ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಶಿಕ್ಷಕರ ಪಾತ್ರ ಮುಖ್ಯ
ಕೊಪ್ಪಳ 15: ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಮಕ್ಕಳ ಶೈಕ್ಷಣಿಕ ಸುಧಾರಣೆ ಹಾಗೂ ಉತ್ತಮ ಫಲಿತಾಂಶ ತರಲು ಶಿಕ್ಷಕರಷ್ಟೇ ಪಾಲಕರ ಜವಾಬ್ದಾರಿ ಕೂಡ ಅಗತ್ಯವಾಗಿದೆ ಪಾಲಕರು ಮತ್ತು ಶಿಕ್ಷಕರು ಕೈಜೋಡಿಸಿದರೆ ಮಾತ್ರ ಮಕ್ಕಳ ಫಲಿತಾಂಶ ಉತ್ತಮವಾಗಿ ತರಲು ಮತ್ತು ಫಲಿತಾಂಶ ಸುಧಾರಣೆಯಾಗಲು ಸಾಧ್ಯ ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಉಪ ಪ್ರಾಚಾರ್ಯರಾದ ಎಂ ಎ ಖೈಯುಮ ಹೇಳಿದರು.
ಅವರು ಶನಿವಾರ ಕಾಲೇಜಿನ ಆವರಣದಲ್ಲಿ ಏರಿ್ಡಸಿದ ಎಸ್ ಡಿ ಎಂ ಸಿ ಪದಾಧಿಕಾರಿಗಳ ಪಾಲಕರ ಮತ್ತು ತಾಯಿಯಂದಿರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಮುಂದುವರೆದು ಮಾತನಾಡಿ ಪ್ರಸಕ್ತ ಸಾಲಿನ ಅಂದರೆ 2024 25ರ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಮಕ್ಕಳಲ್ಲಿ ಶೈಕ್ಷಣಿಕ ಸುಧಾರಣೆ ತರಲು ಶಿಕ್ಷಕರು ಸರ್ಕಾರದ ನಿರ್ದೇಶನ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಿಕ್ಷಕರೆಲ್ಲರೂ ಸೇರಿ ತಮ್ಮ ಪಾಲಿನ ಜವಾಬ್ದಾರಿ ಪ್ರಮಾಣಿಕವಾಗಿ ನಿಭಾಯಿಸಲಿದ್ದಾರೆ ತಾಯಂದಿರು ಪಾಲಕರು ಮತ್ತು ಎಸ್ ಡಿ ಎಮ್ ಸಿ ಪದಾಧಿಕಾರಿಗಳ ಸಹಕಾರ ಅಗತ್ಯವಾಗಿದೆ ಎಲ್ಲರೂ ಕೂಡಿ ಫಲಿತಾಂಶ ಸುಧಾರಣೆಗಾಗಿ ಮತ್ತು ಒಳ್ಳೆಯ ಫಲಿತಾಂಶ ಬರಲು ಶ್ರಮಿಸೋಣ ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಉಪ ಪ್ರಾಚಾರ್ಯರಾದ ಎಂ ಎ. ಕೈಯುಂ ಅಭಿಪ್ರಾಯ ಪಟ್ಟರು.
ಇದೇ ವೇಳೆ ಹಿರಿಯ ಶಿಕ್ಷಕರಾದ ಮೈಲಾರ್ಪ ಕುರಿ ಮಾತನಾಡಿ ಫಲಿತಾಂಶ ಸುಧಾರಣೆಗಾಗಿ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು ವೇದಿಕೆ ಮೇಲೆ ಸಹ ಶಿಕ್ಷಕರು ಗಳಾದ ಮಂಜುನಾಥ ಸವಡಿ ,ಫರ್ಹತ್ ಜಹಾ ಬೇಗಮ್ , ಜುಬೇದಾ ಬೇಗಂ, ಅನ್ನಪೂರ್ಣಮ್ಮ, ರಾಮಣ್ಣ ಚಲವಾದಿ, ಇತರ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳು ಎಸ್ ಡಿಎಂಸಿ ಪದಾಧಿಕಾರಿಗಳು ಪಾಲ್ಗೊಂಡಿದ್ದು ಪಾಲಕರು ಮತ್ತು ತಾಯಂದಿರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.