ಖಾಸ್ಗತ ಶಿವಯೋಗಿಗಳ ಸಂಭ್ರಮದ ರಥೋತ್ಸವ

ಖಾಸ್ಗತ ಶಿವಯೋಗಿಗಳ ಸಂಭ್ರಮದ ರಥೋತ್ಸವ The Grand Chariot Festival of Khasgata Shivayogis

ತಾಳಿಕೋಟೆ 28 : ಪಟ್ಟಣದ ಆರಾಧ್ಯದೈವವೆನ್ನಿಸಿರುವ ಖಾಸ್ಗತ ಶಿವಯೋಗಿಗಳ ಜಾತ್ರಾ ಮಹೋತ್ಸವದಂಗವಾಗಿ ಸೋಮವಾರ ಅಪಾರ ಭಕ್ತ ಸಮೂಹದ ಮಧ್ಯೆ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.  ಜಾತ್ರಾ ಮಹಾ ರಥೋತ್ಸವದ ಅಂಗವಾಗಿ ಬೆಳಿಗ್ಗೆ ಖಾಸ್ಗತೇಶ್ವರ ಮಠದ ಕರ್ತೃ ಗದ್ದುಗೆಗೆ ಮಹಾಭಿಷೇಕ, ಪುಷ್ಪಾರ್ಚನೆ ಹಾಗೂ ನಾನಾ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ಮಠದ ವೇದಮೂರ್ತಿ ವಿಶ್ವನಾಥ ವಿರಕ್ತಮಠ ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ಬೆಳಿಗ್ಗೆ  ಮಠದಿಂದ ಗಂಗಸ್ಥಳಮುಗಿಸಿ ಹೊರಟ ಭವ್ಯ ಮೆರವಣಿಗೆಯಲ್ಲಿ ಪಲ್ಲಕ್ಕಿ ಉತ್ಸವ, ಕಳಸ ಮೆರವಣಿಗೆ, ಬೆಳ್ಳಿಬಣ್ಣದ ಪಂಚಾಶ್ವ ಸಾರೋಟಿನಲ್ಲಿ ಪೀಠಾಧಿಪತಿ ಸಿದ್ದಲಿಂಗದೇವರು, ಇವರ ಮುಂದೆ ಆನೆ ಅಂಬಾರಿಯ ಮೇಲೆ ಖಾಸ್ಗತ ಶಿವಯೋಗಿಗಳ ಬೆಳ್ಳಿ ಮೂರ್ತಿ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಡಗರ ಹೆಚ್ಚಿಸಿತು. ಆನೆ ಅಂಬಾರಿ ಮೆರವಣಿಗೆಯ ಮುಂದೆ ಜೋಗತಿ ನೃತ್ಯ, ಗೊಂಬೆ ಕುಣಿತ, ದಾವಣಗೆರೆಯ ಕಲಾತಂಡಗಳು ಕುಣಿತ, ಕಿವಿ ಗಡಚಿಕ್ಕುವ ಎದೆ ಢವಢವಿಸುವ ಡಿಜೆ ಸಂಗೀತದ ಎರಡು ವಾಹನಗಳು, ಅದರ ಮೇಲೆ, ಮುಂದೆ, ಹಿಂದೆ ಯುವಕರು, ಬಾಲಕರು ಕುಣಿದು ಕುಪ್ಪಳಿಸಿದರು.

ಅನ್ನಪ್ರಸಾದ ವ್ಯವಸ್ಥೆ: ಪಟ್ಟಣದಲ್ಲಿ ಮೆರವಣಿಗೆಯ ಸಾಲಿನುದ್ದಕ್ಕೂ ರಾಜವಾಡೆಯಲ್ಲಿ ಯುವ ಸ್ಪಂದನ ಪೌಂಡೇಶನ್, ಹಾಗೂ ದಿ.ಶೋಭಾ ಸಾಳುಂಕೆ ಫೌಂಡೇಶನ್, ಗ್ರಾಮದೇವತೆ ಯುವಕ ಬಳಗ, ವಿಠ್ಠಲ ಮಂದಿರದ ಬಳಿ ಸ್ನೇಹಸೇವಾ ಬಳಗ, ಭಗತಸಿಂಗ ಯುವಕ ಮಂಡಳ, ಅನುಗ್ರಹ ಆಸ್ಪತ್ರೆಯ ಡಾ.ಪ್ರೌಭುಗೌಡ ಫೌಂಡೇಶನ್, ನಮ್ಮ ಗೆಳೆಯರ ಬಳಗ, ಸಹೃದಯಿ ಗೆಳೆಯರ ಬಳಗ, ಎಬಿಡಿ ಪೌಂಡೇಶನ್, ಬಸನಗೌಡ ಎಡೆಯಾಪುರ್ ಅಭಿಮಾನಿ ಬಳಗ,ಕುಚುಕು ಗೆಳೆಯರ ಬಳಗ, ಸಜ್ಜನ ಸಮಾಜ ಬಾಂಧವರು, ಅನಂತಪುರ ಪೇಟೆಯ ಸಿದ್ಧಲಿಂಗೇಶ್ವರ ಯುವಕ ಮಂಡಳಿ ಸೇರಿದಂತೆ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಪಲಾವ್,

ವಗ್ಗರಣೆ ಸುಸಲಾ, ಮಸಾಲೆ ಅನ್ನ, ಸಾಬುದಾನಿ, ಬಿಸಿಬಿಸಿ ಬಜಿ, ಹಾಲುಗ್ಗಿ, ನೀರು, ಕಲ್ಲಂಗಡಿ ಹಣ್ಣು, ಬಾಳೆ ಹಣ್ಣು, ಪಾನೀಯ, ಬದಾಮ ಹಾಲು ನೀಡಿ ಭಕ್ತಿ ಅರ​‍್ಿಸಿದರು.  ಮಹಾ ರಥೋತ್ಸವದಲ್ಲಿ ಮುಂಬೈ, ಪುಣೆ, ಹೈದರಾಬಾದ್, ಹುಬ್ಬಳ್ಳಿ- ಧಾರವಾಡ ಬೆಂಗಳೂರು, ಕಲಬುರಗಿ ಸೇರಿದಂತೆ ವಿವಿಧ ನಗರ, ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸದ್ಭಕ್ತ ಸಮೂಹ ಭಾಗವಹಿಸಿತ್ತು.  ಬೃಹತ್ ಮೆರವಣಿಗೆ ಹಾಗೂ ಮಹಾರಥೋತ್ಸವದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಜ್ಯೋತಿ ಖೋತ್ ತಮ್ಮ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್‌ ಏರಿ​‍್ಡಸಿದ್ದರು.