ನವಂಬರ ತಿಂಗಳಲ್ಲಿ ನಡೆಯುವ ಅತೀರುದ್ರ ಮಹಾಯಜ್ಞವು ಎಲ್ಲರ ಕಲ್ಲಾಣಕ್ಕಾಗಿ ಜರುಗಲಿದೆ.

ನವಂಬರ ತಿಂಗಳಲ್ಲಿ ನಡೆಯುವ ಅತೀರುದ್ರ ಮಹಾಯಜ್ಞವು  ಎಲ್ಲರ ಕಲ್ಲಾಣಕ್ಕಾಗಿ ಜರುಗಲಿದೆ. The Atirudra Mahayagna, which will be held in the month of November, will be held for the benefit of

ಲೋಕದರ್ಶನ ವರದಿ 

ಗದಗ 18 : ನಗರದಲ್ಲಿ ನವಂಬರ ತಿಂಗಳಲ್ಲಿ ನಡೆಯುವ ಅತೀರುದ್ರ ಮಹಾಯಜ್ಞವು  ಎಲ್ಲರ ಕಲ್ಲಾಣಕ್ಕಾಗಿ ಜರುಗಲಿದೆ. ಇದರಿಂದ ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿ, ಸಮೃದ್ದಿ ದೊರಕಲಿದೆ ಎಂದು  ಶ್ರೀ ಮಹಾಂತ ಸಹದೇವಾನಂದ ಗಿರೀಜೀ ಮಹಾರಾಜರು ಹೇಳಿದರು.  

 ಹುಬ್ಬಳ್ಳಿ ರಸ್ತೆಯಲ್ಲಿರುವ ಶ್ರೀ ವಿಠ್ಠಲಾರೂಡ ಸಮುದಾಯ ಭವನದಲ್ಲಿ ಅತೀರುದ್ರ ಮಹಾಯಜ್ಞ ಕುರಿತು ಜರುಗಿದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿ, ಮಹಾನ ಸಾಧುಗಳು ಹಿಮಾಯಲದಲ್ಲಿ ತಪಸ್ಸು ಮಾಡುವದು ವ್ಯಯಕ್ತಿಕ ಲಾಭಕ್ಕಾಗಿ ಅಲ್ಲ, ಅವರು  ವಿಶ್ವಕಲ್ಯಾಣಕ್ಕಾಗಿ ಮಾನವ ಧರ್ಮಕ್ಕಾಗಿ ಮತ್ತು ಎಲ್ಲ ಸಮಸ್ತ ಜನರ ಕಲ್ಯಾಣಕ್ಕಾಗಿ ಮಾಡುತ್ತಾರೆ. ಅದರಂತೆ ಗದಗ ನಗರದಲ್ಲಿ ಸಂಘಟಿಕರು ಅಯೋಜಿಸಿರುವ ಮಹಾಯಜ್ಞದಲ್ಲಿ ಎಲ್ಲ ಧರ್ಮದವರಿಗೆ ಎಲ್ಲ ವರ್ಗದವರಿಗೆ ಕಲ್ಯಾಣವಾಗಲಿದೆ. ನಮ್ಮ ಸಂಕಲ್ಪವು ಮಾನವ ಕಲ್ಯಾಣಕ್ಕಾಗಿ ಇರುವದರಿಂದ ಈ ಮಹಾಯಜ್ಞದಲ್ಲಿ ಎಲ್ಲರೂ ತನು-ಮನ-ಧನ, ಸಮಯ ದಾನ ಮತ್ತು ಶೃದ್ದಾ ಭಕ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು. 

2025 ನೇ ಸಾಲಿನಲ್ಲಿ ಜರುಗಿದ ಮಹಾ ಕುಂಭಮೇಳವು ಅಧುನಿಕ ಪ್ರಚಾರದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ತಮ್ಮ ಜೀವನ ಪಾವನಗೊಳಿಸಿದರು. ಅಲ್ಲದೆ, ಕರ್ನಾಟಕದಿಂದ ಅತೀ ಹೆಚ್ಚು ಜನರು ಪಾಲ್ಗೊಂಡಿರುವುದು ವಿಶೇಷ ಅದೇರೀತಿ ನಗರದಲ್ಲಿ ನಡೆಯುವ ಮಹಾಯಜ್ಞದಿಂದ ಗದಗ ನಗರವು ಪಾವನಗೊಳ್ಳಲಿದೆ. ಈ ಮಹಾಯಜ್ಞದಲ್ಲಿ ಭಾಗವಹಿಸುವ ಸಾಧುಗಳು ಶ್ರೀಮಂತರಲ್ಲ, ಸ್ಥಿತಿವಂತರಲ್ಲ  ಆದರೆ, ಅವರು ಮಹಾನ ಸಾಧಕರಾಗಿದ್ದಾರೆ ಅವರ ಆಶೀರ್ವಾದಿಂದ ಎಲ್ಲರ ಜೀವನ ಪಾವನವಾಗಲಿದೆ ಎಂದು ಹೇಳಿದರು.  

 ಅತೀರುದ್ರ ಮಹಾಯಜ್ಞ ಸಮಿತಿಯ ಗೌರವಾಧ್ಯಕ್ಷ, ನರಗುಂದ ಶಾಸಕ ಮತ್ತು ಮಾಜಿ ಸಚಿವ ಸಿ.ಸಿ.ಪಾಟೀಲ ಅವರು ಮಾತನಾಡಿ, ಹಿಮಾಲಯದಲ್ಲಿ ಜೀವಮಾನ ತಪಸ್ಸು ಮಾಡಿ,  ಮಹಾಯಜ್ಞದಲ್ಲಿ ಪಾಲ್ಗೊಳ್ಳಲು ನಗರಕ್ಕೆ ನಾಗಾಸಾಧುಗಳು ಆಗಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದು ನಮ್ಮ ಸೌಭಾಗ್ಯವು ಆಗಿದೆ. ಈ ಯಜ್ಞವನ್ನು ನಾವೇಲ್ಲರೂ ಅದ್ದೂರಿಯ ಜೊತೆಗೆ ಅರ್ಥಪೂರ್ಣವಾಗಿ ಮಾಡಬೇಕಿದೆ. ಜಿಲ್ಲೆಯ ಎಲ್ಲ ತಾಲ್ಲೂಕಿನ ಜನರು ಭಕ್ತಿ-ಭಾವದಿಂದ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಮತ್ತು ಇದು ಗದಗ ಜಿಲ್ಲೆಯ ಜನತೆಯ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಯಜ್ಞವಾಗಿರುವದರಿಂದ ನಾವೇಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.  

ಈ ಕಾರ್ಯಕ್ರಮದಲ್ಲಿ ಅತೀರುದ್ರ ಮಹಾಯಜ್ಞ ಸಮಿತಿಯ ಅಧ್ಯಕ್ಷರಾದ ಕಿರಣ ಭೂಮಾ ಅಧ್ಯಕ್ಷತೆ ವಹಿಸಿದ್ದರು.  

 ವೇದಿಕೆ ಮೇಲೆ ಅತೀರುದ್ರ ಮಹಾಯಜ್ಞ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಡಿ.ಆರ್‌.ಪಾಟೀಲ, ರವಿ ದಂಡಿನ, ಸಚಿನ ಡಿ.ಪಾಟೀಲ, ರಾಜು ಕುರಡಗಿ, ಬಸವರಾಜ ಬಿಂಗಿ, ಪ್ರಕಾಶ ಬೊಮ್ಮನಹಳ್ಳಿ, ವಿನೋದ ಶಿದ್ಲಿಂಗ, ರುದ್ರಣ್ಣ ಗುಳಗುಳಿ, ಆರ್‌.ಡಿ.ಕಡ್ಲಿಕೊಪ್ಪ, ಸಂತೋಷ ಚನ್ನಪ್ಪನವರ, ರಾಘು ಭಾರಡ, ಎಂ.ಸಿ.ಐಲಿ, ಶ್ರೀನಿವಾಸ ಬಾಂಡಗೆ, ವಿಜಯಲಕ್ಷ್ಮೀ ಮಾನ್ವಿ, ಪ್ರೀತಿ ಹೊನ್ನಗುಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

 ಈ ಕಾರ್ಯಕ್ರಮದಲ್ಲಿ ಪ್ರೋ.ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಎಸ್‌. ಎಚ್‌.ಶಿವನಗೌಡ್ರ ವಂದಿಸಿದರು.