ಧಾರವಾಡ 11; ತಾಯ್ತನದ ಹೃದಯದೊಂದಿಗೆ ನಾಡಿನ ತುಂಬ ಅಪಾರ ಶಿಷ್ಯಬಳಗವನ್ನು ಹೊಂದಿದ್ದ ಡಾ. ವರದರಾಜ ಹುಯಿಲಗೋಳ ತಮ್ಮ ಸರಳ ಸಜ್ಜನಿಕೆ, ಹಾಗೂ ಸ್ನೇಹಮಯ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದ ಓರ್ವ ಆದರ್ಶ ಶಿಕ್ಷಕರಾಗಿದ್ದರು ಎಂದು ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟದ ಆಶ್ರಯದಲ್ಲಿ ದಿ. 10ರಂದು ಸಾಧನಕೇರಿಯ `ಚೈತ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ವರದರಾಜ ಹುಯಿಲಗೋಳರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಶಿಕ್ಷಕವೃತ್ತಿಯೊಂದಿಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃಷಿಗೈದ ಹುಯಿಲಗೋಳರು ಮಕ್ಕಳಿಗಾಗಿ ವಿವಿಧ ಕಥೆಗಳು ಮತ್ತು ಆದರ್ಶವ್ಯಕ್ತಿಗಳ, ದಾರ್ಶನಿಕರ ಜೀವನ ಚರಿತ್ರೆಗಳನ್ನು ಸಹ ರಚಿಸಿದ್ದು ಇವು ಹಿರಿಯರಿಗೂ ಉಪಯುಕ್ತವಾದ ರೀತಿಯಲ್ಲಿವೆ. ಕನರ್ಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತುಗಳಲ್ಲಿ ಪದಾಧಿಕಾರಿಗಳಾಗಿ ಅವರು ತೋರಿದ ಸಂಘಟನಾ ಚಾತುರ್ಯ, ದುರ್ಗಸಿಂಹನ ಪಂಚತಂತ್ರ ಕುರಿತಾದ ಅವರ ಪಿ.ಎಚ್.ಡಿ. ಪ್ರಬಂಧದ ಘನತೆಗಳು ಅವರ ನಿಸ್ವಾರ್ಥ ಕನ್ನಡ ಸೇವೆಯ ದ್ಯೋತಕವಾಗಿದ್ದು ಬೇಂದ್ರೆ, ಶಂಬಾರಂತಹ ದಿಗ್ಗಜರ ಒಡನಾಟ ಹೊಂದಿದ್ದ ವರದರಾಜರ ಸಮಗ್ರ ಸಾಹಿತ್ಯ ಸಂಪುಟಗಳು ಪ್ರಕಟಗೊಂಡು ಓದುಗರಿಗೆ ಸಿಗುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಿಟ್ಟಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಂ.ವಾಯ್. ಸಾವಂತ ಅವರು ಮಾತನಾಡಿ ವಿದ್ಯಾಥರ್ಿಗಳ ಮೇಲಿನ ಅಪಾರ ಪ್ರೇಮದಿಂದ ಗುರು-ಶಿಷ್ಯ ಪರಂಪರೆಗೊಂದು ಉತ್ತಮ ಕೊಡುಗೆಯಾಗಿದ್ದ ಡಾ. ವರದರಾಜರು ಕಿರಿಯರಿಗೆ ಒಬ್ಬ ಉತ್ತಮ ಮಾರ್ಗದಶರ್ಿಯೂ ಆಗಿದ್ದರು ಎಂದು ಅವರೊಂದಿಗಿನ ತಮ್ಮ ಆತ್ಮೀಯ ಸಂಬಂಧವನ್ನು ಸ್ಮರಿಸಿಕೊಂಡರು.
ನಂತರ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಮೀನಾಕ್ಷಿ ಕುಲಕಣರ್ಿಯವರು ಶರಣುಸಿದ್ಧಿ ವಿನಾಯಕ, ಶ್ರೀರಾಮ ಜಯರಾಮ, ಬಾರೋ ಮುರಾರಿ, ಕರುಣಿಸೆನ್ನ ಹರಿಯ ರಮಣಿ, ಅಭಂಗ ಮತ್ತು ಮೀರಾ ಭಜನ್ಗಳನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ಹಾಮರ್ೊನಿಯಂದಲ್ಲಿ ಕುಶಾಲ ಗಲಗಲಿ ಸಾಥ್ ನೀಡಿದರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಹ.ವೆಂ. ಕಾಖಂಡಿಕಿ, ಪ್ರೊ. ಸಿ.ವಿ. ವೇಣುಗೋಪಾಲ, ಪ್ರೊ. ಬಿ.ಎಸ್.ಶಿರೋಳ, ಪ್ರೊ. ದೀಪಕ ಆಲೂರ ಡಾ. ಗೋವಿಂದರಾಜ ತಳಕೋಡ, ಕೆ.ಎಮ್. ಅಂಗಡಿ, ಜಿ.ಬಿ.ಹೊಂಬಳ, ರಮೇಶ ಇಟ್ನಾಳ, ಎಚ್.ಎಂ.ಪಾಟೀಲ, ಕೆ.ಎನ್. ಹಬ್ಬು, ಎಸ್.ಗುರುನಾಥ, ಬದರೀ ವಿಶಾಲ, ಪರ್ವತೀಕರ ರಮೇಶ ನಾಡಗೀರ, ಶ್ರೀಪಾದ ವೈದ್ಯ, ಎಂ.ಎಂ.ಮಾನೆ, ರಾಜೀವ ಪಾಟೀಲಕುಲಕಣರ್ಿ, ಕೆ.ಎಸ್. ಘಾಣೇಕರ, ವಿನುತಾ ಹಂಚಿನಮನಿ, ಮುಂತಾದವರು ಉಪಸ್ಥಿತರಿದ್ದರು.