ಸಂವಿಧಾನ ನಮ್ಮೆಲ್ಲರ ಭರವಸೆಯಾಗಿದೆ-ಸಿದ್ದಪ್ಪ ಲಿಂಗದಾಳ
The Constitution is the hope of all of us - Siddappa Lingadala
ಗದಗ 26 : 1948 ರಲ್ಲಿ ಡಾ.ಬಿ ಆರ್ ಅಂಬೇಡ್ಕರ ನೇತೃತ್ವದ ಸಮಿತಿ ಸಂವಿಧಾನ ಕರಡನ್ನು ಪೂರ್ಣಗೊಳಿಸಿ ಸಂವಿಧಾನ ಸಭೆಯಲ್ಲಿ ಮಂಡಿಸಿತು. 1949 ನವ್ಹಂಬರ್ 26ರಂದು ಸರ್ಕಾರ ಅಂಗೀಕರಿಸಿತು. ಅದರ ನೆನಪಿಗಾಗಿ ಪ್ರತಿ ವರ್ಷ ಸಂವಿಧಾನ ದಿನಾಚರಣೆಯನ್ನು ಆಚರಿಸಿಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಾಧಕ್ಷ ಸಿದ್ದಪ್ಪ ಲಿಂಗದಾಳ ಹೇಳಿದರು.
ಬುಧವಾರ ಗದಗ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಏರಿ್ಡಸಲಾಗಿದ್ದ ಭಾರತ ಸಂವಿಧಾನದ ದಿನಾಚರಣೆಯ ಸಂಮಾರಂಭದಲ್ಲಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ರಾಜೇಂದ್ರ ಗಡಾದ ಮಾತನಾಡಿ ನ್ಯಾಯ, ಸ್ವಾತಂತ್ರ ಸಮಾನತೆ ಸಂವಿಧಾನ ನೀಡಿರುವ ಅಮೂಲ್ಯ ಕೊಡುಗೆಗಳಾಗಿದ್ದು ಭಾರತದ ಶಕ್ತಿ ಸಂವಿಧಾನದಲ್ಲಿದೆ ಭವ್ಯವಾದ ರಾಷ್ಟ್ರ ನಿರ್ಮಿಸಲು ಸಂವಿಧಾನವನ್ನು ಗೌರವಿಸೋಣ ಮತ್ತು ಪಾಲಿಸೋಣ ಎಂದು ಹೇಳಿ ಸಂವಿಧಾನ ಪೀಠಿಕೆಯ ಪ್ರತಿಜ್ಷಾ ವಿಧಿ ಭೋಧಿಸಿದರು.
ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ ಪ್ರೀತ್ ಖೋನಾ ಮಾತನಾಡಿ ನಾವುಗಳು ನಮ್ಮ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳ ಪಾಲನೆಯೊಂದಿಗೆ ಒಳ್ಳೆಯ ಮಾನವರಾಗಿ ಹೆಮ್ಮೆಯ ಪ್ರಜೆಗಳಾಗಿ ಸಂವಿಧಾನಕ್ಕೆ ಗೌರವ ನೀಡುವ ಮೂಲಕ ಸಂವಿಧಾನದ ಆಶಯದಲ್ಲಿ ಮುನ್ನಡೆಯೋಣ ಎಂದರು. ಪುಷ್ಟಾವತಿ ಮಡಿವಾಳರ ಪ್ರಾರ್ಥಿಸಿದರು, ಗುಡದಪ್ಪ ಜಗ್ಗಿನ ಇವರು ಸ್ವಾಗತಿಸಿದರು. ಬೂದೇಶ ಶಿದ್ದನಗೌಡರ ನಿರೂಪಿಸಿದರು. ಸಲ್ಮಾನ ಸಾಂತಗೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳಾದ ಡಾ.ಜಯಕುಮಾರ ಬ್ಯಾಳಿ ಡಾ. ಅಶ್ವಿನಿ, ಸರೋಜಾ ಕಟ್ಟಿಮನಿ, ವಾಯ್.ಎನ್ ಕಡೆಮನಿ, ಬಿ.ಎಸ್ ಹಿರೇಹಾಳ ಮುಂತಾದವರು ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 