ಪಾಲೆಂಬಂಗ್ 23: 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ ಟ್ರ್ಯಪ್ ಶೂಟಿಂಗ್ ವಿಭಾಗದಲ್ಲಿ 15ರ ಹರೆಯದ ಭಾರತೀಯ ಶೂಟರ್ ಶಾರ್ದುಲ್ ವಿಹಾನ್ ಬೆಳ್ಳಿಪದಕ ಜಯಿಸಿದ್ದಾರೆ.
ಉತ್ತರ ಪ್ರದೇಶದ ಶಾರ್ದುಲ್ 73 ಅಂಕಗಳೊಡನೆ ಬೆಳ್ಳಿ ಜಯಿಸಿದ್ದಾರೆ. ಇದಕ್ಕಿಂತ ಒಂದೇ ಅಂಕ ಹೆಚ್ಚು (74) ಗಳಿಸಿದ್ದ (ಕೊರಿಯಾದ 34 ರ ಹರೆಯದ ಶಿನ್ ಹ್ಯುನ್ವೂ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಕಳೆದ ವರ್ಷ ನಡೆದಿದ್ದ ಶೂಟ್ ಗನ್ ನ್ಯಾಷನಲ್ ಚಾಂಪಿಯನ್ ಶಿಪ್ನಲ್ಲಿ ವಿಹಾನ್ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದರು.
ಶಾರ್ದುಲ್ ವಿಹಾನ್ ಏಷ್ಯಾಡ್ ನಲ್ಲಿ ಎರಡು ಚಿನ್ನ ಗೆದ್ದಿದ್ದ ಶುಟರ್ ಅನ್ವರ್ ಸುಲ್ತಾನ್ ಅವರ ಬಳಿ ತರಬೇತಿ ಪಡೆದಿದ್ದಾರೆ. ವಿಹಾನ್ ಕಳೆದ ವರ್ಷ ಮಾಸ್ಕೋದಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಆರನೇ ಸ್ಥಾನ ಪಡೆದಿದ್ದರು.