ಕರವಳ್ಳಿ ಗ್ರಾಮಕ್ಕೆ ವಾರಕೊಮ್ಮೆ ಹತ್ತುಕೊಡಗಳ ನೀರು ಪೂರೈಕೆ: ಚೌಡಳ್ಳಿ ಪಿಡಿಒ ಕಾರ್ಯವೈಖರಿಗೆ ಗ್ರಾಮಸ್ಥರ ಆಕ್ರೋಶ
Ten kodas of water supplied to Karavalli village once a week: Villagers outraged by Chaudalli PDO's
ಲೋಕದರ್ಶನ ವರದಿ
ಮುಂಡಗೋಡ 12: ಕಳೆದ ಮೂರು ತಿಂಗಳಿಂದ ಕಂಡುಬರುವ ಸನ್ನಿವೇಶವೆನಂದರೆ ನಳದ ಮೂಲಕ ನೀರು ಸರಬರಾಜಾಗುತ್ತಿರುವುದು ತಟಸ್ಥವಾಗಿದೆ. ನಳಗಳಿಂದ ಒಂದು; ಹನಿ ನೀರು; ತೊಟುಕುತ್ತಿಲ್ಲಾ ಗ್ರಾಮ ಪಂಚಾಯತ್‌ದಿಂದ ಗ್ರಾಮದಲ್ಲಿರುವ ಒಂದೊಂದು ಕುಟುಂಬಕ್ಕೆ ವಾರಕ್ಕೆ 10 ಕೊಡಗಳು ಸರಬರಾಜು ಮಾಡುತ್ತಿರುವುದರಿಂದ 10 ಕೊಡಗಳ ನೀರಿನಲ್ಲಿ ಅಡಿಗೆ ಮಾಡಬೇಕಾ, ಪಾತ್ರೆ ಪಗಡೆ ಬಟ್ಟೆ ತೊಳೆಯಬೇಕಾ, ಜಳಕ ಜಾಪತ್ರೆ ಮಾಡಬೇಕಾ, ನೀರು ಕುಡಿಯಬೇಕಾ ಬಟ್ಟೆಗಳು ಒಗೆಯಲಾರದೆ ಎಷ್ಟೊ ದಿನಗಳಾಗಿವೆ, ಜಳಕೆ ಮಾಡುವುದು 15-20 ದಿನಕೊಮ್ಮೆ ಹೀಗಾದರೆ ನಮ್ಮ ಬಾಳು ನಡೆಸುವುದಾದರು ಯೋಚಿಸಿ ಯೋಚಿಸಿ ಹುಚ್ಚು ಹಿಡಿದಂತಾಗಿದೆ. ನಾವು ಈ ಗ್ರಾಮದಿಂದಲೇ ಗೂಡಚಾಪಿ ಕಿತ್ತುಕೊಂಡು ಹೋಗುವಂತ ಸನ್ನಿವೇಶವನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ಮಾಡುತ್ತಿರುವುದು ಖಂಡನೀಯ ಹಾಗೂ ನಾವು ಅಕ್ರೋಶ ವ್ಯಕ್ತಪಡಿಸುತ್ತೇವೆ ಎಂದು ನೀರಿನ ಆಕಾರದಿಂದ ನಲುಗತ್ತಿರುವ ಚೌಡಳ್ಳಿ ಪಂಚಾಯತ್ ವ್ಯಾಪ್ತಿಯ ಕರವಳ್ಳಿಯ ಗ್ರಾಮದಲ್ಲಿ ಗ್ರಾಮಸ್ಥರ ವೇದನೆಯ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತಂತೆ ಮಾಹಿತಿ ಪಡೆಯಲು ಹೋದ ಪತ್ರಕರ್ತರ ಮುಂದೆ ಖಾಲಿ ಕೊಡಗಳ ಪ್ರದರ್ಶನ ಮಾಡಿದ ಮಹಿಳೆಯರು ಸಂಬಂದಿಸಿದ ಪಿಡಿಒ ಕುರಿತು ಅತ್ಯಂತ ಕಠೀಣ ಶಬ್ದಗಳಿಂದ ಅಕ್ರೋಶ ವ್ಯಕ್ತಪಡಿಸಿ ನೋಡ್ರಿ ಸರ್ ನಮಗೆ ಕಳೆದು ಸುಮಾರು 3 ತಿಂಗಳಿಂದ ನೀರಿನ ಆಭಾವವಾಗಿದೆ. ಗ್ರಾಮದಲ್ಲಿ ಇದ್ದಂತಹ ಬೋರ್ ಒಣಗಿ ಹೋಗಿ ಒಂದು ಹನಿ ನೀರು ಬರುತ್ತಿಲ್ಲಾ. ಬಟ್ಟೆ, ಬಾಂಡೆಸಾಮಾನು ಕೆರೆಯಲ್ಲಿ ತೊಳೆದುಕೊಳ್ಳಬೇಕೆಂದರೆ ಕೆರೆಯು ಸಹ ಒಣಗಿ ಹೋಗಿದೆ. ಪ್ರತಿ ದಿನ ನೀರಿನ ಟ್ಯಾಂಕ್ ಕಳಿಸಿ ಪಿಡಿಒ ಸಾಹೇಬರೆ ಅಂತಾ ಅತ್ಯಂತ ದಯನಿಯವಾಗಿ ಕೇಳಿಕೊಂಡರೆ ಪ್ರತಿದಿನ ಟ್ಯಾಂಕರ್ ನೀರು ಕಳಿಸಲು ನಮ್ಮಲ್ಲಿ ಅನುದಾನವಿಲ್ಲ ಎಂದು ಗ್ರಾಮಸ್ಥರನ್ನು ಸಾಗಹಾಕುತ್ತಾರೆ. ವಾರಕ್ಕೊಮ್ಮ ಹತ್ತು ಕೊಡಗಳ ನೀರು ನೀಡಿದರೆ ಸಾಕಾಗುತ್ತಾ ಹಾಗೂ ಹೇಗೆ ಜೀವನ ನಿರ್ವಹಣೆ ಮಾಡುತ್ತಿರಿ ಎಂದು ಪ್ರಶ್ನಿಸಿದಾಗ ಮೇಲಿನಂತೆ ತಿಳಿಸಿದ್ದಾರೆ. ಅಲ್ಲದೆ ಬೋರವೆಲ್ ಇದ್ದಂತಹ ದೂರದ ಹೊಲಗದ್ದೆಗಳಿಗೆ ಹೋಗಿ ಒಂದೇರಡು ಕೊಡಗಳು ನೀರು ತಂದು ಹಾಗೋ ಹೀಗೂ ಜೀವನ ಅತ್ಯಂತ ಕಷ್ಟದ ಜೀವನ ಸಾಗಿಸುತ್ತಿದ್ದೀವೆ.
ಅಲ್ಲದೆ ಪ್ರತಿದಿನ ಬೊರವೆಲ್‌ನ ಮಾಲಿಕರು ಪ್ರತಿದಿನ ಬರಬೇಡಿ ನಮ್ಮ ಬೆಳಗಳಿಗೂ ನೀರು ಸಾಕಾಗುವುದಿಲ್ಲ ಎಂದು ತಿಳಿಸಿದ್ದರಿಂದ 2-3 ದಿನಕೊಮ್ಮೆ ನೀರು; ತರಲು ಹೋಗುತ್ತೇವೆ ಚೌಡಳ್ಳಿ ಪಂಚಾಯತ್ ಪಿಡಿಒ ಸಾಹೇಬರಿಗೆ ಸರ್ಕಾರದಿಂದ ಕುಡಿಯುವ ನೀರಿನ ಪೂರೈಕೆಗೆ ಅನುದಾನ ನೀಡುತ್ತಿಲ್ಲವೇ ಎಂದು ಪ್ರಶ್ನೆ ಉದ್ಭವಿಸುತ್ತದೆ ನೀರಿನ ಅಭಾವ ಇದ್ದಂತಹ ಗ್ರಾಮಗಳಿಗೆ ನೀರು ಪೂರೈಕೆ ಮಾಡಿದರೆ ಜಿಪಿಎಸ್ ಫೋಟೋ ಇರುತ್ತದೆ. ಪಿಡಿಒ ಸಾಹೇಬರು ತಮ್ಮ ಮೇಲಾಧಿಕಾರಿಗಳಿಗೆ ನೀರಿನ ಆಭಾವ ಇದ್ದಂತ ಗ್ರಾಮಗಳಿಗೆ ಪ್ರತಿದಿನ, ಇಲ್ಲವೆ ಎರಡು ದಿನಕೊಮ್ಮೆ ನೀರು ಸರಬರಾಜು ಮಾಡುತ್ತೇವೆ ಎಂದು ಹೇಳಿರಬಹುದಾ ಅದಕ್ಕಾಗಿ ಕಾರ್ಯಕ್ಷಮತೆಯ ಅಧಿಕಾರಿ ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಟಿ.ವಾಯ್.ದಾಸನಕೊಪ್ಪ ರ ಗಮನಕ್ಕೆ ಬಂದಿಲ್ಲಾಂತ ಕಾಣುತ್ತದೆ. ಗ್ರಾಮಸ್ಥರು ಮುಂದುವರೆದು 3 ತಿಂಗಳಿಂದ ನಮಗೆ ನೀರಿನ ತೊಂದರೆಯಾಗುತ್ತದೆ. ನಮಗೆ ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ನೀರು ಕೊಡುತ್ತಾರೆ ಎಂದು ನಮ್ಮ ಮುಂದೆ ಬಂದು ಹೇಳಲಿ ಉತ್ತರ ನೀಡುತ್ತೇವೆ, ನಮಗೆ ಈ ಗ್ರಾಮದ ನೀರಿನ ಕೊರತೆಯಿಂದ ಗ್ರಾಮ ಬೀಡುವುದೇ ಲೇಸು ಎಂಬ ತಿರ್ಮಾನಕ್ಕೆ ಬಂದಿದ್ದೇವೆ ಅಲ್ಲದೆ ಇಗಾಗಲೇ ಒಂದೇರಡು ಕುಟುಂಬಗಳು ಗ್ರಾಮವನ್ನು ತೊರೆದಿವೆ ಎಂದು ಗ್ರಾಮಸ್ಥರಿಂದ ಮಾತು ಕೇಳಿ ಬಂದಿತು.
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ 