ದಿ 29 ರಿಂದ 12ನೇ ಸತೀಶ ಪ್ರತಿಭಾ ಪುರಸ್ಕಾರ
The 29th to the 12th Satish Pratibha Awards
ಯಮಕನಮರಡಿ 28: ಪ್ರತಿಭೆಗಳಲ್ಲಿ ಸೂಕ್ತವಾಗಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ರಾಷ್ಟ್ರಮಟ್ಟಕ್ಕೆ ಪರಿಚಯಿಸುವ ಕಾರ್ಯ ಕಳೆದ 11 ವರ್ಷಗಳಿಂದ ಸತೀಶ ಜಾರಕಿಹೊಳಿ ಫೌಂಡೇಶನನಿಂದ ಮಾಡಲಾಗುತ್ತಿದೆ ಎಂದು ಯುವ ದುರೀಣ ಕಿರಣಸಿಂಗ ರಜಪೂತ ಹೇಳಿದರು.
ಅವರು ಶುಕ್ರವಾರ ದಿ 28 ರಂದು ಯಮಕನಮರಡಿ ಎನ್.ಎಸ್.ಎಫ್ ಪ್ರೌಢಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇದೇ ಶನಿವಾರ ದಿ 29 ರವಿವಾರ ದಿ 30 ರಂದು ಸತೀಶ ಜಾರಕಿಹೊಳಿ ಫೌಂಡೇಶನ ಪ್ರಾಯೋಜಕತ್ವದಲ್ಲಿ ಯಮಕನಮರಡಿಯ ಎನ್.ಎಸ್.ಎಫ್ ಪ್ರೌಢಶಾಲಾ ಆವರಣದಲ್ಲಿ 12ನೇಯ ಸತೀಶ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಹುಕ್ಕೇರಿ ತಾಲೂಕಾ ಹಾಗೂ ಕಡೋಲಿ ಮತ್ತು ಹುದಲಿ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಮೆರೆಯಲು ಸೂಕ್ತ ವೇದಿಕೆ ಕಲ್ಪಿಸಲಾಗಿದೆ. ಶನಿವಾರ ದಿ 29 ರಂದು ಸಂಜೆ 5:00 ಪ್ರೌಢಶಾಲಾ ಜಾನಪದ ಗಾಯನ ಪ್ರಾಥಮಿಕ ಶಾಲಾ ಗಾಯನ ಕಾಲೇಜು ಗಾಯನ ಪ್ರೌಢಶಾಲಾ ಜಾನಪದ ನೃತ್ಯದಲ್ಲಿ ಪ್ರಾಥಮಿಕ ಸಮೂಹ ನೃತ್ಯ ನಡೆಯಲಿದೆ. ಕಳೆದ ಬಾರಿಯ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಆಕಾಂಕ್ಷ ರೊಟ್ಟೆಯ್ಯನವರ ಅವರು 12 ನೇಯ ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಲಿದ್ದಾರೆ.
ಯಮಕನಮರಡಿ ಹುಣಸಿಕೊಳ್ಳ ಮಠದ ಶ್ರೀ ಗುರು ರಾಯಚೋಟಿ ಮಹಾಸ್ವಾಮಿಗಳು, ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಹತ್ತರಗಿ ಹರಿಮಂದಿರದ ಡಾ. ಆನಂದ ಮಹಾರಾಜ ಗೋಸಾವಿ ಸಾನಿಧ್ಯ ವಹಿಸಲಿದ್ದಾರೆ. ಯಮಕನಮರಡಿ ಗ್ರಾ.ಪಂ.ಅಧ್ಯಕ್ಷ ಆಸ್ಮಾ ಪನಿಬಂಧ, ಹತ್ತರಗಿ ಗ್ರಾ.ಪಂ ಅಧ್ಯಕ್ಷ ಸಮೀರ ಬೇಪಾರಿ, ಮತ್ತು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಾ ಪಾಟೀಲ, ಡಿ.ಡಿ.ಪಿ.ಐ ಸೀತಾರಾಮ ಇವರು ಆಗಮಿಸಲಿದ್ದಾರೆ.
ರವಿವಾರ ದಿ 30 ರಂದು ಕಾಲೇಜು ಜಾನಪದ ಗಾಯನ ಪ್ರೌಢಶಾಲಾ ಪ್ರಾಥಮಿಕ ಜಾನಪದ ನೃತ್ಯ ಕಾಲೇಜು ಸಮೂಹ ನೃತ್ಯ ಪ್ರಾಥಮಿಕ ಶಾಲಾ ಸಮೂಹ ನೃತ್ಯ ನಡೆಯಲಿದೆ ಸಮಾರೋಪದ ಅಧ್ಯಕ್ಷತೆಯನ್ನು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾಸ್ವಾಮಿಗಳು, ಉ.ಖಾನಾಪುರದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಸತ್ಕರಿಸಲಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಸಂಕೇಶ್ವರದ ಅಪ್ಪಾಸಾಹೇಬ ಶಿರಕೋಳಿ, ಕೃಷಿ ಕ್ಷೇತ್ರದಲ್ಲಿ ಸಿದ್ದಪ್ಪ ಕುಡಚಿ, ಸಂಗೀತ ಕ್ಷೇತ್ರದಲ್ಲಿ ಅಮೋಘ ದೇಶಪಾಂಡೆ, ವೈದ್ಯಕೀಯ ಕ್ಷೇತ್ರದಲ್ಲಿ ವಿಠ್ಠಲರಾವ್ ಬಾಂದುರ್ಗೆ ಕ್ರೀಡಾ ಕ್ಷೇತ್ರದಲ್ಲಿ ಈರ್ಪ ಘಸ್ತಿ ಇವರನ್ನು ಸತ್ಕರಿಸಲಾಗುವುದು. 800 ಜನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪಿಯುಸಿ ಪರೀಕ್ಷೆಯಲ್ಲಿ ಪ್ರಮಥ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 15,000 ಬಹುಮಾನ ನೀಡಲಾಗುವುದು. ಈ ಎರಡು ದಿನಗಳ ಕಾಲ ನಡೆಯಲಿರುವ ಸತೀಶ ಪ್ರತಿಭಾ ಪುರಸ್ಕಾರ ವಿಜೇತರಾದವರಿಗೆ ಒಟ್ಟು 10 ಲಕ್ಷ ರೂ ಬಹುಮಾನ ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಯುವದುರೀಣ ರವೀಂದ್ರ ಜಿಂಡ್ರಾಳಿ, ವೀರಣ್ಣ ಬಿಸಿರೊಟ್ಟಿ, ಹತ್ತರಗಿ ಗ್ರಾ.ಪಂ. ಅಧ್ಯಕ್ಷ ಸಮೀಪ ಬೇಪಾರಿ, ದಸ್ತಗಿರ ಬಸ್ಸಾಪುರಿ, ರಾಜು ಮಾರಾ್ಯಳಿ, ಸಿದ್ದಪ್ಪ ಸಿಳ್ಳಿ, ಗೀರೀಶ ಮಿಶ್ರಿಕೋಟಿ, ಶಶಿಕಾಂತ ಹಟ್ಟಿ, ಶಿವಶಂಕರ ಝುಟ್ಟಿ, ಮುಖ್ಯ ಶಿಕ್ಷಕ ಎ.ಎಸ್. ಅತ್ಯಾಳಿ, ಹಾಗೂ ಇನ್ನೀತರರು ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 