ಮಾಡುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಗಿದ್ದರು. ಇದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.  

ಮಂಗಳೂರು ನಿವಾಸಿ ಅಯಾಝ್ ಅಫ್ರಿದಿ ಎಂಬುವವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬಂದ ಪೋಸ್ಟ್ ಗಳಿಗೂ ಮೊದಲೇ ಈ ಬಗ್ಗೆ ಕೆಲವರ ಬಳಿ ಮಾತುಕತೆ ನಡೆಸಿದ್ದೆ. ಸಂತ್ರಸ್ತರಿಗೆ ನೆರವು ನೀಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಾತಿ ಮತ್ತು ನಂಬಿಕೆಗಳನ್ನು ಬದಿಗೊತ್ತಿ ಜನರು ಸಹಾಯ ಮಾಡಲು ಮುಂದಾಗಿದ್ದಾರೆ. ತಮ್ಮ ಬಳಿಯಿರುವ ಸಂಪನ್ಮೂಲಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ಕುಬರ್ಾನಿ ಹಣವನ್ನು ನೀಡಲು ನಾವು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ.  

ಆರ್ಟಿ ನಗರ ನಿವಾರಿ ಇಮ್ತಿಯಾಜ್ ಅಹ್ಮದ್ ಎಂಬುವವರು ಮಾತನಾಡಿ, ಕುಬರ್ಾನಿ ಹಣವನ್ನು ನೀಡುವುದರಿಂದ ಬಕ್ರೀದ್ ಹಬ್ಬದ ದಿನದಂದು ನಮ್ಮ ಧಾಮರ್ಿಕ ಕರ್ತವ್ಯವನ್ನೂ ನಿಭಾಯಿಸಿದಂತಾಗುತ್ತದೆ.

ಪ್ರಾಣಿಗಳ ಬಲಿದಾನ ಮಾಡುವ ಉದ್ದೇಶ ಬಡವರಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ದಾನ ಮಾಡುವುದಾಗಿದೆ. ಇದೀಗ ಕೊಡಗು ಹಾಗೂ ಕೇರಳ ಭೀಕರ ಪರಿಸ್ಥಿತಿ ಎದುರಿಸುತ್ತಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ.  

ಇನ್ನು ಕೆಲವರು ರೂ.10,000 ದಿಂದ 2 ಲಕ್ಷದವರೆಗೂ ಹಣವನ್ನು ನೇರವಾಗಿ ದಾನ ಮಾಡುತ್ತಿದ್ದಾರೆ. ಕೆಲವರು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಸಂಬಂಧ ಪಟ್ಟಂತಹ ಸಂಘಟನೆಗಳಿಗೆ ನೀಡಿ ಈಮೂಲಕ ದಾನ ಮಾಡುತ್ತಿದ್ದಾರೆ.  

ಮೂರೇ ದಿನಗಳಲ್ಲಿ ಮನೆ ನಿಮರ್ಾಣ 

ಬೆಂಗಳೂರು:ಮಳೆ ನಿಂತ ಮೇಲೆ ಮನೆ ಕಳೆದುಕೊಂಡಿರುವವರ ಮಾಹಿತಿ ಪಡೆದು 3 ದಿನದೊಳಗೆ ನಿಮರ್ಾಣ ಮಾಡಿಕೊಡಬಹುದಾದಂತಹ ಪ್ರೀಫ್ಯಾಬ್ರಿಕ್ ಹೌಸ್ಗಳನ್ನು ನಿರಾಶ್ರಿತರಿಗೆ ಒದಗಿಸಲಾಗುವುದು ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು. 

ಕೊಡಗಿನಲ್ಲಿ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಮನೆ ಕಳೆದುಕೊಂಡವರಿಗೆ ಈ ತಕ್ಷಣ ಮನೆ ಒದಗಿಸಬೇಕಿದೆ. ಅದಕ್ಕಾಗಿ ಪ್ರೀ-ಫ್ಯಾಬ್ರಿಕೇಷನ್ ಹೌಸ್ಗಳನ್ನು ಒದಗಿಸಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಗಳೊಂದಿಗೂ ಸಹ ಸಮಾಲೋಚನೆ ನಡೆಸಲಾಗಿದೆ. ಮಳೆ ನಿಂತ ಕೂಡಲೇ ಅಧಿಕಾರಿಗಳೊಂದಿಗೆ ಚಚರ್ಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. 

ಇನ್ನೂ ಕೊಡಗಿಗೆ ಭೇಟಿ ನೀಡಿ ಮಾತನಾಡಿದ ಯು.ಟಿ ಖಾದರ್ ಮೊದಲು ಸಕರ್ಾರ ಸಂತ್ರಸ್ತರ ರಕ್ಷಣೆಗೆ ಆದ್ಯತೆ ನೀಡುತ್ತಿದೆ. ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿಮರ್ಿಸಿಕೊಡಬೇಕಾಗಿದೆ, ನಿರಾಶ್ರಿತರ ಶಿಬಿರದಲ್ಲಿರುವ ಮಕ್ಕಳಿಗೆ ಶಾಲೆಗೆ ತೆರಳುವ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ. 

ತಪ್ಪಾಗಿದೆ ಬಿಡಿ: ಸಚಿವ ರೇವಣ್ಣ 

ಬೆಂಗಳೂರು: ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್ ಗಳನ್ನು ಎಸೆದು ತೀವ್ರ ಟೀಕೆಗೆ ಗುರಿಯಾಗಿರುವ ಸಚಿವ ರೇವಣ್ಣ ಅವರು ಮಂಗಳವಾರ ಕ್ಷಮೆ ಕೇಳಿದ್ದು, ಒಳ್ಳೆ ಕೆಲಸ ಮಾಡುವಾಗ ಇದೆಲ್ಲಾ ಸಾಮಾನ್ಯ. ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ ಎಂದು ಹೇಳಿದ್ದಾರೆ. 

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಹಸಿವಿನಿಂದ ಮಕ್ಕಳು ಹಾಗೂ ಮಹಿಳೆಯರು ಬಿಸ್ಕೆಟ್ ಕೇಳುತ್ತಿದ್ದರು. ಹೀಗಾಗಿ ದೂರದಲ್ಲಿ ಕುಳಿತವರಿಗೆ ಬಿಸ್ಕೆಟ್ ಎಸೆದಿರುವೆ. ಈ ಕುರಿತಾಗಿ ಜನತೆ ಕ್ಷಮೆ ಕೇಳಬೇಕು ಎಂದರೆ ಕೇಳುತ್ತೇನೆ ಎಂದು ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ. 

ನಾನು ದೇವರನ್ನು ನಂಬುವ ವ್ಯಕ್ತಿ. ಬೇಕು ಅಂತ ಬಿಸ್ಕೆಟ್ ಎಸೆದಿಲ್ಲ. ಆ ರೀತಿಯ ಮನೋಭಾವನೆಯೂ ನನ್ನಲ್ಲಿ ಇಲ್ಲ. ಘಟನೆಯಾದ ಮಾರನೇ ದಿನ ಸುದ್ದಿ ಮಾಡಲಾಗಿದೆ. ನನ್ನಿಂದ ತಪ್ಪಾಗಿದೆ ಬಿಡಿ ಎಂದರು. 

ಕೊಡಗಿನಲ್ಲಿ ಕಳೆದ 25 ವರ್ಷಗಳಿಂದ ಆಯ್ಕೆಯಾಗಿರುವ ನಾಯಕರು ಹಾಗೂ ಕೇಂದ್ರ ಸಚಿವರು ಸಂತ್ರಸ್ತರ ನೆರವಿಗೆ ಬರಲಿಲ್ಲ. ಇಂತಹ ಸಂದರ್ಭದಲ್ಲಿ ನಾನು ನೆರವಿಗೆ ನಿಂತಿದ್ದೆ. ಈಗ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ರೇವಣ್ಣ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು. 

ನಾನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವನಲ್ಲ. ಆದರೂ ಹಗಲು, ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದೇನೆ. ಮೂರು ಸಾವಿರ ಹಾಲಿನ ಪ್ಯಾಕೇಟ್ ವಿತರಿಸಿದ್ದೇನೆ ಎಂದು ರೇವಣ್ಣ ಹೇಳಿದರು. 

ಹಾಸನದ ರಾಮನಾಥಪುರ ಸಂತ್ರಸ್ತ್ರರ ಕೇಂದ್ರದಲ್ಲಿ ರೇವಣ್ಣ ಅವರು ಬಿಸ್ಕೆಟ್ ಎಸೆದ ದೃಶ್ಯಾವಳಿ ವ್ಯಾಪಕವಾಗಿ ಸಾಮಾಜಿಕ ತಾಣಗಳಲ್ಲಿ ಹರಿದಾಡಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. 

ಸಿಧು ಶಾಂತಿಯ ರಾಯಭಾರಿ, ಅವರ ವಿರುದ್ಧ ಟೀಕೆ ಸಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್ 

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ತೀವ್ರ ವಿವಾದಕ್ಕೆ ಕಾರಣವಾಗಿರುವ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಶಾಂತಿಯ ರಾಯಭಾರಿ ಎಂದು ಮಂಗಳವಾರ ಇಮ್ರಾನ್ ಖಾನ್ ಹೇಳಿದ್ದಾರೆ. 

ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಸಿಧು ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಒಬ್ಬ ಶಾಂತಿಯ ರಾಯಭಾರಿ ಮತ್ತು ಅವರಿಗೆ ಪಾಕಿಸ್ತಾನದ ಜನತೆ ಅದ್ಭುತ ಪ್ರೀತಿ ಮತ್ತು ವಿಶ್ವಾಸ ನೀಡಿದ್ದಾರೆ ಎಂದು ಇಮ್ರಾನ್ ಖಾನ್ ಅವರು ಹೇಳಿದ್ದಾರೆ. 

ಪಾಕಿಸ್ತಾನಕ್ಕೆ ಬಂದ ಸಿಧು ಅವರನ್ನು ಭಾರತದಲ್ಲಿ ಟಾಗರ್ೆಟ್ ಮಾಡುತ್ತಿರುವವರು ಉಪ ಖಂಡದಲ್ಲಿ ಶಾಂತಿಯಿಂದ ದೂರವಾಗುತ್ತಿದ್ದಾರೆ. ಶಾಂತಿ ಇಲ್ಲದೆ ನಮ್ಮ ಜನ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ. 

ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕ ಕಾಶ್ಮೀರ ಸೇರಿದಂತೆ ಉಭಯ ದೇಶಗಳ ನಡುವಿನ ಎಲ್ಲಾ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮಾತುಕತೆಯ ಮೂಲಕ ನಮ್ಮ ಭಿನ್ನಾಭಿಪ್ರಾಯ ಪರಿಹರಿಸಿಕೊಂಡು ವ್ಯಾಪಾರ ಆರಂಭಿಸಬೇಕು. ಬಡತನ ನಿವಾರಿಸಲು ಮತ್ತು ಉಪಖಂಡದ ಜನರನ್ನು ಮೇಲಕ್ಕೆತ್ತಲು ಉತ್ತಮವಾದ ಮಾರ್ಗವೆಂದರೆ ಮಾತುಕತೆ ಎಂದು ಪಾಕ್ ನೂತನ ಪ್ರಧಾನಿ ಹೇಳಿದ್ದಾರೆ. 

ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡ ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಸಚಿವ ಸಿಧು ವಿರುದ್ಧ ತೀವ್ರ ಟೀಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ.