ಲೋಕದರ್ಶನ ವರದಿ
ಬೈಲಹೊಂಗಲ 18: ಇಂದಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದರಿಂದ ಭಾರತೀಯ ಗುರುಕುಲ ವ್ಯವಸ್ಥೆ ಹಾಗೂ ನಮ್ಮ ಹಿಂದಿನ ನಾಗರಿಕತೆಯನ್ನು ಮರೆಯುತ್ತಿರುವುದು ಬಹಳಷ್ಟು ವಿಷಾದನೀಯ ಸಂಗತಿಯಾಗಿದೆ ಎಂದು ಮುಂಡರಗಿ-ಬೈಲೂರ ತೋಂಟದಾರ್ಯ ಸಂಸ್ಥಾನ ಮಠದ ಪೀಠಾಧಿಪತಿ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ನೇಗಿನಹಾಳ ಗ್ರಾಮದ ಗುರುಬಸವೇಶ್ವರ ಪೂರ್ವ-ಪ್ರಾಥಮಿಕ ಶಾಲಾ ವಾಷೀಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಶಿಕ್ಷಕರು ಬುದ್ಧಿ-ಮತ್ತು ಮನಸ್ಸಿಗೆ ಶಿಕ್ಷಣ ನೀಡುವುದರ ಜೊತೆಗೆ ಹೃದಯಕ್ಕೆ ಶಿಕ್ಷಣ ನೀಡಿದರೆ ಮಾನವೀಯ ಮೌಲ್ಯಗಳನ್ನು ಅರಿತು ಉತ್ತಮ ಸಂಸ್ಕಾರಯುತ್ತ ಮಕ್ಕಳು ರೂಪಗೊಳ್ಳಲು ಸಾಧ್ಯ ಎಂದು ಹೇಳಿದರು.
ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವ ಸಿದ್ದಲಿಂಗ ಸ್ವಾಮಿಜಿ ಮಾತನಾಡಿ, ಒಂದು ಸಂಸ್ಥೆಯ ಬೆಳವಣಿಗೆ ಅಲ್ಲಿನ ಶಿಕ್ಷಣ ಮತ್ತು ವಾತಾವರಣದ ಮೇಲೆ ನಿಂತಿರುತ್ತದೆ. ನಮ್ಮ ಗ್ರಾಮ ಹಲವಾರು ವರ್ಷಗಳಿಂದ ದೇಶಕ್ಕೆ ಹಾಗೂ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿ ದಾಖಲೆ ಬರೆದಿದೆ. ಆದರೆ ಉನ್ನತ ಮಟ್ಟದ ಅಧಿಕಾರಿಗಳ ಸಂಖ್ಯೆ ಬಹಳ ವೀರಳವಾಗಿದೆ. ಇದೆಲ್ಲದ್ದಕ್ಕೂ ಪೂರಕವಾಗುವಂತೆ ನಮ್ಮೂರಿನಲ್ಲಿ ಈ ಶಾಲೆ ತೆರೆಯಲಾಗಿದೆ.
ಅಕ್ಕಮಹಾದೇವಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿ.ಬಿ ಗಣಾಚಾರಿ, ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ, ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿ, ಶಿಕ್ಷಕರು ಶಾಲೆಯಲ್ಲಿ ಕಲಿಸುವ ಶಿಕ್ಷಣಕ್ಕಿಂತ ಪಾಲಕರು ಮನೆಯಲ್ಲಿ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರದ ಶಿಕ್ಷಣ ನೀಡಬೇಕು ಜೊತೆಗೆ ಟಿ.ವ್ಹಿ, ಮೊಬೈಲ್ ನಿಂದ ದೂರವಿರಬೇಕೆಂದು ತಿಳಿಸಿದರು. ವೇದಿಕೆ ಮೇಲೆ ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಮಹಾದೇವಪ್ಪ ವಾಲಿ, ಗ್ರಾ.ಪಂ ಅದ್ಯಕ್ಷೆ ಸುವರ್ಣಾ ಕಾರಿಮನಿ, ಕಲಾವತಿ ಹತ್ತಿ, ಸುಶೀಲಾ ಗಾಣಗಿ, ಹನುಮಂತಪ್ಪ ತೋಟಗಿ, ಮಹಾರುದ್ರಪ್ಪ ಬೋಳೆತ್ತಿನ, ರವಿ ಅಂಗಡಿ, ಮಹಾದೇವ ಮಡಿವಾಳರ, ಚಿದಾನಂದ ಬೆಳಗಾವಿ, ಈರಣ್ಣಾ ಉಳವಿ, ಪ್ರಭು ಮರಿತಮ್ಮನವರ, ಮಡಿವಾಳಪ್ಪ ಮೆಳವಂಕಿ, ನಾಗರಾಜ ಕುಂಕೂರ, ಸಂಜು ಚೀಟಿನ, ಶಿವು ಮೆಟ್ಯಾಲ ಇದ್ದರು.
ಶಿಕ್ಷಕಿ ನಾಗಮ್ಮ ಅವರೊಳ್ಳಿ ನಿರೂಪಿಸಿದರು. ತೇಜು ಪಾಟೀಲ ಸ್ವಾಗತಿಸಿ, ವಂದಿಸಿದರು.