ಬ್ಯಾಡಗಿ೧೬: ಮಹಿಳೆಯರ ರಕ್ಷಣೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಜಾರಿಗೊಳಿಸಿರುವ ಕಾನೂನು ಹಾಗೂ ಯೋಜನೆಗಳ ಸೌಲಭ್ಯವು ಮಹಿಳೆಯರಿಗೆ ತಲುಪುವಂತಾಗಬೇಕೆಂದು ಕಿರಿಯ ದಿವಾಣಿ ನ್ಯಾಯಾಧೀಶ ರಾಜೇಶ ಹೊಸಮನೆ ಹೇಳಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ " ಕರ್ನಾಟಕ ಹೆಣ್ಣು ಮಕ್ಕಳ ಸಬಲೀಕರಣ ನೀತಿ -2018" ಕುರಿತು ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಸನಸಭೆ ರೂಪಿಸುವ ಕಾನೂನುಗಳು ಮತ್ತು ಸರಕಾರಗಳು ಜಾರಿಗೆ ತರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ಸಂಘ,ಸಂಸ್ಥೆಗಳು ಕ್ರಮ ವಹಿಸಬೇಕೆಂದು ತಿಳಿಸಿದರು ಅಲ್ಲದೇ ಯಾವುದೇ ಕಾನೂನು ಸಮಸ್ಯೆಗಳಿದ್ದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಬ್ಯಾಡಗಿಯ ನ್ಯಾಯಾಲಯದ ಆವರಣದಲ್ಲಿರುವ ತಾಲೂಕು ಕಾನೂನು ಸೇವೆಗಳ ಸಮಿತಿಯನ್ನು ಸಂಪಕರ್ಿಸಿ ಉಚಿತವಾಗಿ ದೊರೆಯುವ ಕಾನೂನು ಸೇವೆ ವ್ಯವಸ್ಥೆಯ ಸದುಪಯೋಗವನ್ನು ಪಡೆಯಲು ಮುಂದಾಗಬೇಕೆಂದು ಕರೆ ನೀಡಿದರು.ಅಂಗನವಾಡಿ ಮೇಲ್ವಿಚಾರಕಿ ಚನ್ನಮ್ಮ ನಾಗಮ್ಮನವರ, ಹೆಣ್ಣು ಮಕ್ಕಳ ಸಬಲೀಕರಣ ನೀತಿ -2018 ಹಾಗೂ ಬ್ಯಾಡಗಿ ಠಾಣೆಯ ವರದಾ ಪಡೆಯ ಮಹಿಳಾ ಪೊಲೀಸ್ ಪೇದೆ ಶಾಂತಮ್ಮ ಕುರುಬನಾಳ ಮಹಿಳೆಯರ ಸಂರಕ್ಷಣೆಯಲ್ಲಿ ಪೋಲಿಸ್ ಇಲಾಖೆಯ ಪಾತ್ರದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ವಹಿಸಿದ್ದರು. ನ್ಯಾಯವಾದಿಗಳಾದ ಭಾರತಿ ಕುಲಕರ್ಣಿ , ಲಕ್ಷ್ಮೀ ಗುಗ್ಗರಿ, ಸಿ ಪಿ ದೊಣ್ಣೇರ, ಸಿ.ಆರ್ಪಿ. ಬಸವರಾಜ ಸೋಮಕ್ಕಳವರ, ಮುಖ್ಯ ಶಿಕ್ಷಕ ಶ್ರೀಧರ ಹಣಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.