ಬಿಜೆಪಿ ಸರ್ಕಾರ ಎಲ್ಲಾ ಕಡೆಗಳಲ್ಲೂ ದ್ವೇಷ ಹರಡುತ್ತದೆ: ರಾಹುಲ್ ಗಾಂಧಿ ಕಿಡಿ

ಗುವಾಹಟಿ, ಡಿಸೆಂಬರ್ 28,ಬಿಜೆಪಿ ಸರ್ಕಾರ ಎಲ್ಲಾ ಕಡೆಯಲ್ಲೂ ದ್ವೇಶವನ್ನು ಪ್ರಚೋದಿಸುತ್ತಿದ್ದು,  ಸಾಮಾನ್ಯ ಜನರು ಇದರ ವಿರುದ್ಧ ಧ್ವನಿ ಎತ್ತಲು ಅಸಹಾಯಕರಾಗಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ರಾಹುಲ್ ಗಾಂಧಿ ಇಂದು ತಿಳಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಎಲ್ಲಾ ಕಡೆಗಳಲ್ಲೂ ದ್ವೇಷವನ್ನು ಹರಡುತ್ತಿದ್ದು, ಅಸ್ಸಾಂನಲ್ಲಿ ಯುವಕರು ಪ್ರತಿಭಟಿಸುತ್ತಿದ್ದಾರೆ, ಇತರ ರಾಜ್ಯಗಳಲ್ಲಿ ಪ್ರತಿನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರನ್ನು ಏಕೆ  ಗುಂಡಿಕ್ಕಿ ಕೊಲ್ಲಬೇಕು. ಬಿಜೆಪಿ ಸರ್ಕಾರ ಜನರ ಧ್ವನಿಯನ್ನು ಕೇಳಲು ಬಯಸುವುದಿಲ್ಲ" ಎಂದು ಗುವಾಹಟಿಯಲ್ಲಿ ನಡೆದ ರ್ಯಾಲಿಯಲ್ಲಿ ಅವರು ಪ್ರಶ್ನಿಸಿದ್ದಾರೆ.ಕಾಂಗ್ರೆಸ್ ಪಕ್ಷದ 135ನೇ ಸಂಸ್ಥಾಪನಾ ದಿನವಾದ ಇಂದು ಅಸ್ಸಾಂನಲ್ಲಿ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟಿಸುವ ಜನರೊಂದಿಗೆ ಪಕ್ಷ ಕೈ ಜೋಡಿಸಲಿದೆ. ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಿಂಸಾಚಾರ ಹೆಚ್ಚಾಗಿದ್ದು, "ಅಸ್ಸಾಂ ಅನ್ನು ಅಲ್ಲಿನ ಜನರೇ ನಡೆಸುತ್ತಾರೆ" ಎಂದು ಗಾಂಧಿ ಹೇಳಿದರು.ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಲಿನ ವಿವಿಧ ಸಮುದಾಯಗಳು ಮತ್ತು ಧರ್ಮಗಳ ನಡುವೆ ಸಹೋದರತ್ವ ನಶಿಸಿ ಗಲಭೆಯಾಗಲಿದೆ ಎಂದು ತಾನು ಮೊದಲೇ ಹೇಳಿದ್ದೆ. ಇಂದು ತಮ್ಮ ಭವಿಷ್ಯ ನಿಜವಾಗಿದ್ದು, ಅದನ್ನು ಪುನರಾವರ್ತಿಸಲು ನನಗೆ ಬೇಸರವಾಗಿದೆ. ಅಸ್ಸಾಂನಿಂದ ತಾನು ಕಲಿತ ಸಹೋದರತ್ವ ಮತ್ತು ಶಾಂತಿಯ ಬಗೆಗಿನ ಪಾಠವು ವಿಶಿಷ್ಟವಾಗಿದೆ ಎಂದ ರಾಹುಲ್ ಗಾಂಧಿ ದೇಶದ ಇತರ ರಾಜ್ಯಗಳನ್ನು ಇದಕ್ಕೆ ಉದಾಹರಣೆ ನೀಡಿದರು.ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಚರ್ಚಿಸಿದ ಗಾಂಧಿ, ಕಾಂಗ್ರೆಸ್ ಯಾವಾಗಲೂ ಈ ಕಾಯ್ದೆಯ ವಿರುದ್ಧ ನಿಲ್ಲುತ್ತದೆ ಮತ್ತು ಸಿಎಎ ವಿರೋಧಿ ಪ್ರತಿಭಟನಾಕಾರರೊಂದಿಗೆ ಸದಾ ಒಗ್ಗಟ್ಟಿನಲ್ಲಿ ನಿಲ್ಲುತ್ತದೆ ಎಂದು ಹೇಳಿದರು.ದೇಶದಲ್ಲಿ ಆರ್ಥಿಕತೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು,ಆರ್ಥಿಕತೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ, ಬಿಜೆಪಿ ಸರ್ಕಾರ ದ್ವೇಷವನ್ನು ಹರಡುತ್ತಿದ್ದು, ಇದರಿಂದ ಜನರು ಆರ್ಥಿಕತೆಯ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳದಂತೆ ಮಾಡಿದೆ. ಇಂದು ದೇಶದ ಆರ್ಥಿಕತೆ ಶೇ.9 ರಿಂದ 2 ಕ್ಕೆ ಇಳಿದಿದೆ ಮತ್ತು ಕಳೆದ 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಸೃಷ್ಠಿಯಾಗಿದೆ. ಇದು ಭಾರತದಲ್ಲಿ ಅಭಿಯಾನವನ್ನು ರೂಪಿಸುತ್ತದೆ, ತಾವು ಯಾವಾಗಲೂ ಅಸ್ಸಾಂನ ಜನರಿಗೆ ಸಂತೋಷ ಮತ್ತು ದುಃಖದಲ್ಲಿ ಭಾಗಿಯಾಗುವುದಾಗಿ ಗಾಂಧಿ ಭರವಸೆ ನೀಡಿದರು.ಐತಿಹಾಸಿಕ ಅಸ್ಸಾಂ ಒಪ್ಪಂದದ ಮನೋಭಾವವನ್ನು ಯಾವುದೇ ವೆಚ್ಚದಲ್ಲಿ ಸತತವಾಗಿಪ್ರಯತ್ನಿಸಬೇಕು ಎಂದು ಹೇಳಿದ ಗಾಂಧಿ, ಅಸ್ಸಾಂ ಒಪ್ಪಂದವು ರಾಜ್ಯದಲ್ಲಿ ಶಾಂತಿಯ ಆಧಾರವಾಗಿದ್ದು, ಅದನ್ನು ಮುರಿಯಬಾರದು ಎಂದು ಹೇಳಿದರು.ಗುವಾಹಟಿಯಲ್ಲಿ ನಡೆದ ಸಿಎಬಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬ ಸದಸ್ಯರನ್ನು ಇದೇ ಸಂದರ್ಭದಲ್ಲಿ ಭೇಟಿಯಾದ ಅವರು ಸಂತ್ರಸ್ಥ ಕುಟುಂಬಕ್ಕೆ ಸಾಂತ್ವನ ಹೇಳಿದರು.