ಶಿಕ್ಷಕ ವೃತ್ತಿ ಬಲು ದೊಡ್ಡದು: ರಮೇಶ ಕತ್ತಿ
Teaching profession is big: Ramesh Katthi
ಆಲಮೇಲ 06: ಶಿಕ್ಷಕ ವೃತ್ತಿ ಬಲು ದೊಡ್ಡದು, ಅದರ ಘನತೆಯನ್ನು ಕಾಪಿಟ್ಟುಕೊಳ್ಳುವವನೇ ನಿಜವಾದ ಶಿಕ್ಷಕ ಎಂದು ಡಾ.ರಮೇಶ ಕತ್ತಿ ಹೇಳಿದರು.
ಅವರು ತಾಲ್ಲೂಕಿನ ಮೋರಟಗಿ ಗ್ರಾಮದ ಸಿದ್ಧರಾಮೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೊಬೈಲ್ ಯುಗದಲ್ಲಿ ಪಠ್ಯಗಳು ಮಾಯಾವಾಗುತ್ತಿರುವುದು ಶೋಚನೀಯ ಸಂಗತಿ, ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲರಾಗಲು ಪುಸ್ತಕಗಳು ಸಹಾಯ ಮಾಡುತ್ತವೆ, ಮೊಬೈಲನಿಂದ ದೂರವಿದ್ದು ಪಠ್ಯಮತ್ತು ಸಾಂಸ್ಕೃತಿಕವಾಗಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್.ಪಾಟೀಲ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ. ವೀರಭದ್ರ ಗೋಲಾ ಮಾತನಾಡಿ 'ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಗಟ್ಟಿಗೊಳಿಸಲು ಆದರ್ಶತನ, ಪ್ರಾಮಾಣಿಕತೆಗಳು ಇಬ್ಬರಲ್ಲೂ ಬರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪ್ರೊ. ಎಸ್.ಎಂ.ಹರನಾಳ, ಪ್ರೊ. ಆರ್.ವೈ.ಕಂಬಾರ, ಪ್ರೊ. ವಿ.ಎಸ್.ಶಹಾಪೂರ, ಡಾ. ಐ.ಜಿ.ಕೋಣಶಿರಸಗಿ ಮಾತನಾಡಿದರು. ಸಂಸ್ಥೆಯ ಶಿಕ್ಷಕಿ ಆರ್ ವೈ ಚೌಗಲೆ ಮತ್ತು ಮಾಲಾಶ್ರೀ ಮಂದೇವಾಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿನೀಯರಾದ ಸಂಗೀತಾ ದುದ್ದಗಿ, ಜಯಶ್ರೀ ನಡುವಿನಮನಿ, ಯಶೋಧಾ ಮುಡೆ ಮಾತನಾಡಿದರು.
ಗೌರಿ ಶಾಬಾದಿ, ತ್ರಿವೇಣಿ, ವಿದ್ಯಾಶ್ರೀ ಪ್ರಾರ್ಥಿಸಿದರು. ಪ್ರತಿಭಾ ದುದ್ದಗಿ ಸ್ವಾಗತಸಿದರು. ಐಶ್ವರ್ಯ ತಳವಾರ ನಿರೂಪಿಸಿದರು. ಶಾಂತಾಬಾಯಿ ದುದ್ದಗಿ ವಂದಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 