ಉಪ ಚುನಾವಣೆಯಲ್ಲಿ ಅಗತ್ಯ ಸ್ಥಾನ ಗೆಲ್ಲದಿದ್ದರೆ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಲ್ಲ : ಸಿದ್ದರಾಮಯ್ಯ ಭವಿಷ್ಯ

ಹುಬ್ಬಳ್ಳಿ, 25  ಉಪ ಚುನಾವಣೆಯಲ್ಲಿ ಬಿಜೆಪಿ ಸೋತರೆ ಸಕರ್ಾರಕ್ಕೆ ಜೆಡಿಎಸ್ ಬೆಂಬಲ ನೀಡುವುದಿಲ್ಲ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.    ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿ ಅಗತ್ಯಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಜೆಡಿಎಸ್ ಶಾಸಕರು ಬಿಜೆಪಿ ಸಕರ್ಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ 8 ಸ್ಥಾನ ಗೆಲ್ಲದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಕುದುರೆ ವ್ಯಾಪಾರ ಮಾಡಿ ಚುನಾವಣೆ ನಡೆಸುತ್ತಿದ್ದಾರೆ.ಒಂದು ವೇಳೆ ಚುನಾವಣೆಯಲ್ಲಿ ಅಗತ್ಯ ಸ್ಥಾನ ಪಡೆಯುವಲ್ಲಿ ಬಿಜೆಪಿ ವಿಫಲವಾದರೆ ಜೆಡಿಎಸ್ ಬೆಂಬಲಿಸು ವುದಿಲ್ಲ ಎಂಬ ವಿಶ್ವಾಸ ತಮಗೆ ಇದೆ.ಏಕೆಂದರೆ ನಾನು ಜೆಡಿಎಸ್ನಲ್ಲೇ ಇದ್ದು ಬಂದವನು.ಹೀಗಾಗಿ ನನಗೆ ಅವರ ಲೆಕ್ಕಾಚಾರಗಳು ಚೆನ್ನಾಗಿ ಗೊತ್ತಿದೆ.ಅದಕ್ಕಾಗಿಯೇ  ಮುಖ್ಯಮಂತ್ರಿ ಯಡಿಯೂರಪ್ಪ ಆತಂಕಕ್ಕೀಡಾಗಿ 15 ಕ್ಷೇತ್ರ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.   ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಕಾಂಗ್ರೆಸ್ 100 ಕ್ಕೆ 100 ರಷ್ಟು ಅಧಿಕಾರಕ್ಕೆ ಬರುತ್ತೆದೆ ನಾನು ಮುಖ್ಯಮಂತ್ರಿ ಆಗು ವುದು ಬಿಡೋದು ಹೈಕಮಾಂಡ್ ಹಾಗೂ ಶಾಸಕಾಂಗ ಸಭೆಯಲ್ಲಿ ತೀಮರ್ಾನವಾಗಬೇಕು.ಉಪ ಚುನಾವಣೆ ಸಂಬಂಧ ನಾನೀ ಗಾಗಲೇ ಐದು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ.3ನೇ ತಾರೀಖಿನೊಳಗೆ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.   ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,ಇತಿಹಾಸದಲ್ಲೇ ಈ ರೀತಿಯ ರಾತ್ರೋ ರಾತ್ರಿ ರಾಷ್ಟ್ರಪತಿ ಆಳ್ವಿಕೆ ವಾಪಸ್ ಪಡೆದಿದ್ದನ್ನು ನಾನು ನೋಡಿಯೇ ಇಲ್ಲ.ಇದಕ್ಕಿಂತ ಪ್ರಜಾಪ್ರಭುತ್ವ ಅಣಕ ಇನ್ನೊಂದಿಲ್ಲ. ಶಿವಸೇನೆ ಕೋಮುವಾದಿ ಪಕ್ಷದ ಸಖ್ಯೆ ಬಿಟ್ಟ ಹಿನ್ನಲೆ ನಾವು ಶಿವಸೇನೆ ಬೆಂಬಲಿಸಲು ತೀಮರ್ಾನ ಮಾಡಿದ್ದು,ಕೇಂದ್ರ ಸಚಿವ ಸಂಪುಟಕ್ಕೆ ಶಿವಸೇನೆ ಸಚಿವರು ರಾಜೀನಾಮೆ ನೀಡಿ ಎನ್ ಡಿಎನಿಂದ ಹೊರ ಬಂದ ಬಳಿಕ ಅವರನ್ನು ಬೆಂಬಲಿಸುವ ತೀಮರ್ಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.