ಪೂರ್ವ ಬುರ್ಕಿನಾ ಫಾಸೊದಲ್ಲಿ ಚರ್ಚ್ ಮೇಲೆ ಉಗ್ರರ ದಾಳಿ: ಕನಿಷ್ಠ 14 ಮಂದಿ ಸಾವು

ಮಾಸ್ಕೋ, ಡಿ 2-ಆಫ್ರಿಕಾದ ಬುರ್ಕಿನಾ ಫಾಸೊದ ಪೂರ್ವ ಭಾಗದಲ್ಲಿ ಉಗ್ರರು ಭಾನುವಾರ ಚರ್ಚ್ ಮೇಲೆ ದಾಳಿ ನಡೆಸಿ ಕನಿಷ್ಠ 14 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಬುರ್ಕಿನಾ ಫಾಸೊ ಅವರ ಇನ್ಫೋವಾಕಟ್ ಸುದ್ದಿವಾಹಿನಿಯ ಪ್ರಕಾರ, ಬಂದೂಕುಧಾರಿಗಳ ಉಗ್ರ ಗುಂಪು ಫೌಟೌರಿ ವಿಭಾಗದಲ್ಲಿರುವ ಚರ್ಚ್‌ಗೆ ನುಗ್ಗಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಮನೋಸೋಚ್ಛೆ ಗುಂಡು ಹಾರಿಸಿದೆ.

 ಇದಲ್ಲದೆ, ಅಪರಿಚಿತ ಉಗ್ರರು ದಾಳಿ ಚರ್ಚ್‌ನಿಂದ ಸ್ವಲ್ಪ ದೂರದಲ್ಲಿನ ಭದ್ರತಾ ಪಡೆಗಳ ನೆಲೆಗಳ ಮೇಲೂ ದಾಳಿ ನಡೆಸಿ ಮೂವರು ಅಧಿಕಾರಿಗಳನ್ನು ಕೊಂದಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರರ ಸಂಘಟನೆ ಹೊತ್ತಿಲ್ಲ. ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ (ಎರಡೂ ಸಂಘಟನೆಗಳನ್ನು ರಷ್ಯಾದಲ್ಲಿ ನಿಷೇಧಿಸಲಾಗಿದೆ)ಗಳೊಂದಿಗೆ ನಂಟು ಹೊಂದಿರುವ ಇಸ್ಲಾಮಿಸ್ಟ್ ಗುಂಪುಗಳ ಕೃತ್ಯಗಳಿಂದ ಬುರ್ಕಿನಾ ಫಾಸೊ 2016 ರಿಂದ ನಲುಗುತ್ತಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.