ಗುಳೇದಗುಡ್ಡ13: ನಗರ ಪ್ರದೇಶದ ಮಕ್ಕಳ ಕಲಿಕಾಮಟ್ಟದ ಸುಧರಣೆಗೆ ಸಾಕಷ್ಟು ಅವಕಾಶಗಳಿದ್ದೂ ಅದೇ ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿ ಕಲಿಕಾಮಟ್ಟ ಸುಧರಣೆಗೆ ಶಿಕ್ಷಕರು ವಿಶೇಷ ಕಾಳಜಿವಹಿಸಿ ಹಾಕಿಕೊಂಡ ಯೋಜನೆ ಅಪರೂಪವಾಗಿದೆ. ಶಾಲಾ ಮಕ್ಕಳ ಗ್ರಾಮಗಳಿಗೆ ಹೋಗಿ ಅಲ್ಲಿನ ಮಕ್ಕಳು ಹಾಗೂ ಅವರ ಪಾಲಕರನ್ನು ಒಂದು ಮನೆಯಲ್ಲಿ ಸೇರಿಸಿ ಅವರ ಮಕ್ಕಳ ಅಭ್ಯಾಸದ ಗುಣಮಟ್ಟ, ಅಭ್ಯಾಸಕ್ಕಿರುವ ಅನಾನುಕೂಲಗಳನ್ನು ಗುಂಪು ಚಚರ್ೆ ಮೂಲಕ ಪರಿಹರಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ವಿನೂತನ ಪ್ರಯೋಗ ಮಾಡುತ್ತಿದ್ದಾರೆ ಇಲ್ಲಿನ ಶಿಕ್ಷಕರು.
ಹೌದು. ಈ ವಿನೂತನ ಪ್ರಯೋಗ ನಡೆದಿದ್ದು ಗುಳೇದಗುಡ್ಡದ ಬಾಲಕಿಯರ ಸಕರ್ಾರಿ ಪ್ರೌಢಶಾಲೆಯ ಶಿಕ್ಷಕರು ಮತ್ತು ಉಪಪ್ರಾಚಾರ್ಯ ರಲ್ಲಿ. ಕಳೆದ ಕೆಲವು ದಿನಗಳಿಂದ ಈ ಶಿಕ್ಷಕರ ತಂಡ ತಮ್ಮ ಶಾಲೆಯಲ್ಲಿ ಓದುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನಿಯರ ಗ್ರಾಮಗಳಿಗೆ ಶಾಲಾ ಅವಧಿಯ ನಂತರ ಸಾಯಂಕಾಲ ಭೇಟಿ ನೀಡುತ್ತಿದ್ದಾರೆ. ಗ್ರಾಮವೊಂದರ ಎಸ್ಸೆಸ್ಸೆಲ್ಸಿ ಓದುವ ಮಕ್ಕಳನ್ನು ಒಂದು ಮನೆಯಲ್ಲಿ ಅವರ ಪಾಲಕರೊಂದಿಗೆ ಸೇರಿಸಿ ಮಕ್ಕಳ ಕಲಿಕಾ ಮಟ್ಟವನ್ನು ಕೇಳಿ ತಿಳಿದು, ಅಭ್ಯಾಸಕ್ಕೆ ಅನುಕೂಲ, ಅನಾನುಕೂಲಗಳನ್ನು ತಿಳಿದು ಪಾಲಕರೊಂದಿಗೆ ಚಚರ್ಿಸುತ್ತಿದ್ದಾರೆ. ಮಕ್ಕಳಿಗೆ ಅಭ್ಯಾಸಕ್ಕೆ ಅನುಕೂಲ ಕಲ್ಪಿಸುವಂತೆ ಪಾಲಕರಿಗೆ ತಿಳುವಳಿಕೆ ನೀಡುವ, ಅವರಲ್ಲಿ ಅಧ್ಯಯನದ ಆಸಕ್ತಿ ಮೂಡಿಸುವ ಬಗೆಗೆ ಚರ್ಚೆ ನಡೆಯುತ್ತಿದೆ.
ಶಾಲಾ ಶಿಕ್ಷಕರೇ ಸ್ವತ: ತಮ್ಮ ಮನೆಗಳಿಗೆ ಬಂದು ಇಷ್ಟೊಂದು ಕಾಳಜಿವಹಿಸಿ ತಮ್ಮ ಮಕ್ಕಳ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವುದು ವಿಶೇಷವೆನಿಸಿದೆ. ಇದರಿಂದ ಪ್ರೇರಿತರಾದ ಪಾಲಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಅಭ್ಯಾಸಕ್ಕೆ ಉತ್ತಮ ವಾತಾವರಣ ಕಲ್ಪಿಸುವುದಾಗಿ ಶಿಕ್ಷಕರಿಗೆ ಭರವಸೆ ನೀಡುತ್ತಿದ್ದಾರೆಂದು ಉಪಪ್ರಾಚಾರ್ಯರು ಹೇಳುತ್ತಾರೆ.
ಅಲ್ಲೂರ ಎಸ್ಪಿ ಹಾಗೂ ಪಾದನಕಟ್ಟಿ ಗ್ರಾಮಗಳಿಂದ ಬರುವ ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗೆ ಭೇಟಿ ನೀಡಿ ಮಂಗಳವಾರ ಶಿಕ್ಷಕರು ಪಾಲಕರು ಹಾಗೂ ಮಕ್ಕಳೊಂದಿಗೆ ಸಮಾಲೋಚಿಸಿದರು. ಪರೀಕ್ಷಾ ಸಿದ್ದತೆ ಕುರಿತು ಚಚರ್ಿಸಿದರು. ಪರೀಕ್ಷಾ ಸಂದರ್ಭದಲ್ಲಿ ಮಕ್ಕಳಲ್ಲಿ ಅನಾರೋಗ್ಯ ಕಾಡದಂತೆ ಮುನ್ನೆಚ್ಚರಿಕೆವಹಿಸಲು ಶಿಕ್ಷಕರು ಪಾಲಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಮನೋಹರ ಚಲವಾದಿ ಮಾತನಾಡಿ, ಬರುವ ವಾಷರ್ಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಹೆಚ್ಚು ವೇಳೆ ಅಧ್ಯಯನ ಮಾಡಿರಿ. ನಾವೂ ಯಾರಿಗೇನು ಕಡಿಮೆ ಇಲ್ಲವೆಂದು ಗ್ರಾಮೀಣ ಮಕ್ಕಳು ಸಾಧಿಸಿ ತೋರಿಸಿರಿ. ಅಭ್ಯಾಸದಲ್ಲಿ ಏನಾದರೂ ತಿಳಿಯದಿದ್ದರೆ ಶಿಕ್ಷಕರಿಂದ ಕೇಳಿ ತಿಳಿದು ಸರಿಪಡಿಸಿಕೊಳ್ಳಿ. ಅದಕ್ಕೆ ಪಾಲಕರ ಸಹಕಾರವೂ ಅಗತ್ಯವೆಂದರು.
ಶಿಕ್ಷಕ ಚನಬಸಪ್ಪ ಕುರುಬರ ವಿದ್ಯಾಥರ್ಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಹಶಿಕ್ಷಕ ದೇವರಾಜ ಅಡ್ಡಿ ಹಾಗೂ ಇನ್ನಿತರ ಶಿಕ್ಷಕವರ್ಗ ಪಾಲ್ಗೊಂಡಿದ್ದರು.