ನವದೆಹಲಿ, ಜು 15 (ಯುಎನ್ಐ) ಮಾನವರಹಿತ ಮಹತ್ವಾಕಾಂಕ್ಷೆಯ ಸದಿ್ಲ್ಘ್ಖ್ಣುೂ-2 ಬಾಹ್ಯಾಕಾಶ ಯೋಜನೆಯ ಉಡಾವಣೆಯ ಒಂದು ಗಂಟೆ ಮೊದಲು ಅದರಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೋ ಸೋಮವಾರ ತಿಳಿಸಿದೆ. ಈ ಅಭಿಯಾನವನ್ನು ಬಂಗಾಳಕೊಲ್ಲಿಯ ತೀರದಲ್ಲಿರುವ ಶ್ರೀಹರಿಕೋಟ ಉಡಾವಣಾ ಸ್ಥಳದಿಂದ ಸ್ಥಳೀಯ ಕಾಲಮಾನ 251ಕ್ಕೆ (21:21 ಜಿಎಂಟಿ) ಉಡಾವಣೆ ಮಾಡಿ, ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯಲು ನಿರ್ಧರಿಸಲಾಗಿತ್ತು, ಈ ಸ್ಥಳವನ್ನು ಇದುವರೆಗೆ ಯಾವುದೇ ಸಂಸ್ಥೆ ತಲುಪಿಲ್ಲ. ಚಂದ್ರಯಾನ-2 ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ವಾಹನ ವ್ಯವಸ್ಥೆಯಲ್ಲಿ ಉಡ್ಡಯನಕ್ಕೆ ಒಂದು ತಾಸು ಮೊದಲು ತಾಂತ್ರಿಕ ಸಮಸ್ಯೆಯೊಂದು ಪತ್ತೆಯಾಯಿತು. ಮುಂಜಾಗೃತಾ ಕ್ರಮವಾಗಿ ಚಂದ್ರಯಾನ-2ರ ಉಡ್ಡಯನವನ್ನು ಇಂದು ರದ್ದುಪಡಿಸಲು ನಿರ್ಧರಿಸಲಾಯಿತು. ಹೊಸ ದಿನಾಂಕಗಳನ್ನು ನಂತರ ಘೋಷಿಸಲಾಗುವುದು ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿತು. ಚಂದ್ರಯಾನ -2 ಭಾರತದ ಎರಡನೇ ಚಂದ್ರ ಪರಿಶೋಧನಾ ಕಾರ್ಯಾಚರಣೆಯಾಗಿದ್ದು, ಚಂದ್ರಯಾನ -1 ಬಾಹ್ಯಾಕಾಶ ನೌಕೆ 2008ರಲ್ಲಿ ಚಂದ್ರನಲ್ಲಿಗೆ ಕಳುಹಿಸಲಾಗಿತ್ತು. ಮೊದಲ ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆ ಮತ್ತು ಲ್ಯಾಂಡರ್ ಅನ್ನು ಒಳಗೊಂಡಿತ್ತು, ಆದರೆ ಎರಡನೇ ಮಿಷನ್ ಹೆಚ್ಚು ಸುಧಾರಿತ ಮತ್ತು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಹೊಂದಿದೆ. ಉಡಾವಣೆಯನ್ನು ಏಪ್ರಿಲ್ 2018 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಬಹಿರಂಗಪಡಿಸಲಾಗದ ಕೆಲವು ಕಾರಣಗಳಿಂದಾಗಿ ಅದನ್ನು ಹಲವು ಬಾರಿ ಮುಂದೂಡಲಾಯಿತು. ಚಂದ್ರನ ಮೇಲೆ ಮನುಷ್ಯ ಹೆಜ್ಜೆ ಇಟ್ಟ 50ನೇ ವರ್ಷಾಚರಣೆಗೆ ಕೇವಲ ಐದು ದಿನಗಳ ಮೊದಲು ಭಾರತದ ಮಹತ್ವದ ಬಾಹ್ಯಾಕಾಶ ಸಾಹಸಕ್ಕೆ ದಿನಾಂಕ ನಿಗದಿಯಾಗಿತ್ತು. ಅಮೆರಿಕದ ನೀಲ್ ಆರ್ಮ್ ಸ್ಟ್ರಾಂಗ್ ಮೊದಲ ಬಾರಿಗೆ ಚಂದ್ರನ ಮೇಲೆ ಹೆಜ್ಜೆ ಇಟ್ಟ ದಿನ ಜುಲೈ 20, 1969. ಚಂದ್ರಯಾನ-2 ಉಡ್ಡಯನಕ್ಕೆ ಇಸ್ರೋ ದಿನಾಂಕ ನಿಗದಿಪಡಿಸುವಲ್ಲಿ ಈ ಅಂಶವನ್ನೂ ಈ ಹಿಂದೆ ಗಮನದಲ್ಲಿ ಇರಿಸಿಕೊಂಡಿತ್ತು. ಅಭಿಯಾನದ ಲ್ಯಾಂಡರ್ಗೆ ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯ್ ಅವರ ಹೆಸರಿನ ವಿಕ್ರಮ್ ಎಂದು ಹೆಸರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪ್ರಜ್ಞಾನ್ (ಬುದ್ಧಿವಂತಿಕೆ) ಎಂಬ ಸಣ್ಣ ರೋವರ್ ಇದ್ದು, ಇದು ಚಂದ್ರನ ಮೇಲ್ಮೈಯ ಖನಿಜ ಮತ್ತು ರಾಸಾಯನಿಕ ಸಂಯೋಜನೆಯನ್ನು ಅಧ್ಯಯನ ಮಾಡುತ್ತದೆ, ಆದರೆ ಮೂಲ ವಾಹನ ಸುಮಾರು 100 ಕಿ.ಮೀ ದೂರದಲ್ಲಿ ಚಂದ್ರನನ್ನು ಸುತ್ತುತ್ತಾ ಅಲ್ಲಿನ ಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸುತ್ತದೆ. ಚಂದ್ರಯಾನ-2 ಉಡ್ಡಯನಕ್ಕೆ ಜುಲೈ 15, 16, 29 ಮತ್ತು 30 ಸೂಕ್ತ ದಿನಗಳೆಂದು ಗುರುತಿಸಲಾಗಿತ್ತು. ಇದೀಗ ಜುಲೈ 15ರಂದು ನೌಕೆ ನಭಕ್ಕೆ ನೆಗೆಯಲಿಲ್ಲ. ತಾಂತ್ರಿಕ ಪರಿಶೀಲನೆಗೆ ಕನಿಷ್ಠ 10 ದಿನಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. 'ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಹಚ್ಚಿ ಸರಿಪಡಿಸಲು ಕಾಲಾವಕಾಶ ಬೇಕು. ಬಹುಶಃ ಸೆಪ್ಟೆಂಬರ್ ತಿಂಗಳಲ್ಲಿ ಮುಂದಿನ ದಿನಾಂಕ ನಿಗದಿಪಡಿಸಬಹುದು' ಎನ್ನುವ ಇಸ್ರೋ ಮೂಲಗಳು ತಿಳಿಸಿವ