ಆಯುಧ ಪೂಜೆಯಲ್ಲಿ ಗನ್ ಇಟ್ಟು ಪೂಜೆ ಮುತ್ತಪ್ಪ ರೈಗೆ ಸಿಸಿಬಿ ಸೂಚನೆ

ಬೆಂಗಳೂರು 22: ಆಯುಧ ಪೂಜೆ ದಿನ ಗನ್ ಇಟ್ಟು ಪೂಜೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈಗೆ ಇಂದು ಮಧ್ಯಾಹ್ನದ ನಂತರ ಸಿಸಿಬಿಗೆ ಹಾಜರಾಗುವಂತೆ ಡಿಸಿಪಿ ಗಿರೀಶ್ ಸೂಚಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ.          ಸಾಮಾಜಿಕ ಜಾಲತಾಣದಲ್ಲಿ ಗನ್ ಮತ್ತಪ್ಪ ರೈ ಆಯುಧ ಪೂಜೆ ದಿನ ಗನ್ ಇಟ್ಟು ಏಕೆ ಪೂಜೆ ಮಾಡಿದರು ಎಂಬ ಬಗ್ಗೆ ಇಂದು ತನಿಖೆ ನಡೆಸಲಿದ್ದಾರೆ.

                  ಸಂಬಂಧ ಶನಿವಾರ ತನಿಖೆ ನಡೆಸುವ ವೇಳೆ ಗಲಿಬಿಲಿಗೊಂಡಿದ್ದ ಮುತ್ತಪ್ಪ ರೈ, ಇಂದು ಹಾಜರಾಗಿ ಗನ್ ಪೂಜೆ ಪೋಸ್ಟ್ ಬಗ್ಗೆ ಉತ್ತರ ನೀಡಲಿದ್ದಾರೆ.