ಟೋಕಿಯೊ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಿಂದ ಥಾಯ್ಲೆಂಡ್, ಮಲೇಷ್ಯಾಅಮಾನತು

ಬುಡಾಪೆಸ್ಟ್, ಏ 5 (ಯುಎನ್ಐ)ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ಥಾಯ್ಲೆಂಡ್ ಮತ್ತು ಮಲೇಷ್ಯಾದಲ್ಲಿ ನಡೆಯಲಿರುವ ವೇಟ್ ಲಿಫ್ಟಿಂಗ್ ನಲ್ಲಿ ಸ್ಪರ್ಧಿಸುವುದನ್ನು ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಒಕ್ಕೂಟದ ಸ್ವತಂತ್ರ ಸದಸ್ಯ ಒಕ್ಕೂಟ ನಿರ್ಬಂಧ ಸಮಿತಿ, (ಐಎಂಎಫ್ಎಸ್ ಪಿ) ಥಾಯ್ಲೆಂಡ್ ಮತ್ತು ಮಲೇಷ್ಯಾದ ಎರಡು ಒಕ್ಕೂಟಗಳಿಗೂ ನಿಷೇಧ ಹೇರಿದೆ. ಜತೆಗೆ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಂಪಿಕ್ಸ್ ನ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲೂ ಪಾಲ್ಗೊಳ್ಳುವುದಕ್ಕೂ ನಿಷೇಧ ವಿಧಿಸಿದೆ.ಥಾಯ್ ಅಮೆಚೂರ್ ವೇಟ್ ಲಿಫ್ಟಿಂಗ್ ಸಂಸ್ಥೆ (ಟಿಎಡಬ್ಲ್ಯುಎ) ಮತ್ತು ಮಲೇಷ್ಯಾ ವೇಟ್ ಲಿಫ್ಟಿಂಗ್ ಒಕ್ಕೂಟ (ಎಂಡಬ್ಲ್ಯುಎಫ್)ಕ್ಕೆ ಕ್ರಮವಾಗಿ ಮೂರು ಮತ್ತು ಒಂದು ವರ್ಷಗಳ ಕಾಲ ಐಎಂಎಫ್ ಪಿಎಸ್ ಅಮಾನತು ಮಾಡಿದೆ.
'' 2023ರ ಏಪ್ರಿಲ್ 1ರವರೆಗೆ ಮೂರು ವರ್ಷಗಳ ಕಾಲ ಟಿಎಡಬ್ಲ್ಯುಎನ ಸದಸ್ಯವ ಸ್ಥಾನಮಾನವನ್ನುಅಮಾನತು ಮಾಡಲಾಗಿದೆ. ಜತೆಗೆ ಎರಡು ವರ್ಷಗಳ ಕಾಲ ಟಿಎಡಬ್ಲ್ಯುಎ ಅಧಿಕಾರಿಗಳು ಅಮಾನತುಗೊಂಡಿದ್ದು, ಐಡಬ್ಲ್ಯುಎಫ್ ನ ಯಾವುದೇ ಹುದ್ದೆಗೆ ಅರ್ಹರಲ್ಲ. ಒಂದು ವೇಳೆ ಐಡಬ್ಲ್ಯುಎಫ್ ನ ನಿಯಮಗಳಿಗನುಗುಣವಾಗಿ ನಡೆದುಕೊಂಡಲ್ಲಿ 2022ರ ಮಾರ್ಚ್ 7ರ ನಂತರ ಟಿಎ ಡಬ್ಲ್ಯುಎಫ್ ನ ಮೂರು ವರ್ಷಗಳ ನಿಷೇಧ ಹಿಂಪಡೆಯುವ ಕುರಿತು ಪರಾಮರ್ಶಿಸಲಾಗುತ್ತದೆ,'' ಎಂದು ಐಡಬ್ಲ್ಯುಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.