ಲೋಕದರ್ಶನ ವರದಿ
ಚನ್ನಮ್ಮನ ಕಿತ್ತೂರು, 27: ಗ್ರಾಮೀಣ ಭಾಗದಲ್ಲಿ ಭಾಷಾಭಿಮಾನದ ಕೊರತೆ ಉಂಟಾಗಿದ್ದು ಮೆಲಿಂದ ಮೇಲೆ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರಲ್ಲಿ ಭಾಷೆ-ಸಾಹಿತ್ಯ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಕಿತ್ತೂರು ತಾಲೂಕಾ ಪ್ರಥಮ ಕಸಾಪ ಸಮ್ಮೇಳಾಧ್ಯಕ್ಷರಾದ ಸುನಂದಾ ಎಮ್ಮಿ ಅವರು ಅಭಿಪ್ರಾಯಪಟ್ಟರು.
ಸೋಮವಾರ ಅಂಬಡಗಟ್ಟಿ ಗ್ರಾಮದಲ್ಲಿ ಜರುಗಿದ ಕಿತ್ತೂರ ತಾಲೂಕಾ ಪ್ರಥಮ ಕಸಾಪ ಸಮ್ಮೇಳದಲ್ಲಿ ಮಾತನಾಡಿದ ಅವರು, ಸ್ವಾಭಿಮಾನಕ್ಕೆ ಹೆಸರು ವಾಸಿಯಾ ಕಿತ್ತೂರು ತಾಲೂಕಿನಲ್ಲಿ ಮೊದಲ ಭಾರಿ ಹಮ್ಮಿಕೊಂಡ ಸಮ್ಮೇಳನ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಮೂಲಕ ಮುಂಬರುವ ಯುವ ಪೀಳಿಗೆಗಳಿಗೆ ಸ್ಪೂರ್ತಿ ಯಾಗಲಿದೆ.
ಸರ್ಕಾ ರ ವೇ ಕನ್ನಡ ಭಾಷೆಗೆ ಆಧ್ಯತೆ ನೀಡದೇ ತಾರತಮ್ಯ ಮಾಡುತ್ತಿದೆ. ಪ್ರತಿಭಾನ್ವಿತ ವಿಧ್ಯಾರ್ಥಿ ಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಂದ ಮಾತೃ ಭಾಷೆ ಕನ್ನಡದಲ್ಲಿ ಕಲಿತವರೇ ಆಗಿದ್ದರೆ. ಅವರಿಗೆ ಅವಶ್ಯಕವಾದ ಶೈಕ್ಷಣಿಕ ಸೌಲಭ್ಯಗಳನ್ನು ನೀಡುವ ಮೂಲಕ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸರಕಾರ ಮಾಡಬೇಕಗಿದೆ.
ಸರ್ಕಾ ರ ದ ಯೋಜನೆಗಳನ್ನು ಸಾಮಾನ್ಯ ಜನರಿಗೂ ಪೂರ್ಣ ಪ್ರಮಾಣದಲ್ಲಿ ಮುಟ್ಟಿಸುವ ಮೂಲಕ ಸಾಮಾಜಿಕ, ಆರ್ಥಿ ಕ, ಶೈಕ್ಷಣಿಕವಾಗಿ ಅಭಿವೃದ್ದಿಯಾಗಬೇಕು ಎಂದು ಹೇಳಿದರು.
ಮಹಿಳೆಯರ ಸಾಹಿತ್ಯಿಕ ಕೆಲಸಗಳನ್ನು ಗುರುತಿಸಿ ಗೌರವ, ಸನ್ಮಾನ ನೀಡುವ ಮೂಲಕ ಪ್ರಥಮ ತಾಲೂಕು ಸಮ್ಮೇಳನದ ಸರ್ವಾ ಧ್ಯಕ್ಷರನ್ನಾಗಿ ಮಹಿಳೆಯನ್ನು ಮಾಡಿದ್ದು ಕಿತ್ತೂರು ತಾಲೂಕಿನಲ್ಲಿ ಇತಿಹಾಸ ಸೃಷ್ಟಿ ಮಾಡಿದೆ ಎಂದು ಹರುಷ ವ್ಯಕ್ತಪಡಿಸಿದರು. ಚನ್ನಮ್ಮಾಜಿ ವೈಭವ ಮರುಕಳಿಸಬೇಕಾದರೆ ಎಲೆ ಮರೆ ಕಾಯಿಯಂತಿರುವ ಮಹಿಳಾ ಸಾಹಿತಿಗಳು ತೆರೆಯ ಮರೆಯಿಂದ ಹೊರಗೆ ಬಂದು ಸಾಧನೆಗಳನ್ನು ಮಾಡಿ ಜ್ಞಾನಪೀಠ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಸಾಹಿತ್ಯ ರಚನೆ ಮಾಡಬೇಕು ಎಂದು ಹೇಳಿದರು.
ಶಾಸಕ ಮಾಹಾಂತೇಶ ದೊಡಗೌಡರ ಮಾತನಾಡಿ, ಕಿತ್ತೂರಿನಲ್ಲಿ ಸ್ಥಳಾವಕಾಶ ದೊರೆತರೆ ಕಸಾಪ ಕಟ್ಟಡ ನಿರ್ಮಾ ಣಕ್ಕೆ ಅನುದಾನ ದೊರಕಿಸಿಕೊಡುತ್ತೇನೆ ಎಂದು ಹೇಳಿದರು. ರಾಣಿ ಚನ್ನಮ್ಮಾಜಿ ನಾಡಿನಲ್ಲಿ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವು ನಡೆಯುತ್ತಿರುವುದು ಅರ್ಥಪೂರ್ಣವಾಗಿದ್ದು ಚನ್ನಮ್ಮಾಜಿ ನಾಡಿಗೆ ಗೌರವ ನೀಡಿದಂತಾಗಿದೆ. ಈ ನಾಡಿನಲ್ಲಿ ಒಳ್ಳೆಯ ಸಾಹಿತಿಗಳಿದ್ದಾರೆ. ಅವರನ್ನು ಗುರುತಿಸುವ ಕಾರ್ಯ ಕಸಾಪ ದಿಂದ ಆಗಬೇಕು. ಗ್ರಾಮೀಣ ಭಾಗದ ಹೆಚ್ಚು ಜನರನ್ನು ಕಸಾಪ ಸದಸ್ಯರನ್ನಾಗಿ ಮಾಡುವ ಮೂಲಕ ಗ್ರಾಮೀಣ ಜನಪದ ಸಾಹಿತ್ಯವನ್ನು ಬೆಳಕಿಗೆ ತಂದು ಅದನ್ನು ರಾಜ್ಯಾದ್ಯಂತ ಪಸರಿಸುವ ಕಾರ್ಯ ಕಸಾಪದಿಂದ ಆಗಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಕೋಟೆ ಆವರಣದಲ್ಲಿ ಈಗಿನ ಯುವ ಪಿಳಿಗಿಗೆ ತಿಳಿಯಲು ಶಾಸಕರು ಲೇಜರ್ ಶೋ ನಿರ್ಮಣ ಮಾಡಬೇಕು. 3 ಸಾವಿರ ವರ್ಷದ ಇತಿಹಾಸ ಕನ್ನಡಕ್ಕಿದೆ. ಸತ್ಯ ನ್ಯಾಯ ನಿಷ್ಟೆಗಳೇ ಕನ್ನಡ ಭಾಷೆಯ ಧ್ಯೇಯಗಳಾಗಿದೆ. ಜಿಲ್ಲೆಯಲ್ಲಿ ಕನ್ನಡ ಶಾಲೆಗಳು ಹಾಗೂ ಅಂಗನವಾಡಿ ಕಟ್ಟಡಗಳು ಜೀಣರ್ಾವಸ್ಥೆ ತಲುಪಿವೆ. ಇದರಿಂದ ಪಾಲಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಸರಕಾರ ಲಕ್ಷ ವಹಿಸಬೇಕಿದೆ. ಕಿತ್ತೂರಿನಲ್ಲಿ ಕಸಾಪ ಕಟ್ಟಡ ನಿಮರ್ಾಣ ಮಾಡುವ ಮೂಲಕ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕಾದುದು ಮಹತ್ವದ್ದಾಗಿದೆ. ಕಿತ್ತೂರು ಐತಿಹಾಸಿಕ ಪ್ರವಾಸಿ ತಾಣವಾಗಿ ಹೊರಹೊಮ್ಮಬೇಕಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ-ಮಾನ ದೊರಕಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಪ್ರಾಧಾನ್ಯತೆ ನೀಡಲಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಲಯನ್ಸ್ ಕಬ್ಲ್ ಅಧ್ಯಕ್ಷ ಹಬೀಬ ಶಿಲೇದಾರ ಮಾತನಾಡಿ, ಕನ್ನಡದ ಬಗ್ಗೆ ಮಾತನಾಡುವದು ವೇದಿಕೆಗೆ ಸಿಮಿತವಾಗಬಾರದು. ಎಲ್ಲರು ಮಕ್ಕಳನ್ನು ಆಂಗ್ಲ ಮಾದ್ಯಮದ ವಾಮೋಹ ಬಿಟ್ಟು ಕನ್ನಡ ಶಾಲೆಗಳಲ್ಲಿ ಶಾಲೆ ಕಲಿಸಬೇಕು. ಕೇವಲ ಕನ್ನಡಕ್ಕೆ ಭಾಷಣ ಸೀಮಿತವಾಗಬಾರದು ಆಚಾರ ಮತ್ತು ವಿಚಾರದಲ್ಲಿ ಕನ್ನಡ ಉಳಿಸಬೇಕೆಂದು ಹೇಳಿದರು.
ಜಿ ಪಂ ಸದಸ್ಯೆ ರೋಹಿಣಿ ಪಾಟೀಲ ಹಾಗೂ ಹಬೀಬ್ ಶಿಲೇದಾರ ಹಾಗೂ ಯ ರು ಪಾಟೀಲ ಕನ್ನಡ ಉಳಿವು ಹಾಗೂ ಬೆಳವಣಿಗೆ ಕುರಿತು ಮಾತನಾಡಿದರು. ತಾಲೂಕಾ ಕಸಾಪ ಅಧ್ಯಕ್ಷ ಸೋಮಶೇಖರ ಹಲಸಗಿ ಸ್ವಾಗತಿಸಿದರು. ಮಂಜುನಾಥ ಕಳಸಣ್ಣವರ ಹಾಗೂ ವಿವೇಕ ಕುರಗುಂಡ ನಿರೂಪಿಸಿದರು.