ಲೋಕದರ್ಶನ ವರದಿ
ಹಾವೇರಿ 25: ವರ್ತಮಾನದ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾಥರ್ಿಗಳಿಗೆ ಉತ್ತಮ ಶಿಕ್ಷಣ ನೀಡಿ, ನೈಪುಣ್ಯತೆ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕೆ. ಎಲ್. ಇ. ಸಂಸ್ಥೆಯ ಆಡಳಿತ ಮಂಡಳಿ ನಿದರ್ೇಶಕ ಶಂಕ್ರಣ್ಣ ಮುನವಳ್ಳಿ ಹೇಳಿದರು.
ಅವರು ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ದ್ವಿತೀಯ ಪಿ.ಯು.ಸಿ. ವಿದ್ಯಾಥರ್ಿಗಳ ಪರೀಕ್ಷಾ ಫಲಿತಾಂಶ ಸುಧಾರಣಾ ಕ್ರಮದ ಕುರಿತು ಜರುಗಿದ ಚಚರ್ಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆಧುನಿಕ ಕಾಲಕ್ಕೆ ತಕ್ಕಂತೆ ವಿದ್ಯಾಥರ್ಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಮನೋಧೈರ್ಯ ತುಂಬುವ ಮೂಲಕ ಶಿಕ್ಷಣದ ಮೂಲಾರ್ಥವನ್ನು ತಿಳಿಸಬೇಕಿದೆ. ಜ್ಞಾನ ಮತ್ತು ಕಲಿಕೆಗೆ ಮಹತ್ವ ನೀಡುವ ದೆಸೆಯಲ್ಲಿ ಹಲವಾರು ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬುದ್ಧಿಮಟ್ಟವನ್ನು ಪ್ರಬಲಗೊಳಿಸಬೇಕಿದೆ.
ಈಗಿರುವ ವಾಷರ್ಿಕವಾರು ಫಲಿತಾಂಶಕ್ಕಿಂತ ಹೆಚ್ಚಿನ ಫಲಿತಾಂಶಗೊಳಿಸಲು ಉಪನ್ಯಾಸಕರಾದವರು ಹಲವು ಮಾದರಿ ಪ್ರಕಾರಗಳನ್ನು ಬಳಸಿ, ವಿಷಯದ ಸಮಗ್ರತೆ ಮತ್ತು ಆಸಕ್ತಿಯನ್ನು ಹೆಚ್ಚಿಸಬೇಕಿದೆ. ಕೆ.ಎಲ್.ಇ. ಸಂಸ್ಥೆಯು ನುರಿತ ತಜ್ಞರಿಂದ ವಿದ್ಯಾಥರ್ಿಗಳಿಗೋಸ್ಕರ ಚೈತನ್ಯದಾಯಕ ಪಾಠೋಪಕರಣಗಳನ್ನು ಸಿದ್ಧಗೊಳಿಸಿದ್ದು ಫಲಿತಾಂಶ ಸುಧಾರಣಾ ಸಾಮಗ್ರಿಗಳನ್ನು (ಕ್ಯಾಪ್ಸೂಲ್ಸ್) ನೀಡುತ್ತಿದೆ. ವಿಶೇಷವಾಗಿ ವಿಜ್ಞಾನ ವಿದ್ಯಾಥರ್ಿಗಳಿಗೆ ವಿಷಯವಾರು ಸಂಪೂರ್ಣ ಮಾಹಿತಿ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ಹುಬ್ಬಳ್ಳಿ ಪಿ.ಸಿ. ಜಾಬೀನ ಕಾಲೇಜಿನ ಡಾ|| ಹನುಮಗೌಡ ಹೆಚ್. ಮಾತನಾಡಿ ಪಾಸಿಂಗ್ ಕ್ಯಾಪ್ಸೂಲ್ಸ್ ಹಾಗೂ ಪರಿಹಾರ ಬೋಧನೆ ನೀಡುವ ಕುರಿತಾದ ಮಾಹಿತಿ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ಎಮ್. ಸಿ. ಕೊಳ್ಳಿ ವಿಷಯದ ಕುರಿತು ವಿದ್ಯಾಥರ್ಿಗಳೊಟ್ಟಿಗೆ ಚಚರ್ಿಸಿದರು. ಕಾಲೇಜಿನ ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷ ಪಿ. ಡಿ. ಶಿರೂರ ಮಾತನಾಡೊದರು. ಮಂಡಳಿಯ ಸದಸ್ಯ ಬಸವರಾಜ ಮಾಸೂರ, ಪದವಿ ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ಪ.ಪೂ. ಪ್ರಾಚಾರ್ಯ ಪ್ರೊ. ಜೆ. ಆರ್. ಶಿಂಧೆ ಹಾಗೂ ಸಂಸ್ಥೆಯ ಹಾವೇರಿ, ಹಾನಗಲ್, ರಾಣೆಬೆನ್ನೂರ ಕಾಲೇಜುಗಳ ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.