ತಂತ್ರಜ್ಞಾನ ಇಂದು ಜೀವನದ ಅವಿಭಾಜ್ಯ ಅಂಗ: ಡಾ. ಪ್ರಮೋದ ಕುಮಾರ
Technology is an integral part of life today: Dr. Pramod Kumar
ಲೋಕದರ್ಶನ ವರದಿ
ತಂತ್ರಜ್ಞಾನ ಇಂದು ಜೀವನದ ಅವಿಭಾಜ್ಯ ಅಂಗ: ಡಾ. ಪ್ರಮೋದ ಕುಮಾರ
ಬೆಳಗಾವಿ 13: ಬಹುಶಿಸ್ತೀಯ (ಒಣಟಣಜಛಿಠಿಟಟಿಚಿಡಿಥಿ) ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕವಾಗಿ ಪ್ರತ್ಯೇಕವಾಗಿರುವ ವಿಜ್ಞಾನ, ಕಲೆ ಮತ್ತು ಮಾನವಿಕ ವಿಷಯಗಳನ್ನು ಸಂಯೋಜಿಸಲು, ಹೊಂದಿಕೊಳ್ಳಲು ಹಾಗೂ ಗ್ರಹಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಜಾಗತಿಕವಾಗಿರುವ ಸಂಕೀರ್ಣ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿ ವಿದ್ಯಾರ್ಥಿಗಳಲ್ಲಿ ವೈವಿಧ್ಯಮಯ ವೃತ್ತಿ ಮಾರ್ಗಗಳಿಗೆ ಅವಶ್ಯಕವಾಗಿರುವ ಕೌಶಲ್ಯಗಳನ್ನು ಒದಗಿಸಿ ವಿಮರ್ಶಾತ್ಮಕ ಚಿಂತನಾ ಶಕ್ತಿ, ಸೃಜನಶೀಲತೆ ಹಾಗೂ ಕ್ರಿಯಾತ್ಮಕವಾಗಿರುವ ಜ್ಞಾನವನ್ನು ಒದಗಿಸುತ್ತದೆ ಎಂದುಬೆಂಗಳೂರು ಕ್ರೆಸ್ಟ್ ವಿಶ್ವವಿದ್ಯಾಲಯ ಶಿಕ್ಷಣ ನಿಖಾಯಸಹಾಯಕ ಪ್ರಾಧ್ಯಾಪಕ ಡಾ. ಪ್ರಮೋದ ಕುಮಾರ ಎಂ.ಪಿ.ಎಂ ಅವರು ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇತ್ತೀಚಿಗೆ ಶಿಕ್ಷಣ ನಿಖಾಯ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಬಿ.ಇಡಿ ಮಹಾವಿದ್ಯಾಲಯಗಳ ಪ್ರಾಚಾರ್ಯರು ಹಾಗೂ ಬೋಧಕ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ 2 ದಿನಗಳ ಪಿ.ಎಂ ಉಷಾ (ಮೇರು) ಸಾಫ್ಟ್ ಕಂಪೊನೆಂಟ್ 22 ಅಡಿಯಲ್ಲಿ ಪದವಿಪೂರ್ವ ಹಂತದ ಬಹುಶಿಸ್ತೀಯ ಶೈಕ್ಷಣಿಕ ಕಾರ್ಯಕ್ರಮ ವಿಷಯದ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಇಂದು ಜೀವನದ ಅವಿಭಾಜ್ಯ ಅಂಗವಾಗಿದೆ. ಓಇಕ 2020 ಈ ಕುರಿತು ಸಮಗ್ರವಾಗಿ ವಿವರಿಸಿದೆ. ಹೆಚ್ಚಿನ ಅನ್ವೇಷಣಾತ್ಮಕ ವಿಷಯಗಳಿಗೆ ಓಇಕ 2020 ಮಹತ್ವ ನೀಡಿದೆ. ಈ ಶಿಕ್ಷಣ ನೀತಿ ಪರಿಚಯಿಸಿದ ಋಇಕ (ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮ )ವು 4 ವರ್ಷಗಳ ಇಂಟಿಗ್ರೇಟೆಡ್ ಶಿಕ್ಷಣ ಪದವಿ ಕಾರ್ಯಕ್ರಮವು ಬೋಧನಾ - ಕಲಿಕಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪರಿಣಿತಿ ಒದಗಿಸಿ, ಪದವಿಯ ಪ್ರಾರಂಭಿಕ ಹಂತದಿಂದಲೇ ಶಿಕ್ಷಣದ ಮೂಲ ಜ್ಞಾನ ಹಾಗೂ ಅಂತರ್ಗತವಾಗಿರುವ ಪ್ರಾಯೋಗಿಕ ಜ್ಞಾನ ಒದಗಿಸಲು ನೆರವಾಗುತ್ತದೆ. 2030ಕ್ಕೆ ಇದು ಜಾರಿಗೆ ಬರವುದರಿಂದ ಮಹಾವಿದ್ಯಾಲಯದವರು ಈ ಕುರಿತು ತಯಾರಿ ಮಾಡಿಕೊಳ್ಳಬೇಕೆಂದು ಹೇಳಿದರು.
ಪಿ. ಎಂ ಉಷಾ ಯೋಜನೆಯ ನೋಡಲ್ ಅಧಿಕಾರಿ ಡಾ. ನಂದಿನಿ ದೇವರಮನಿ ಅವರು ಬಹುಶಿಸ್ತೀಯ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ರಾ.ಚ.ವಿ ಸಿಂಡಿಕೇಟ್ ಸದಸ್ಯ ಜಗದೀಶ ಜೋಡಂಗಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಗಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ವಿದ್ಯಾರ್ಥಿಗಳಿಗೆ ಭವಿಷ್ಯ ಇಲ್ಲದಂತಾಗಿದೆ. ಕೌಶಲ್ಯಾಧಾರಿತ, ಉದ್ಯೋಗಾಧಾರಿತ ಶಿಕ್ಷಣ ಅವಶ್ಯವಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಕಾರ್ಯಕ್ರಮ ಅಧ್ಯಕ್ಷರನ್ನು ಶಿಕ್ಷಣ ನಿಖಾಯ ಪರವಾಗಿ ಗೌರವಿಸಲಾಯಿತು.
ಆಕಾಶ ಪಾಟೀಲ ಪ್ರಾರ್ಥಿಸಿದರು, ಡೀನ್ ಹಾಗೂ ಶಿಕ್ಷಣ ನಿಖಾಯ ಮುಖ್ಯಸ್ಥ ಡಾ ಸುಷ್ಮಾ ಆರ್, ಅವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಎಂ.ಇಡಿ ಪ್ರಶಿಕ್ಷಣಾರ್ಥಿ ವಿಶಾಲ ಹುಳ್ಳೊಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಕನಕಪ್ಪ ಪೂಜಾರ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ರಸನಾ ಹುಲಮನಿ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 