ಕನಕಮಾಲಾಧಾರಿಗಳಿಗೆ ಬೀಳ್ಕೊಡುಗೆ
ಲೋಕದರ್ಶನ ವರದಿ
ಗದಗ 27: ಭಕ್ತ ಕನಕದಾಸರ 531 ನೇ ಜಯಂತ್ಯೋತ್ಸವದ ಅಂಗವಾಗಿ ಕನಕಮಾಲಾಧಾರಿಗಳಾಗಿ ಕಾಗಿನೆಲೆಗೆ ತೆರಳುತ್ತಿರುವ ಹಾಲುಮತ ಮಹಾಸಭಾದ ಮಾಲಾಧಾರಿಗಳಿಗೆ ವಿಧಾನಪರಿಷತ್ ಸದಸ್ಯ ಎಸ್. ವಿ. ಸಂಕನೂರ ಹಾಗೂ ತಾಲೂಕು ಪಂಚಾಯತ ಅಧ್ಯಕ್ಷ ಮೋಹನ ದುರಗಣ್ಣವರ ಅವರು ಆತ್ಮೀಯವಾಗಿ ಬೀಳ್ಕೊಟ್ಟರು.
ಇದಕ್ಕೂ ಮುನ್ನ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಕನಕಮಾಲಾ ದಾರಿಗಳು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ರಾಯಣ್ಣ ಮೂತರ್ಿಗೆ ಹಾಗೂ ಕಿತ್ತೂರು ಚೆನ್ನಮ್ಮ ರಾಣಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಳಗುಂದ ನಾಕಾದಿಂದ ಕಾಗಿನೆಲೆಗೆ ಪ್ರಯಾಣ ಮುಂದುವರಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪೀರಸಾಬ ಕೌತಾಳ ಕನಕ ಮಾಲಾಧಾರಿಗಳಾಗಿ ಭಾಗವಹಿಸಿದ್ದರು. ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಜಿಲ್ಲಾಧ್ಯಕ್ಷ ನಾಗರಾಜ ಮೆಣಸಗಿ, ಪ್ರಧಾನ ಕಾರ್ಯದಶರ್ಿ ಸೋಮನಗೌಡ ಪಾಟೀಲ, ಜಿಲ್ಲಾ ಸಂಚಾಲಕರಾದ ಪ್ರಹ್ಲಾದ ಹೊಸಳ್ಳಿ, ರಮೇಶ ಹೊನ್ನಿನಾಯ್ಕರ, ಮೋಹನ ಇಮರಾಪೂರ, ಸಂಜಯ ಸಿಂದಿಗೇರಿ, ಕವಿತಾ ಕಾಶಪ್ಪನವರ, ಮಲ್ಲೇಶಪ್ಪ ಕೊಣ್ಣೂರ, ಜಗದೀಶ ಕಣಿವಿ, ಲಿಂಗರಾಜ ಬಗಲಿ, ಅಂದಪ್ಪ ಬಿಜ್ಜೂರ, ರಮೇಶ ಕಿಲಾರಿ, ಪರಶುರಾಮ ಅಬ್ಬಿಗೇರಿ, ಮಲ್ಲೇಶ ಬಿಂಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಸಂಗೊಳ್ಳಿ ರಾಯಣ್ಣನ ವೇಶದಾರಿ ಮುತ್ತು ಜಡಿ ಹಾಗೂ ಭಕ್ತ ಕನಕದಾಸರ ವೇಶದಾರಿ ರವಿ ಹಿಂಜೆಡ್ಡಿ ಅವರು ಜನತೆಯ ಗಮನ ಸೆಳೆದರು.
ಯುವ ಮುಖಂಡರಾದ ಹೇಮಂತ ಗಿಡ್ಡಹನುಮಣ್ಣವರ ಹಾಗೂ ಮಂಜು ಜಡಿ ಅವರ ನೇತೃತ್ವದಲ್ಲಿ ನೂರಾರು ಯುವಕರು ಬೈಕ್ ರ್ಯಾಲಿ ನಡೆಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 