ಶಿಕ್ಷಕ ವೃತ್ತಿ ಬಹಳ ಪವಿತ್ರ: ಬಂಥನಾಳ ಶ್ರೀಗಳು
Teaching profession is very sacred: Banthanala Sri
ಸಿಂದಗಿ 14: ಮನೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲುಗುರು ಎನ್ನುವಂತೆ ತಾಯಿಯಿಂದ ಉಸಿರು ಬಂದರೆ ತಂದೆಯಿಂದ ಹೆಸರು ಬರುತ್ತದೆ ಆದರೆ ಗುರುವಿನಿಂದ ಪಡೆದ ಶಿಕ್ಷಣ ಜ್ಞಾನದ ಉಸಿರು ಇರುವರೆಗೆ ತಮ್ಮ ಹೆಸರು ಬರಲು ಶಿಕ್ಷಣ ಅವಶ್ಯಕವಿದೆ ಎಂದು ಬಂಥನಾಳ ಶ್ರೀಮಠದ ವೃಷಭಲಿಂಗೇಶ್ವರ ಮಹಾ ಶಿವಯೋಗಿಗಳು ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಜರುಗಿದ ಎನ್ ಕೆ ಚೌಧರಿ ಹಿರಿಯ ಮುಖ್ಯಗುರುಗಳು ವಯೋ ನಿವೃತ್ತಿ ಪ್ರಯುಕ್ತ ಎನ್ ಕೆ ಚೌಧರಿ ಸ್ನೇಹ ಬಳಗ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಂಗನಬಸವ ಶಿವಯೋಗಿಗಳು ಬಂಥನಾಳ ಮಠದ ಪ್ರಮುಖ ಯತಿಗಳು ಆಗಿದ್ದರೂ ಸಮಾಜ ಸುಧಾರಕರು ಅವರು ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ತಾಲೂಕಿನ ಬೂದಿಹಾಳ ಪಿ ಎಚ್ ಗ್ರಾಮದ ಸರಕಾರಿ ಶಾಲೆಗೆ ಗ್ರಾಮದ ಭಕ್ತ ಸಂಗನಬಸವ ಶಿವಯೋಗಿಗಳ ಜೋಳಗಿಗೆ ದಾನ ರೂಪವಾಗಿ ನೀಡಿರುವ ಜಾಗ ಮರಳಿ ಪಡೆಯುವದು ಸರಿಯಾದ ಮಾರ್ಗವಲ್ಲ. ಆ ಜಾಗದಲ್ಲಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು. ನಿವೃತ ಹಿರಿಯ ಮುಖ್ಯಗುರು ಎನ್ ಕೆ ಚೌಧರಿ ಅವರು ಎರಡು ಲಕ್ಷ ರೂಪಾಯಿ ಕಾಣಿಕೆ ನೀಡಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.
ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಅಜ್ಞಾನದ ಅಂಧಕಾರ ತೊಲಗಿಸಿಲು ಜ್ಞಾನದ ಬೆಳಕನ್ನು ನೀಡಲು ಗುರುವಿನ ಮಾರ್ಗದರ್ಶನ ಅವರ ಜವಾಬ್ದಾರಿ ಸಮಾಜದ ಮೇಲೆ ಇದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆಯ ಮೂಲಕ ಅರಿವು ತಿಳುವಳಿಕೆ ಜ್ಞಾನದ ಮೂಲಕ ಮಕ್ಕಳಿಗೆ ಆಸಕ್ತಿ ಮೂಡಿಸಬೇಕು. ಗ್ರಾಮದ ಸರಕಾರಿ ಶಾಲೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಪಾತ್ರ ಮೇಲು ಕಾಣಬೇಕು ಎಂದರು.
ವಿಶ್ರಾಂತ ಮುಖ್ಯಗುರು ಎನ್ ಕೆ ಚೌಧರಿ ಅವರು ಗ್ರಾಮದ ಶಾಲಾ ಅಭಿವೃದ್ಧಿಗಾಗಿ ಎರಡು ಲಕ್ಷ ರೂಪಾಯಿಗಳು ಶಾಲಾ ಮುಖ್ಯಗುರು ನಿರ್ಮಾಲ ಉಕ್ಕಲಿ ಹಾಗೂ ಶಿಕ್ಷಣ ಸಂಯೋಜಕ ಬಿ ಬಿ ಪಾಟೀಲರಿಗೆ ಶ್ರೀಗಳು ಹತ್ತಾಂತರ ಮಾಡಿದರು.
ಮುಖ್ಯಗುರು ಎಸ್ ಕೆ ಚೌಧರಿ ಸಿ ಆರ್ ಪಿ ಚಂದ್ರಶೇಖರ ಶಿರಕನಳ್ಳಿ ಹಾಗೂ ಎನ್ ಕೆ ಚೌಧರಿ ಮಾತನಾಡಿದರು. ಗ್ರಾಮದ ಹಿರೇಮಠದ ಅಪ್ಪಯ್ಯ ಹಿರೇಮಠ, ಕ ರಾ ಪ್ರಾ ಶಾ ಶಿ ಸಂ ಅಧ್ಯಕ್ಷ ಆನಂದ ಭೂಸನೂರ.ಸ ನೌ ಸಂ ಗೌರವ ಅಧ್ಯಕ್ಷ ಎಸ್ ಆಯ್ ರಾಂಪೂರ .ಕಾಶಿರಾಯ ಚೌಧರಿ .ವಿಶ್ರಾಂತ ಉಪ ತಹಶೀಲ್ದಾರ ಸಿ ಎಸ್ ಪಾಟೀಲ. ಮಾಜಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ ಕೆ ಕೊಣ್ಣೂರು .ಎನ್ ಕೆ ಚೌಧರಿ ದಂಪತಿಗಳು ವೇದಿಕೆ ಮೇಲೆ ಇದ್ದರು.
ರಾಗ ರಂಜನಿ ಸಂಗೀತ ನಿರ್ದೇಶಕ ಡಾ.ಪ್ರಕಾಶ ಪ್ರಾರ್ಥನೆ ಗೀತ ಹೇಳಿದರು. ಮುಖ್ಯ ಶಿಕ್ಷಕ ಸಿದ್ದಲಿಂಗ ಚೌಧರಿ ಸ್ವಾಗತಿಸಿ ವಂದಿಸಿದರು. ಉಪನ್ಯಾಸಕ ಶಿವುಕುಮಾರ ಗುಗ್ಗರಿ ನಿರೂಪಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 