ಲೋಕದರ್ಶನ ವರದಿ
ಬೆಳಗಾವಿ 27: ಲಿಂಗರಾಜ ಮಹಾವಿದ್ಯಾಲಯದಲ್ಲಿ 70 ನೇ ಗಣರಾಜ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ ಧ್ವಜಾರೋಹಣ ನೆರವೇರಿಸಿದರು. 70 ನೇ ಗಣರಾಜ್ಯೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಪ್ರಾಚಾರ್ಯರು 'ಸಂವಿಧಾನವು ಅನುಷ್ಠಾನಗೊಳಿಸಿದ ನಿಮಿತ್ಯವಾಗಿ ನಾವು ಇಂದು ಗಣರಾಜ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ'. ದೇಶದಲ್ಲಿ ಉತ್ತಮ ಆಡಳಿತ ನಡೆಸಲು ಸಂವಿಧಾನವು ಅತ್ಯವಶ್ಯಕ ಎಂದು ನುಡಿದರು.
ಶಾಸಕಾಂಗ, ಕಾಯರ್ಾಂಗ ಹಾಗೂ ನ್ಯಾಯಾಂಗಗಳು ಸಂವಿಧಾನದ ಮೂರು ಪ್ರಮುಖ ಅಂಗಗಳು, ಶಾಸಕಾಂಗವು ಕಾನೂನುಗಳನ್ನು ರೂಪಿಸಿದರೆ, ಕಾಯರ್ಾಂಗವು ಅವುಗಳನ್ನು ಅನುಷ್ಠಾನಗೊಳಿಸುತ್ತದೆ. ನ್ಯಾಯಾಂಗ ಇವೆರಡನ್ನು ಹೊಂದಾಣಿಕೆಯಿಂದ ನಿಯಂತ್ರಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಭಾರತದ ಸಂವಿಧಾನ ಮತ್ತು ಕಾನೂನುಗಳನ್ನು ಗೌರವಿಸಬೇಕು ಹಾಗೂ ನಾಗರಿಕರು ದೇಶಸೇವೆ ಹಾಗೂ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು. ಭಾರತದ ಪ್ರತಿಯೊಬ್ಬ ನಾಗರಿಕರು ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು ಹಾಗೂ ಯುವಜನತೆ ಆಧುನಿಕ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಲ್.ಇ ಸಂಸ್ಥೆಯ ಆಜೀವ ಸದಶ್ಯರಾದ ಪ್ರೊ.ಪ್ರಕಾಶ ಕಡಕೋಳ, ಲಿಂಗರಾಜ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯೆ ಆರ್.ಎಸ್.ಸಂಬರಗಿಮಠ ಹಾಗೂ ಪ್ರಕಾಶ್ ಖೋತ್ ಉಪಸ್ಥಿತರಿದ್ದರು. ಜೊತೆಗೆ ಮಹಾವಿದ್ಯಾಲಯದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ಮಹೇಶ ಗುರನಗೌಡರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.