ಲೋಕದರ್ಶನವರದಿ
ಆಲಮಟ್ಟ: ದೇಶ ಅಷ್ಠೇ ಅಲ್ಲಾ, ಇಡೀ ಪ್ರಪಂಚವೇ ಒಪ್ಪಿಕೊಳ್ಳುವಂಥ ಸಂವಿಧಾನವನ್ನು ಡಾ|| ಬಾಬಾಸಾಹೇಬ ಅಂಬೇಡ್ಕರ ಅವರು ನೀಡಿದ್ದಾರೆ. ಇಂಥ ಪವಿತ್ರಮಯ,ಶೇಷ್ಠ ಸಂವಿಧಾನದಲ್ಲಿ ನಮ್ಮೆಲ್ಲರ ಬದುಕಿನ ನೀತಿ-ನಿಯಮ ಹುದುಗಿವೆ, ಕಾರಣ ಸಂವಿಧಾನಕ್ಕೆ ಯಾವುದೇ ರೀತಿಯಿಂದ ಚ್ಯುತಿಬಾರದಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕು ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅಭಿಪ್ರಾಯಿಸಿದರು.
ಸ್ಥಳೀಯ ಆರ್ಬಿಪಿಜಿಹಳಕಟ್ಟಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ ಅವರು ಜಾತ್ಯಾತೀತ ರಾಷ್ಟ್ರದಲ್ಲಿ ಸರ್ವರಿಗೂ ಸಮಪಾಲು-ಸಮಬಾಳುವೆಂಬ ಸದುದ್ದೇಶದಿಂದ ಶ್ರೇಷ್ಠತನದಿಂದ ಕೂಡಿದ ಸಂವಿಧಾನ ರಚಿಸುವ ಮೂಲಕ ಸಮಾನತೆಯ ತತ್ವ ಸಾರಿದ್ದಾರೆ. ಆದಾಗ್ಯೂ ಸಮಾಜದಲ್ಲಿ ಇನ್ನೂ ಮೇಲು-ಕೀಳೆಂಬ ಜಾಡ್ಯ ಬೇರೂರಿದ್ದು ಖೇದಕರ, ಎಲ್ಲರೂ ಸಂವಿಧಾನದಡಿಯಲ್ಲಿ ನಡೆದು ಗೌರವಿಸಬೇಕು. ಇಂದಿನ ಯುವ ಜನಾಂಗ ಸಂವಿಧಾನದ ಮಹತ್ವ ಅರಿತು ಬದುಕು ಹಸನಗೊಳಿಸಿಕೊಳ್ಳಬೇಕು. ಭವಿಷ್ಯದ ಸ್ತಂಭಗಳನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ತಾಳ್ಮೆ, ಏಕಾಗ್ರೆತೆ, ಛಲಗಾರಿಕೆ ಅಂಬೇಡ್ಕರಲ್ಲಿ ಮೈದೇಳಿದೆ, ಕಡುಬಡತನದ ಬೇಗುದಿಯಲ್ಲಿ ಬೆಂದು-ನೊಂದು ಬಹು ಎತ್ತರಕ್ಕೇರಿದ ಸಾಧಕ. ಪುಟ್ಟ ಮನೆಯಲ್ಲಿ ವಾಸ, ಕಂದಿಲ್ ಬೆಳಕಿನಲ್ಲಿ ಓದಿನ ಹಸಿವು ನೀಗಿಸಿಕೊಂಡಂಥ ಮಹಾನುಭಾವ ಜಗತ್ತಿಗೆ ಬೆಳಕು ಚೆಲ್ಲಿದ್ದಾರೆ. ಅಧ್ಯಯನಶೀಲತೆಯ ಗುಣದೊಂದಿಗೆ ಬೆಂಕಿಯಲ್ಲಿ ಅರಳಿದ ಬಾಬಾಸಾಹೇಬ ಅಂಬೇಡ್ಕರ ಜೀವನ ಚರಿತ್ರೆ ಇಂದಿನ ವಿದ್ಯಾಥರ್ಿಗಳಿಗೆಲ್ಲಾ ಮಾದರಿಯಾಗಿದೆ ಎಂದು ಜಿ.ಎಂ.ಕೋಟ್ಯಾಳ ನುಡಿದರು.
ಹಿರಿಯ ಶಿಕ್ಷಕ ಆರ್.ಪಿ.ಸಂತರ ಮಾತನಾಡಿ, ಅಂಬೇಡ್ಕರ ವ್ಯಕ್ತಿಯಲ್ಲ,ಅವರೊಬ್ಬರು ಸ್ಪೂತರ್ಿದಾಯಕ ದಿವ್ಯಶಕ್ತಿ. ಹೀಗಾಗಿ ದೇವ ಸ್ವರೂಪಿಯಾಘಿ ಅವರನ್ನು ಕಾಣಲಾಗುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳ ಪರಿಪಾಲನೆ ಮಾಡಿ ಸಂವಿಧಾನದ ಘನತೆ ಗೌರವ ಎತ್ತಿಹಿಡಿಯಬೇಕು ಎಂದು.
ಸಂವಿಧಾನದಡಿಯಲ್ಲಿ ನಡೆದಿದ್ದಾದರೆ ನಮಗೆಲ್ಲಾ ಯಾವ ಭಯ-ಆತಂಕ ಎದುರಾಗಲಾರವು.ಸಂವಿಧಾನದ ಮಹತ್ವ ಸಾರ ಉಣಬಡಿಸಿರುವ ಅಂಬೇಡ್ಕರ ಅವರ ಬದುಕಿನ ಯಶೋಗಾಥೆ ನಿಜಕ್ಕೂ ರೋಚಕ,ಇಂಥ ಅಪರೂಪದ ವ್ಯಕ್ತಿಯ ಸ್ಮರಣೆ ಇಂದು ಸ್ಮರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಅವರು ಹೇಳಿದರು.
ಮುನ್ನ ಅಂಬೇಡ್ಕರ ಭಾವ ಚಿತ್ರಕ್ಕೆ ಹೂಮಾಲೆ ಹಾಕಿ ಪೂಜಿಸಲಾಯಿತು.ಡಿ.ಕೆ.ಮುದ್ದಾಪುರ ಸ್ವಾಗತಿಸಿದರು. ಎಲ್.ಆರ್.ಸಿಂಧೆ ನಿರೂಪಿಸಿದರು. ಕಾವ್ಯಾ ಕುಂಟೋಜಿ ವಂದಿಸಿದರು. ಶಿಕ್ಷಕ ಎಸ್.ಎಚ್.ನಾಗಣಿ,ಜಿ.ಆರ್.ಜಾಧವ, ಶಾಂತೂ ತಡಸಿ ಇತರಿದ್ದರು