ಕೆಜಿಗೆ 40 ರಿಂದ 60 ರೂಪಾಯಿವರೆಗೆ ಮಾರಾಟ | ಮಹಾರಾಷ್ಟ್ರದಿಂದ ಹೆಚ್ಚಿನ ಉತ್ಪನ್ನ ಆಗಮನ ಕರಗಿದ ಈರುಳ್ಳಿ ಕಣ್ಣೀರು, ಹೊಟ್ಟೆಯುರಿ ತಂದ ಖಾರ

ಸದಾನಂದ ಮಜತಿ

ಬೆಳಗಾವಿ: ಮೂರು ತಿಂಗಳಿಂದ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ದರ ಇಳಿಮುಖಗೊಂಡಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಹಾರಾಷ್ಟ್ರದಿಂದ ಹೊಸ ಈರುಳ್ಳಿ ಆವಕ ಹೆಚ್ಚಿದ್ದರಿಂದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಆದರೆ, ಈಗ ಒಣಮೆಣಸಿನಕಾಯಿ ದರ ಗಗನಕ್ಕೇರಿದ್ದು, ಗ್ರಾಹಕರ ಹೊಟ್ಟೆಯುರಿಗೆ ಕಾರಣವಾಗಿದೆ.

ಸದ್ಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಈರುಳ್ಳಿಗೆ 3500 ರಿಂದ 4500 ರೂ.ವರೆಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40 ರಿಂದ 60 ರೂ.ವರೆಗೆ ಮಾರಾಟವಾಗುತ್ತಿದೆ. 

ನೆರೆ ಹಾಗೂ ಬರದಿಂದ ಮುಂಗಾರು ಹಂಗಾಮಿನ ಈರುಳ್ಳಿ ಬೆಳೆ ರೈತರ ಕೈ ಸೇರಿರಲಿಲ್ಲ. ಮಹಾರಾಷ್ಟ್ರ ಹಾಗೂ ಉತ್ತರ ಕನರ್ಾಟಕದಲ್ಲಿ ಅತಿವೃಷ್ಟಿ ಮಳೆಗೆ ಈರುಳ್ಳಿ ಬೆಳೆ ನಷ್ಟವಾಗಿತ್ತು. ಒಂದೆಡೆ ವಿಜಯಪುರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಸೇರಿ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬೆಳೆ ನಷ್ಟವಾಗಿ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬಾರದ್ದರಿಂದ ದರ ಗಗನಮುಖಿಯಾಗಿ ಕೆಜಿಗೆ 200 ರೂ.ವರೆಗೂ ತಲುಪಿತ್ತು. ಮೂರು ತಿಂಗಳ ಅವಧಿಯಲ್ಲಿ ಈರುಳ್ಳಿ ದರ ಕೆಜಿಗೆ 100 ರೂ.ಗಿಂತ ಕಡಿಮೆ ಆಗಿರಲಿಲ್ಲ. 

ಅಡುಗೆ ಮೇಲೆ ಈರುಳ್ಳಿ ದರ ಏರಿಕೆ ಪ್ರಭಾವ

ಈರಳ್ಳಿ ದರ ಹೆಚ್ಚಳ ಜನಸಾಮಾನ್ಯರ ಜೀವನದ ಮೇಲೆ ಭಾರಿ ಪ್ರಭಾವ ಬೀರಿತ್ತು. ಈರುಳ್ಳಿ ಇಲ್ಲದಿದ್ದರೆ ದಿನದ ಅಡುಗೆಯೇ ಇಲ್ಲ ಎಂಬುವಷ್ಟರ ಮಟ್ಟಿಗೆ ಭಾರತೀಯರ ಅಡುಗೆ ಮನೆ ಆವರಿಸಿಕೊಂಡಿದೆ. ಆದರೆ ದರ ಕೆಜಿಗೆ ನೂರರ ಗಡಿ ದಾಟಿದ್ದರಿಂದ ಜನರು ಅಳೆದು ತೂಗಿ ಬಳಸುವಂತಾಗಿತ್ತು. ಎರಡು, ಮೂರು ಕೆಜಿ ಕೊಳ್ಳಲು ಮಾರುಕಟ್ಟೆಗೆ ಬಂದವರು ದರ ಕೇಳಿ ಕೆಜಿ, ಅರ್ಧ ಕೆಜಿ ಖರೀದಿಸಿ 15-20 ದಿನಗಳವರೆಗೆ ಆಗುವಂತೆ ನೋಡಿಕೊಳ್ಳುತ್ತಿದ್ದರು.ಇನ್ನು ಹೋಟೆಲ್, ರೆಸ್ಟೋರೆಂಟ್ ಹಾಗೂ ಖಾನಾವಳಿಯಲ್ಲಂತೂ ಈರುಳ್ಳಿ ಸಿಗಲ್ಲ ಎಂಬ ಬೋಡರ್್ಗಳನ್ನು ಹಾಕಲಾಗಿತ್ತು. ಕೆಲವೊಂದು ಬಾರಿ ಈರುಳ್ಳಿ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರ ನಡುವಿನ ಜಗಳಕ್ಕೂ ಕಾರಣವಾಗಿತ್ತು. 

ಮಹಾರಾಷ್ಟ್ರದಿಂದ ಹೆಚ್ಚಿನ ಇರುಳ್ಳಿ ಆವಕ

ಮಹಾರಾಷ್ಟ್ರ ಹಾಗೂ ಕನರ್ಾಟಕದಲ್ಲಿ ಈರುಳ್ಳಿ  ಪ್ರಮುಖ ವಾಣಿಜ್ಯ ಬೆಳೆ. ಬಾಗಲಕೋಟೆ, ಧಾರವಾಡ, ಹಾವೇರಿ, ಚಿತ್ರದುರ್ಗ ದಾವಣಗೆರೆ ಜಿಲ್ಲೆಯ ರೈತರು ಈರುಳ್ಳಿ ಬೆಳೆ ನಂಬಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಎರಡನೇ ಹಂತದಲ್ಲಿ ಬಿತ್ತನೆ ಮಾಡಿದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಕನರ್ಾಟಕದ ಬಹುತೇಕ ನಗರಗಳಿಗೆ ಮಹಾರಾಷ್ಟ್ರ ಇರುಳ್ಳಿ ಪೂರೈಕೆ ಆಗುತ್ತಿದೆ.

ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ರೈತರು ಈರುಳ್ಳಿ ಕಿತ್ತು ನೇರವಾಗಿ ಮಾರುಕಟ್ಟೆಗೆ ತರುತ್ತಿದ್ದಾರೆ. ಹಸಿಗಡ್ಡೆಯನ್ನು ಹೆಚ್ಚು ದಿನ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ವ್ಯಾಪಾರಸ್ಥರಿಗೂ ಹೆಚ್ಚು ಖರೀದಿಸಿ ದಾಸ್ತಾನು ಮಾಡಿಕೊಳ್ಳಲು ಸಾಧ್ಯವಿಲ್ಲ. ಈರುಳ್ಳಿ ಮೇಲಿನ ಸಿಪ್ಪೆ ಒಣಗಿದ ಬಳಿಕ ಅದರ ಮೌಲ್ಯವೂ ಕಡಿಮೆಯಾಗುತ್ತದೆ. ಹಾಗಾಗಿ ಬಂದ ಈರುಳ್ಳಿಯನ್ನು ಮಾರಾಟಕ್ಕಿಡಲಾಗುತ್ತಿದೆ. 

ಇನ್ನೂ ಕಡಿಮೆಯಾಗುವ ನಿರೀಕ್ಷೆ

ಮುಂಗಾರು ಅವಧಿಯಲ್ಲಿ ಈರುಳ್ಳಿಗೆ ಚಿನ್ನದ ಬೆಲೆ ಬಂದ ಬಳಿಕ ರೈತರು ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುಳ್ಳಿ ಬಿತ್ತನೆ ಮಾಡಿದ್ದಾರೆ. ಇದು ಮಾರುಕಟ್ಟೆಗೆ ಬರಲು ಇನ್ನೂ 20 ದಿನ ಬೇಕು. ಹೀಗಾಗಿ ಫೆಬ್ರವರಿ ವೇಳೆಗೆ ಈರುಳ್ಳಿ ಬೆಲೆ ಇನ್ನೂ ಕುಸಿತ ಕಾಣುವ ನಿರೀಕ್ಷೆ ಇದೆ ಎನ್ನುತ್ತಾರೆ ಎಪಿಎಂಸಿ ವ್ಯಾಪಾರಸ್ಥರು.

ಬೆಳಗಾವಿ ಮಾರುಕಟ್ಟೆಗೆ ಪ್ರತಿನಿತ್ಯ 1200ಕ್ಕೂ ಅಧಿಕ ಕ್ವಿಂಟಾಲ್ ಈರುಳ್ಳಿ ಬರುತ್ತಿದೆ. ಬಹುತೇಕ ಇರುಳ್ಳಿ ಮಹಾರಾಷ್ಟ್ರದಿಂದ ಬರುತ್ತಿದ್ದು, ದಿನದಿಂದ ದಿನಕ್ಕೆ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ರಾಜ್ಯದಲ್ಲಿನ ಹಿಂಗಾರು ಬೆಳೆ ಬರಲು ಇನ್ನೂ ಒಂದೂವರೆ ತಿಂಗಳ ಅವಧಿ ಇದೆ. ಇದು ಮಾರುಕಟ್ಟೆಗೆ ಬಂದರೆ ಈರುಳ್ಳಿ ಬೆಲೆ ಕುಸಿಯುವ ಸಾಧ್ಯತೆಯಿದೆ. ಟಕರ್ಿ ಇರುಳ್ಳಿಯೂ ಮಾರುಕಟ್ಟೆಗೆ ಬಂದಿದೆ. ಆದರೆ ಅದು ಆಹಾರಕ್ಕೆ ಸ್ವಾದಿಷ್ಟವಿಲ್ಲ ಎನ್ನುವ ಕಾರಣಕ್ಕೆ ಅದನ್ನು ಯಾರೂ ಕೇಳುತ್ತಿಲ್ಲ ಎನ್ನುತ್ತಾರೆ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು.

ಗಡಿಯಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮಕ್ಕೆ ಕರವೇ ಒತ್ತಾಯ

ಬೆಳಗಾವಿ : ಜಿಲ್ಲೆಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಮಹಾರಾಷ್ಟದ ನಾಯಕರನ್ನು ಕರೆಸಿ ಗಡಿ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ಕೊಡಿಸುವ ಮೂಲಕ ಗಡಿಯಲ್ಲಿ ಅಶಾಂತಿಯನ್ನು ಉಂಟು ಮಾಡುವ ಕೆಲಸ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕನರ್ಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯೊಂದನ್ನು ಸಲ್ಲಿಸಲಾಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ದಿನದಂದು ಪ್ರತಿಭಟನೆ ನಡೆಸಿದ ಕನರ್ಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸಮ್ಮಿಶ್ರ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಗಡಿ ವಿವಾದ ಕೆದಕುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಗಡಿಭಾಗದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿ ತಮ್ಮ ಆಕ್ರೋಷ ವ್ಯಕ್ತಪಡಿಸಿದರು. 

ಗಡಿ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಆಯೋಜಿಸಿ ಮಹಾರಾಷ್ಟ್ರದಿಂದ ನಾಯಕರನ್ನು ಕರೆಸಿ ಪ್ರಚೋದನಕಾರಿ ಹೇಳಿಕೆ ಕೊಡಿಸುವ ಮೂಲಕ ಎಂಇಎಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಅಲ್ಲದೇ ಇದೇ ಜ.17ರಂದು ಹುತಾತ್ಮ ದಿನಾಚರಣೆಗೂ ಮಹಾರಾಷ್ಟ್ರ ನಾಯಕರು ಆಗಮಿಸುವ ಸಾಧ್ಯತೆಯಿದೆ. ಅಲ್ಲದೇ ನಿಪ್ಪಾಣಿಯಲ್ಲಿ ಎರಡು ದಿನಗಳ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಈ ವೇಳೆ ಮಹಾರಾಷ್ಟ್ರದ ಮುಖಂಡರನ್ನು ಕರೆಸಿ ಗಡಿ ಭಾಗದ ಹಳ್ಳಿಗಳಲ್ಲಿ ಮರಾಠಿಗರನ್ನು ಪ್ರಚೋದಿಸುವ ಹುನ್ನಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರಯತ್ನಗಳಿಗೆ ರಾಜ್ಯ ಸಕರ್ಾರ ಕಡಿವಾಣ ಹಾಕಲೇಬೇಕು. ತಕ್ಷಣವೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಗಡಿ ವಿಚಾರದಲ್ಲಿ ಕಠಿಣ ನಿಧರ್ಾರ ಕೈಗೊಳ್ಳಲು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಮಾತನಾಡಿ, ಗಡಿವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಎಂಇಎಸ್ನ ವಿರುದ್ದ ಕ್ರಮಕೈಗೋಳ್ಳುವಂತೆ ಒತ್ತಾಯಿಸಿದರು. ಅದೇ ರೀತಿ ಗಡಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಮರಾಠಿ ಸಾಹಿತಿಗಳು ಹಾಗೂ ಮಹಾರಾಷ್ಟ್ರ ಜನಪ್ರತಿನಿಧಿಗಳ ವಿರುದ್ಧ ಕೂಡಾ ಕಠಿಣ ಕ್ರಮ ಕೈಗೊಳ್ಳಬೇಕು. ಗಡಿ ವಿಚಾರದಲ್ಲಿ ಸಕರ್ಾರ ದಿಟ್ಟ ನಿಧರ್ಾರ ಕೈಗೊಳ್ಳದಿದ್ದರೆ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಸರಕಾರವನ್ನು ಎಚ್ಚರಿಸಿದರು. 

ಇಂದಿನ ಈ ಪ್ರತಿಭಟನೆಯಲ್ಲಿ ಗಣೇಶ ರೋಕಡೆ, ಯುವ ಘಟಕದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಹೊಳೆಪ್ಪ ಸುಲದಾಳ, ದೇವೇಂದ್ರ ತಳವಾರ, ಬಸವರಾಜ ಅವರೊಳ್ಳಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.