23 ನೇ ಪುಣ್ಯ ಸ್ಮರಣೆ ನಿಮಿತ್ಯ ಅಪ್ಪ ಅವ್ವ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಕೊಡಮಾಡುವ ಮಾಸ್ತರ ಪ್ರಶಸ್ತಿ

The 23rd Punya Smarane Nimitya Appa Avva Art, Literature and Cultural Association's Master Award

23 ನೇ ಪುಣ್ಯ ಸ್ಮರಣೆ ನಿಮಿತ್ಯ ಅಪ್ಪ ಅವ್ವ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಕೊಡಮಾಡುವ ಮಾಸ್ತರ ಪ್ರಶಸ್ತಿ 

ತಾಂಬಾ 16:  ಕನ್ನಡ ಸಾಹಿತ್ಯ ಬೇರೆ ಬೇರೆ ಶತಮಾನಗಳಲ್ಲಿ ತನ್ನ ಆಯಾಮಗಳನ್ನು ಬದಲಿಸುತ್ತ ಬಂದಿದೆ,  ಇದರಲ್ಲಿ ಪ್ರವಾಸ ಸಾಹಿತ್ಯವೂ ಒಂದು. ವ್ಯಕ್ತಿಯ ಅನುಪಸ್ಥಿತಿಯಲ್ಲಿ ಆ ಪ್ರದೇಶದ ವಸ್ತುನಿಷ್ಠ ಜ್ಞಾನ ನೀಡುವದರ ಜೊತೆಗೆ ಅಲ್ಲಿಯ ಕಲೆ ಸಾಹಿತ್ಯ ಸಂಸ್ಕೃತಿ ಸಂಪ್ರದಾಯ ಆಚರಣೆಗಳ ಕುರಿತು ಅಪಾರ ಜ್ಞಾನ ನೀಡುತ್ತದೆ ಎಂದು ಡಾ ಸಿದ್ಧಣ್ಣಾ ಉತ್ನಾಳ ಹೇಳಿದರು. ಬೆನಕನಹಳ್ಳಿ ಹರಳ್ಯನಹಟ್ಟಿ ಗ್ರಾಮದಲ್ಲಿ ದಿ ಚಂದ್ರಾಮ ಹೊನಕಟ್ಟಿ ಅವರ 23 ನೇ ಪುಣ್ಯ ಸ್ಮರಣೆ ನಿಮಿತ್ಯ ಅಪ್ಪ ಅವ್ವ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಕೊಡಮಾಡುವ ಮಾಸ್ತರ ಪ್ರಶಸ್ತಿ, ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಜ್ಯೋತಿಲಿಂರ್ಗ ಹೊನಕಟ್ಟಿ ಪೋಲಿಸ್ ವೃತ ನೀರೀಕ್ಷಕರು ಬರೆದ " ಬೆನಕನಹಳ್ಳಿ ಯಿಂದ ಮಸ್ಕತ್ ವರೆಗೆ" ಪ್ರವಾಸ ಕಥನ ಗ್ರಂಥ ಬಿಡುಗಡೆ ಮಾಡುತ್ತ ಈ ಗಂಥ ಓದುತ್ತಿರುವಾಗ ನಾವು ಮಸ್ಕತ್ ನಲ್ಲಿ ಸುತ್ತಾಡುತ್ತಿದ್ದೇವೆ ಎನ್ನುವ ಅನುಭವವಾಗುತ್ತದೆ. ಅಲ್ಲಿಯ ಕಲೆ ಸಾಹಿತ್ಯ, ಇತಿಹಾಸ, ಪ್ರೇಕ್ಷಣೀಯ ಸ್ಥಳಗಳು ಅದ್ಭುತ ಅನುಭವ ನೀಡುತ್ತವೆ, ಪ್ರವಾಸ ಮಾಡದೇ ಇರುವವರಿಗೆ ಜ್ಞಾನದ ಬಾಗಿಲು ತೆರೆದಂತಾಗುತ್ತದೆ, ಪ್ರವಾಸ ಕಥನ ಜ್ಞಾನದ ಭಂಡಾರವಾಗಿದೆ ಎಂದರು. ಪ್ರಸ್ತಾವಿಕವಾಗಿ ಮಾತನಾಡಿದ ಪೋಲಿಸ್ ವೃತ್ ನೀರೀಕ್ಷಕರಾದ ಜ್ಯೋತಿಲಿಂರ್ಗ ಹೊನಕಟ್ಟಿ ಮಾತನಾಡುತ್ತ ಬೆನಕನಹಳ್ಳಿ ಯಿಂದ ಮಸ್ಕತ್ ವರೆಗೆ ಸಾಗಿದ ಅನುಭವ ಹಂಚಿಕೊಡರು. ಸಣ್ಣ ಹಳ್ಳಿಯಿಂದ ಮಸ್ಕತ್ ವರೆಗೆ ಹೋಗಿ ಅಲ್ಲಿ ನಮ್ಮೂರಿನ ಜನಪದ  ಹಾಡುಗಳು ಹಾಡಿದ ತೃಪ್ತಿ ನನಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಬಸವರಾಜ ಇಂಡಿ ಮಾತನಾಡಿ ಬೆನಕನಹಳ್ಳಿ ಒಂದು ಸಣ್ಣ ಗ್ರಾಮ, ಸೌಲಭ್ಯಗಳು ಇಲ್ಲದೇ ಇರುವ ಗ್ರಾಮದಿಂದ ಜ್ಯೋತಿಲಿಂರ್ಗ ಸಿಪಿಐ ಬೆಂಗಳೂರು ಸಾಹೇಬರು ತಮ್ಮ ಸತತ ಪ್ರಯತ್ನದಿಂದ ಮಸ್ಕತ್ ವರೆಗೆ ಹೋಗಿ ಇಲ್ಲಿಯ ಜನಪದ ಸಾಹಿತ್ಯ ಅಲ್ಲಿ ಹರಡಿದ್ದು ಬೆನಕನಹಳ್ಳಿ ಗ್ರಾಮದ ಗೌರವ ಹೆಚ್ಚಿಸಿದ್ದಾರೆ ಎಂದರು. ಸಾನಿಧ್ಯ ವಹಿಸಿದ ಪ ಪೂ ಶ್ರೀ ಬಸವಲಿಂಗ ಸ್ವಾಮಿಗಳು ಮಾತನಾಡುತ್ತ ಜ್ಯೋತಿಲಿಂರ್ಗ ತಂದೆಯ ಸಂಸ್ಕಾರದಿಂದ ಹಿರಿಯರನ್ನು ನೆನೆಯುವದು ನಾಡಿನಲ್ಲಿ ಸಾಧನೆ ಮಾಡಿದವರನ್ನು ಕರೆಯಿಸಿ ಗೌರವಿಸುವದು ನಮಗೆ ಅತೀವ ಸಂತೋಷ ತಂದಿದೆ, ಧಕ್ಷ ಪೋಲಿಸ್ ಅಧಿಕಾರಿಯಾದ ಜ್ಯೋತಿಲಿಂರ್ಗ ಹೊನಕಟ್ಟಿ ಅವರು ನಮ್ಮ ಜಿಲ್ಲೆಯ ಹೆಸರು ತರುವ ಮಗನಾಗಲಿ ಎಂದು ಹಾರೈಸಿದರು. ಶ್ರೀ ಮನಿಪ್ರ ಜಗದೇವ ಮಲ್ಲಿಬೊಮ್ಮಯ್ಯ ವಿರಕ್ತ ಮಠ ಆಲಮೇಲ, ಆರ್ಶೀವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಸ್ತರ ಪ್ರಶಸ್ತಿ ಪುರಸ್ಕೃತರಾದ ಡಾ ವಿ ಡಿ ಐಹೊಳ್ಳಿ, ಎಂ ಎಂ ಅಂಗಡಿ, ಇಂಡಿ ಉಪವಿಭಾಗಾದ ಮಲುಗೌಡ ಝರೆ,  ಡಾ ಸಂಗಮೇಶ ಮೇತ್ರಿ, ಮುಂತಾದವರು ಮಾತನಾಡಿದರು, ಮೊದಲಿಗೆ  ಹೊನಕಟ್ಟಿ ಕಲಾ ಬಳಗದವರು ವಚನ ಗಾಯನ ಸಂಗೀತ ಕಾರ್ಯಕ್ರಮ ನಡೆಯಿಸಿದರು. ಚೌಡಪ್ಪ ಮೇತ್ರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ರಾಜಶೇಖರ ನಿಂಬರಗಿ, ಮಲ್ಲಿಕಾರ್ಜುನ ಮಠ, ಪಿಎಸ್ ಐ ಕಿರಣ ಕುಮಾರ, ವಿಠ್ಠಲ ಹೊನಕಟ್ಟಿ , ವಿಶ್ವನಾಥ ಹೊನಕಟ್ಟಿ, ಅಪ್ಪು ಇಂಡಿ ಮುಂತಾದವರು ಉಪಸ್ಥಿತಿ ಇದ್ದರು.