26ರಂದು ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಹಾಗೂ ಸಾಂಸ್ಕೃತಿಕ ಮಿಲಾಂಜೆ 2026 ಕಾರ್ಯಕ್ರಮ

26ರಂದು ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಹಾಗೂ ಸಾಂಸ್ಕೃತಿಕ ಮಿಲಾಂಜೆ 2026 ಕಾರ್ಯಕ್ರಮ Technical and Cultural Milanje 2026 program at Agadi Engineering College on 26th

ಲಕ್ಷ್ಮೇಶ್ವರ" 23 :  ಗದಗ ಜಿಲ್ಲೆಯಲ್ಲಿ ಉನ್ನತ ಮಟ್ಟದ ಇಂಜಿನಿಯರಿಂಗ್ ಕಾಲೇಜ್ ಎಂದು ಹೆಸರು ವಾಸಿಯಾದ  ಪಟ್ಟಣದ ಶ್ರೀಮತಿ ಕಮಲಾ ಮತ್ತು ವೆಂಕಪ್ಪ ಆಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿ 25 .26 ರಂದು ತಾಂತ್ರಿಕ ಹಾಗೂ ಸಾಂಸ್ಕೃತಿಕ 2026 ಮಿಲಾಂಜಿ ಹಾಗೂ ಪದವಿ ಪ್ರಧಾನ ಕಾರ್ಯಕ್ರಮಗಳು ಜರಗುವುದು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಹೇಳಿದರು.

ಅವರು ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ತಾಂತ್ರಿಕ ಹಾಗೂ ಸಾಂಸ್ಕೃತಿಕ ಮಿಲಾಂಜಿ 26 ಪದವಿ ಪ್ರಧಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಹೇಶ ಪಾಟೀಲ್ ಭಾಗವಹಿಸುವವರು ಮುಖ್ಯ ಸಂಘಟಕರಾಗಿ ಡಾ. ಗೀರೀಶ ಯತ್ತಿನಹಳ್ಳಿ ಅವರು ಕಾರ್ಯ ವಹಿಸುವವರು ಮುಖ್ಯ ಸಲಹೆಗಾರನಾಗಿ ಡಾ. ಸುಭಾಷ್ ಮೇಟಿ ವಹಿಸುವವರು ಹಾಗೂ ಕಾಲೇಜಿನ ಆಡಳಿತ ಮಂಡಳಿಯವರು ವಹಿಸುವರು.

ದಿ -26 ರಂದು ಪದವೀಧರ ದಿನವಾಗಿ ಆಚರಣೆ ಮಾಡಲಾಗುವುದು ಮುಖ್ಯ ಅತಿಥಿಯಾಗಿ ಸುರೇಶ ಕುಲಕರ್ಣಿ ಭಾಗವಹಿಸುವವರು ಅತಿಥಿಯಾಗಿ ಡಾ.ರಾಘವೇಂದ್ರ ಮತ್ತು ಚಂದ್ರಮೌಳಿ ಹಾಗೂ ಲಕ್ಷ್ಮಣ ಪಾಟೀಲ್ ಡಾ.ಸುಭಾಷ್ ಮೇಟಿ ವಿಕ್ರಮ ಶಿರೋಳ ಭಾಗವಹಿಸುವವರು. ಈ ಒಂದು ಕಾರ್ಯಕ್ರಮಕ್ಕೆ ನಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಪಾಲಕರು ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು