ಜಾಗೃತಿ ವಿಡಿಯೊ ಬಳಿಕ ತೆಂಡೂಲ್ಕರ್ ದಾನ
ನವದೆಹಲಿ, ಮಾ 27 ಜಾಗತಿಕವಾಗಿ
ಭಯಭೀತಗೊಳಿಸಿರುವ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ ಸರಕಾರಕ್ಕೆ
ಹಲವು ಕ್ರೀಡಾಪಟುಗಳು ಈಗಾಗಲೇ ನೆರವಿನ ಹಸ್ತ ಚಾಚಿದ್ದಾರೆ. ಇದೀಗ ಮಾಸ್ಟರ್ ಬ್ಲಾಸ್ಟರ್
ಸಚಿನ್ ತೆಂಡೂಲ್ಕರ್ ಸಹ ಸರಕಾರಕ್ಕೆ 50 ಲಕ್ಷ ರೂ. ನೆರವು ಘೋಷಿಸಿದ್ದಾರೆ.ಇತ್ತೀಚೆಗಷ್ಟೇ
ತಮ್ಮ ಟ್ವೀಟರ್ ಖಾತೆಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಕುರಿತಾದ ವಿಡಿಯೋ ಸಂದೇಶ
ಹಂಚಿಕೊಂಡಿದ್ದ ಸಚಿನ್, ಇದೀಗ ಜಾಗತಿಕ ಪಿಡುಗಾಗಿರುವ ಕೊರೊನಾ ವಿರುದ್ಧ ಹೋರಾಟಕ್ಕೆ 50
ಲಕ್ಷ ರೂಪಾಯಿ ನೀಡಲು ನಿರ್ಧರಿಸಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ''ಜಾಗೃತಿ
ಮೂಡಿಸುವ ನಿಟ್ಟಿನಲ್ಲಿ ನಿಯಮಿತವಾಗಿ ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುವ ಸಚಿನ್
ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 25
ಲಕ್ಷ ರೂ. ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಈ ಹಿಂದೆ ಅವರು, ಆಸ್ಟ್ರೇಲಿಯಾದಲ್ಲಿ
ಬುಷ್‌ಫೈರ್‌ನಂತಹ ದೇಣಿಗೆಗಳ ಭಾಗವಾಗಿದ್ದರು ಮತ್ತು ಈ ಪ್ರಯತ್ನದ ಸಮಯದಲ್ಲಿ
ಒಗ್ಗೂಡುವುದು ಮುಖ್ಯ ಎಂದು ನಂಬಿದ್ದಾರೆ,'' ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 