ಲೋಕದರ್ಶನ ವರದಿ
ಶಿರಹಟ್ಟಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣ ಹಾಗೂ ಸಂಸ್ಕಾರಯುತ ಜೀವನ ನಡೆಸಬೇಕಾದರೆ ಕುಟುಂಬದಲ್ಲಿ ಮೊದಲು ಪಾಲಕರು ಹಾಗೂ ಸಮಾಜದಲ್ಲಿ ಜೀವನ ಪೂರ್ತಿ ಬದುಕಲು ಶಾಲೆಗಳಲ್ಲಿ ಶಿಕ್ಷಕರ ಉತ್ತಮ ಮಾರ್ಗದರ್ಶನ ಸಿಕ್ಕಾಗ ಮಾತ್ರ ಉತ್ತಮ ಭವಿಷ್ಯ ರೂಪಗೊಳ್ಳಲು ಸಾಧ್ಯ ಎಂದು ಶಿರಹಟ್ಟಿ ಜಗದ್ಗುರು ಫಕ್ಕೀರ ಸಿದ್ಧರಾಮೇಶ್ವರ ಮಹಾ ಸ್ವಾಮಿಗಳು ಆಶೀರ್ವಚನ ಮಾಡಿದರು.
ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆದ 1988-89 ನೇ ಸಾಲಿನ 10 ನೇ ತರಗತಿ ಮತ್ತು ಪ್ರಾಥಮಿಕ ಶಾಲಾ ವಿದ್ಯಾಥರ್ಿ/ನಿಯರುಗಳು ಸೇರಿ ನಡೆಸಿದ ಗುರುವಂದನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಹಾಗೂ ಕಾರ್ಯಕ್ರಮದ ಉದ್ಗಾಟನೆ ನೆರವೇರಿಸಿ ಮುಂದುವರೆದು ಮಾತನಾಡುತ್ತಾ, ಈ ಜಗತ್ತಿನಲ್ಲಿ ಯಾವುದೇ ಉನ್ನತ ಸ್ಥಾನದಲ್ಲಿ ಒಬ್ಬ ವ್ಯಕ್ತಿ ಬೆಳೆದಿದ್ದಾನೆ ಎಂದರೆ ಅದರ ಹಿಂದೆ ಅದೇ ರೀತಿ ಒಬ್ಬ ಶಿಕ್ಷಕ ಅವಿರತವಾಗಿ ಕೆಲಸ ಮಾಡಿ ಅವನ ಬೆಳವಣಿಗೆಗೆ ಮೂಲ ಕಾರಣೀಭೂತರಾಗಿರುತ್ತಾನೆ. ಅಂದಿನ ಕಾಲದಲ್ಲಿ ಶಾಲೆ, ಶಿಕ್ಷಕರು ಹಾಗೂ ವಿಧ್ಯಾಥರ್ಿಗಳ ನಡುವೆ ಅವನಾಭಾವ ಸಂಬಂಧವಿರುತ್ತಿತ್ತು. ಶಿಕ್ಷಕರು ದೂರದಲ್ಲಿ ಕಂಡರೆ ಸಾಕು, ವಿದ್ಯಾಥರ್ಿಗಳು ಶಿಕ್ಷಕರ ದೃಷ್ಠಿಗೆ ಬೀಳದಂತೆ ಪಾರಾಗಿ ಗೌರವ ಕೊಡುತ್ತಿದ್ದರು. ಅಂತೇಯೇ ಗುರುಗಳು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವುದಲ್ಲದೇ ಸಂಸ್ಕಾರಯುತವಾದ ಹಾಗೂ ಸೃಜನಾತ್ಮಕ ಶಿಕ್ಷಣವನ್ನು ನೀಡಿ ಉತ್ತಮ ಭವಿಷ್ಯ ಹಾಗೂ ಸಮಾಜದಲ್ಲಿ ಉತ್ತಮ ಜೀವನ ನಡೆಸುವಂತೆ ಪಾಠ ಕಲಿಸುತ್ತಿದ್ದನ್ನು ನೋಡಿದರೇ ಇಂದು ನೀವೆಲ್ಲರೂ ಸೇರಿ ನಿಮಗೆ ಪಾಠಬೋಧನೆ ಮಾಡಿದ ಎಲ್ಲ ಗುರುಗಳು ಹಾಗೂ ಗುರುಮಾತೆಯರನ್ನು ಒಂದೇ ವೇದಿಕೆಯಲ್ಲಿ ಕರೆದು ಅವರಿಗೆ ಸನ್ಮಾನ ಮಾಡುವುದನ್ನು ನೋಡಿದರೆ ಈ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿ ಎಂದು ಹರ್ಷ ಪಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಜೆಎಫ್ಸಿ ಪ್ರೌಢ ಶಾಲೆ ಬೆಳ್ಳಟ್ಟಿಯ ನಿವೃತ್ತ ಮುಖ್ಯಾಧ್ಯಾಪಕ ಎಸ್.ಎಫ್ ಮಠಪತಿ ವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಗುರುವೃಂದ ಎನ್.ಎಂ ಜೋಷಿ, ಎಸ್ ಕೆ ಗಂಗಾಯಿ, ಎ.ಎ. ಕುಲಕಣರ್ಿ, ವಿ.ಬಿ ಮೆಣಸಿನಕಾಯಿ, ಮಹಾದೇವಪ್ಪ ಹೋಳಗಿ, ಎಸ್.ಎಸ್ ಬಾವಿಕಟ್ಟಿ, ಎಸ್.ಪಿ ಸವಣೂರ, ಎಸ್ ಎಂ ಜೋಷಿ, ಎನ್,ಎನ್ ಗುತ್ತೆಮ್ಮನವರ, ಪಿ.ಆರ್ ಸದರಜೋಷಿ ಹಾಗೂ ಎಸ್.ಎಸ್ ಗಂಗಾಯಿ ಅವರನ್ನು ಹಾಗೂ ಎಸ್.ಜೆ.ಎಫ್,ಸಿ ಪ್ರೌಢ ಶಾಲೆಯ ಗುರುವೃಂದ ಎಸ್.ಎಫ್ ಮಠಪತಿ, ಬಿ.ಆರ್ ಬಾತಾಖಾನಿ, ಎನ್.ಎಸ್ ಬಿಷ್ಟನಗೌಡ್ರ, ಜಿ.ವಿ ಬಸವಾ, ಬಿ.ಎಂ ಮಠದ, ಬಿ.ಎಂ ಯರಕದ, ಕೆ ಪತ್ರಯ್ಯ, ಎಫ್.ಪಿ ಮಠದ, ಎಚ್.ಎನ್ ಅನ್ವೇರಿ ಹಾಗೂ ವಿ.ಬಿ ಮುಳಗುಂದ ಅವರನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕುಮಾರ ಅಮೃತೇಶ ಹಿರೇಮಠ ಅವರ ಭರತನಾಟ್ಯ ಎಲ್ಲರ ಮನಸ್ಸನ್ನು ಸೂರಗೊಂಡಿತು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಈಶ್ವರ ಮೆಡ್ಲೇರಿ, ಸ್ವಾಗತವನ್ನು ಶಿಕ್ಷಕ ಸುರೇಶ ಮೇಕಳಿ, ಪ್ರಾಸ್ತಾವಿಕವಾಗಿ ಶಿಕ್ಷಕ ನವೀನ ಅಳವಂಡಿ, ಎಸ್ಜೆಎಫ್ಸಿ ಪ್ರೌಢ ಶಾಲೆಯ ಪ್ರಾದ್ಯಾಪಕ ಎಚ್. ಟಿ ಬಿಜ್ಜೂರ, ದುರೀಣ ಶಿವನಗೌಡ ಪಾಟೀಲ, ಜನಾರ್ಧನ, ರಾಘವೇಂದ್ರ ಇಚ್ಚಂಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಕ್ಕೀರವ್ವ ಬಾವಳ್ಳಿ, ನಾರಾರು 1988-89 ನೇ ಸಾಲಿನಲ್ಲಿ ಕಲೆತ ವಿಧ್ಯಾಥರ್ಿಗಳು ಹಾಗೂ ಎಲ್ಲ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.