ಹುನಗುಂದ06: ಸ್ಪಧ್ರಾತ್ಮಕ ಯುಗದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳ ಶಿಕ್ಷಣ ಮಟ್ಟ ಹೆಚ್ಚಿಸುತ್ತದೆ ಎನ್ನುವ ದೃಷ್ಠಿಕೋನದಿಂದ ಸರ್ಕಾರ ವಿದ್ಯಾರ್ಥಿಗಳಿಗಾಗಿ ಲ್ಯಾಪಟಾಪ್ಗಳನ್ನು ನೀಡಿದ್ದು ಅದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದಜರ್ೆ ಕಾಲೇಜನಲ್ಲಿ ಹಮ್ಮಿಕೊಂಡಿದ್ದ 2019-20 ನೆಯ ಸಾಲಿನ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಲ್ಯಾಪ್ಟಾಪ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ 315 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿ ಮಾತನಾಡಿದ ಅವರು ಸರ್ಕಾರ ಪದವಿ ವಿದ್ಯಾರ್ಥಿಗಳಿಗಾಗಿ ನೀಡಿದ 30 ಸಾವಿರ ಬೆಲೆ ಬಾಳು ಲ್ಯಾಪ್ಟಾಪ್ನಲ್ಲಿ ಎಲ್ಲ ಕೋಸರ್ಿನ ಪಠ್ಯಕ್ರಮ,ಪ್ರಶ್ನೆ ಪತ್ರಿಕೆ ಸೇರಿದಂತೆ ಅನೇಕ ಮಾಹಿತಿಯನ್ನು ಒಳಗೊಂಡಿದ್ದು.ಇಂದು ಪ್ರತಿಯೊಂದು ಕ್ಷೇತ್ರಗಳು ಸ್ಪಧ್ರಾತ್ಮಕವಾಗಿದ್ದು ನಿರಂತರ ಅಧ್ಯಯನ ಮತ್ತು ಪರಿಶ್ರಮದ ಜೊತೆಗೆ ಈ ಲ್ಯಾಪ್ ಟಾಪ್ನ್ನು ಬಳಿಸಿಕೊಂಡು ಸ್ಪಧರ್ೆಯಲ್ಲಿ ವಿಜಯಶಾಲಿಯಾಗಿ ಒಳ್ಳೆಯ ಹುದ್ದೆಯನ್ನು ಪಡೆಯಲಿ ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜ್ಯದ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ಗಳನ್ನು ನೀಡಿದ್ದಾರೆ.ಅದನ್ನು ಸದ್ಭಳಕೆ ಮಾಡಿಕೊಂಡು ನಿಮ್ಮ ಉಜ್ವಲ ಭವಿಷ್ಯವನ್ನು ನಿಮರ್ಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ ಶಿಕ್ಷಣ ಮನುಷ್ಯನ್ನು ಅನಾಗರಿಕತೆಯಿಂದ ನಾಗರಿಕತೆಯಡೆಗೆ ಕರೆದ್ಯೂಯುವ ಸೇತುವೆಯಾಗಿದೆ.ದೇಶದ ಅಭಿವೃದ್ದಿಯು ಆ ದೇಶದ ಶಿಕ್ಷಣ ಗುಣಮಟ್ಟದ ಮೇಲೆ ನಿಂತಿದೆ.ಶಿಕ್ಷಣ ಎಲ್ಲರ ಪಾಲಾಗಬೇಕು ಎನ್ನುವ ಉದ್ದೇಶದಿಂದ ಇಂದು ಪದವಿ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಲ್ಯಾಪ್ ಟಾಪ್ ನೀಡಿದೆ ಎಂದರು. ಈ ಸಂದರ್ಭದಲ್ಲಿ 1 ಕೋಟಿಗೂ ಅಧಿಕ ಹಣದಲ್ಲಿ 315 ವಿದ್ಯಾಥರ್ಿಗಳಿಗೆ ಶಾಸಕರು ಲ್ಯಾಪ್ ಟಾಪ್ನ್ನು ವಿತರಿಸಿದರು.ಅಧ್ಯಕ್ಷತೆಯನ್ನು ಕಾಲೇಜ ಪ್ರಾಚಾರ್ಯ ಎಸ್.ಕೆ.ಜಮಾದಾರ ವಹಿಸಿಕೊಂಡು ಮಾತನಾಡಿದರು. ಎಸ್.ಎಲ್.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಚನ್ನಬಸಪ್ಪ ಹೊನವಾಡ,ಮಹೇಶ ಬೆಳ್ಳಿಹಾಳ,ಎಸ್.ಎನ್.ಹುನಕುಂಟಿ, ಗುರಬಸಪ್ಪಗೌಡ ಪಾಟೀಲ, ಮಹಾಂತೇಶ ರೇವಡಿ, ಮಂಜುನಾಥ ಕಿರಸೂರ, ಸುಭಾಸ ಮುಕ್ಕಣ್ಣವರ, ಸಂಗಣ್ಣ ಕಡಪಟ್ಟಿ, ತಿಮ್ಮನಗೌಡ ದಾದ್ಮಿ, ಮಲ್ಲೇಶ ಹುನಗುಂದ,ಮಂಜುನಾಥ ಕೊಡಾಗನೂರ, ಚನ್ನಮಲ್ಲಮ್ಮ ಹಲಕಾವಟಗಿ, ಮುಖಂಡ ಮಲ್ಲು ಚೂರಿ, ಸಿಪಿಐ ಅಯ್ಯನಗೌಡ ಪಾಟೀಲ ಸೇರಿದಂತೆ ಅನೇಕರು ವೇದಿಕೆಯಲ್ಲಿ ಇದ್ದರು. ಗಾಯಿತ್ರಿ ದಾದ್ಮಿ ಸ್ವಾಗತಿಸಿದರು, ಐಕ್ಯೂಎ.ಸಿ.ಸಂಯೋಜಕ ಪ್ರೋ.ಖಾಜಾವಾಲಿ ಈಚನಾಳ ನಿರೂಪಿಸಿದರು, ಶ್ರೀದೇವಿ ಕಡಿವಾಲ ವಂದಿಸಿದರು.