ಪ್ರೇಗ್, ಫೆ. 26 , ಉತ್ತರ ಇಟಲಿಯಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದ್ದು, ಜೆಕ್ ಗಣರಾಜ್ಯದ ಸರ್ಕಾರವು ತನ್ನ ನಾಗರಿಕರು ಯಾವುದೇ ಸಮಯದಲ್ಲಿ ಉತ್ತರ ಇಟಲಿಗೆ ಭೇಟಿ ನೀಡುವುದನ್ನು ತಡೆಯಲು ಶಿಫಾರಸು ಮಾಡುತ್ತದೆ ಎಂದು ಪ್ರಧಾನಿ ಆಂಡ್ರೆಜ್ ಬಾಬಿಸ್ ಹೇಳಿದ್ದಾರೆ.ಮಂಗಳವಾರ ಅವರು ಯುರೋಪಿನಾದ್ಯಂತ ಕೋವಿದ್-19 ಹರಡಿರುವುದರ ಬಗ್ಗೆ ಗಣರಾಜ್ಯದ ಭದ್ರತಾ ಮಂಡಳಿಯೊಂದಿಗೆ ಅಧಿವೇಶನ ನಡೆಸಿದ ಪ್ರಧಾನಿ ಸಾಂಕ್ರಾಮಿಕ ರೋಗ ದೇಶದಲ್ಲಿ ಹರಡದಂತೆ ಅದರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಂಡರು."ತಮ್ಮ ನಾಗರಿಕರು ಉತ್ತರ ಇಟಾಲಿಯನ್ ಪ್ರದೇಶಗಳಾದ ಲೊಂಬಾರ್ಡಿ ಮತ್ತು ವೆನೆಟೊಗೆ ಭೇಟಿ ನೀಡದಂತೆ ಶಿಫಾರಸು ಮಾಡುತ್ತೇವೆ ಎಂದ ಅವರು, ನಮ್ಮ ನಾಗರಿಕರು ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶವನ್ನು ತೊರೆಯಬೇಕೆ ಎಂದು ಪರಿಗಣಿಸುವುದು ಇಂದಿನ ಪರಿಸ್ಥಿತಿಯಲ್ಲಿ ಅವಶ್ಯಕ" ಎಂದು ಸಭೆಯ ನಂತರ ಬಾಬಿಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕರೋನವೈರಸ್ ಸೋಂಕಿನ 320ಕ್ಕೂ ಹೆಚ್ಚು ಪ್ರಕರಣಗಳು ಪ್ರಸ್ತುತ ಇಟಲಿಯಲ್ಲಿ ದಾಖಲಾಗಿದ್ದು, ಇದು ಯುರೋಪಿಯನ್ ರಾಷ್ಟ್ರಗಳಲ್ಲಿ ಪ್ರಮುಖವಾಗಿದೆ.