ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಬೇಕು: ಟಿ.ಎಸ್‌.ವಂಟಗೂಡಿ

ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಬೇಕು: ಟಿ.ಎಸ್‌.ವಂಟಗೂಡಿ Teachers should teach in a way that touches the hearts of students: T.S. Vantagudi

ಪಾಲಬಾವಿ 02 :  ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜ್ಞಾನ ಬೆಳಗುವ ದಿವ್ಯ ಜ್ಯೋತಿಗಳಾಗಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಬೇಕು. ಪ್ರಪಂಚದಲ್ಲಿ ಜ್ಞಾನಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಜ್ಞಾನ ಜಗತ್ತನ್ನು ಆಳಬಲ್ಲದು. ಪ್ರತಿಯೊಬ್ಬ ವಿದ್ಯಾರ್ಥಿಯು ಗುರುವಿನ ಮಾರ್ಗದರ್ಶನದಲ್ಲಿ ನಡೆದು ಕಾಯಕ ಮಾಡಿ ನಾಯಕರಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮದೇ ಆದ ಸಾಧನೆಯಲ್ಲಿ ತಲ್ಲಿನರಾಗಿ, ಸಾಧನೆಯ ಶಿಖರ ಎರಬೇಕು. ಸಾಧನೆ ಮಾಡದಿದ್ದರೆ ಸಾವಿಗೆ ಅವಮಾನ ಎಂದು ತಾಲೂಕು ಕಸಾಪ ಕಾರ್ಯದರ್ಶಿ ಟಿ.ಎಸ್‌.ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.

ಅವರು ಹಿಡಕಲ್ಲ ಗ್ರಾಮದ ಸತ್ಯಪ್ರಭು ಶಿಕ್ಷಣ ಸಂಸ್ಥೆಯ ಲಕ್ಕಮ್ಮದೇವಿ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಶನಿವಾರ (ಫೇ.28) ರಂದು ಜರುಗಿದ ಸನ್‌.2025-26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ, 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೊಳ್ಳುವ ಸಮಾರಂಭ ಹಾಗೂ ಕಂಟೀಕಾರ ಉತ್ಸವ-2026ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನುವಹಿಸಿ ಉಪನ್ಯಾಸ ನೀಡಿದರು. ಮುರಗುಂಡಿಯ ಜಾನಪದ ಕಲಾವಿದ ಸುರೇಶ ವಾಗ್ಮೊಡೆ ಮಾತನಾಡುತ್ತ ಶಾಲೆ ಎಂಬ ದೇವಾಲಯದಲ್ಲಿ ವಿದ್ಯಾರ್ಥಿಗಳು ದೇವರು ಇದ್ದಂತೆ, ಶಿಕ್ಷಕರು ಪೂಜಾರಿಗಳಿದ್ದಂತೆ ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ನಡೆದು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದರು. ತಾಲೂಕು ಜಾನಪದ ಕಲಾ ಬಳಗದ ಅಧ್ಯಕ್ಷ ಭೀಮರಾವ್ ಘಂಟಿ ಮಾತನಾಡುತ್ತಾ ಪ್ರತಿಯೊಬ್ಬರೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಸಂವಿದಾನ ಶಿಲ್ಪಿ, ವಿಶ್ವಜ್ಞಾನಿ, ಡಾ:ಬಾಬಾಸಾಹೇಬ್ ಅಂಬೇಡ್ಕರ್, ಕ್ರಾಂತೀವೀರ ಸಂಗೊಳ್ಳಿ ರಾಯಣ್ಣರವರನ್ನ ಆದರ್ಶವಾಗಿಟ್ಟುಕೊಂಡು ಸಾರ್ಥಕ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ದತ್ತರಗಿ ಭಾಗಮ್ಮ ದೇವಸ್ಥಾನದ ಪೀಠಾಧಿಪತಿ ಶೀಲವಂತಿ ಅಮ್ಮನವರು ದಿವ್ಯ ಸಾನಿಧ್ಯವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಪಿ.ಕಂಟಿಕಾರ ಅಧ್ಯಕ್ಷತೆವಹಿಸಿದ್ದರು.  ವೇದಿಕೆಯ ಮೇಲೆ ಲಕ್ಷ್ಮಣ ತುಕಾನಟ್ಟಿ, ಆಡಳಿತಾಧಿಕಾರಿ ಭಗವಂತ ಕಂಟಿಕಾರ, ಕಾರ್ಯದರ್ಶಿ ಭುವನೇಶ್ವರಿ ಕಂಟಿಕಾರ, ಶಿಲ್ಪಾ ಕಂಠಿಕಾರ, ಸುಧಾ ಪತ್ತಾರ, ಪ್ರಿಯಾ ಕಾಂಬಳೆ, ಅಕ್ಷಯ ಪ್ರಾರ್ಥನಹಳ್ಳಿ, ಭಗವಂತ ಕಂಟಿಕಾರ, ಅಕ್ಷತಾ ಚಮಾಲಿ ಇತರರು ಇದ್ದರು. ಭಗವಂತ ಕಂಟಿಕಾರ ಸ್ವಾಗತಿಸಿದರು, ಪ್ರಧಾನಗುರು ಅಶೋಕ ಮಾಂಗ ನಿರೂಪಿಸಿ, ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು.