ಲೋಕದರ್ಶನ ವರದಿ
ಬೆಳಗಾವಿ, 12: ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಅಭಿಯಾಂತ್ರಿಕ ವಿಭಾಗ ಎರಡು ದಿನಗಳ ತಾಂತ್ರಿಕ ಮೇಳ ಟೆಕ್ನೋ ಸ್ಪಾಕರ್್ -2019 ಇತ್ತೀಚಿಗೆ ಜರುಗಿತು. ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯ ಪುಣೆಯ ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿರುವ ಶ್ರೀಮತಿ ಹೇಮಾವತಿ ಕೋರಾಳಿ ಇದನ್ನು ಉದ್ಘಾಟಿಸಿದರು. ವಿದ್ಯಾಥರ್ಿಗಳನ್ನು ಉದ್ದೇಶಿಶಿ ಮಾತನಾಡಿದ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಕ್ಷೀಪ್ರ ಬೆಳವಣಿಗೆಗಳ ಬಗ್ಗೆ ತಿಳಿಸಿದರು ಅದರ ಜೊತೆಗೆ ಇಂಟನರ್ೆಟ್ ಆಫ್ ಥಿಂಗ್ಸ್, ಬ್ಲಾಕ್ ಚೈನ್ ,ಮಷೀನ್ ಲನರ್ಿಂಗ್ ಬಗ್ಗೆ ಹೇಳಿದರು.
ಎರಡು ದಿನಗಳ ನಡೆದ ಈ ಮೇಳದಲ್ಲಿ ಇಂಟನರ್ೆಟ್ ಆಫ್ ಥಿಂಗ್ಸ್ ಮೇಲೆ ವಸ್ತು/ವಿಕಲ್ಪಗಳ ಪ್ರದರ್ಶನ, ತಾಂತ್ರಿಕ ಚಚರ್ಾ ಕೂಟಗಳು, ಡಿಸೈನ್ ಥಿಂಕಿಂಗ್ ಸ್ಪಧ, ಮೊಬೈಲ್ ಆಪ್ ಡೆವಲಪ್ಮೆಂಟ್, ಅಲೋಗೋರಿದಮ್ ಡಿಸೈನ್ ಹೀಗೆ ಹಲವು ಸ್ಪಧರ್ೆಗಳಲ್ಲಿ 200ಕ್ಕೋ ಹೆಚ್ಚು ವಿದ್ಯಾಥರ್ಿಗಳು ಭಾಗವಹಸಿದ್ದರು.
ವಿಭಾಗದ ಮುಖ್ಯಸ್ಥ ಡಾ. ಹರೀಶ್ ಎಚ್. ಕೆಂಚೆನ್ನವರ ಸ್ವಾಗತ ಭಾಷಣ ಮಾಡಿದರು. ಮೇಳದ ಸಂಯೋಜಕರಾದ ಪ್ರೊ. ಎಸ. ಬಿ. ದೇಶಪಾಂಡೆ ಹಾಗೂ ಪ್ರೊ. ಎಸ. ಡಿ. ಪೇರೂರು, ಸಿಬ್ಬಂದಿ ವರ್ಗ ನೂರಕ್ಕೂ ಹೆಚ್ಚಿನ ವಿದ್ಯಾಥರ್ಿಗಳು ಈ ಸಮಯದಲ್ಲಿ ಹಾಜರಿದ್ದರು.