ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಕೊಪ್ಪಳ 06: ಕೊಪ್ಪಳ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಗುರುವಾರದಂದು (ಸೆ.5) ಹಮ್ಮಿಕೊಳ್ಳಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.  

ಜಿಲ್ಲಾ ತರಬೇತಿ ಕೇಂದ್ರ ವೃತ್ತಿ ಬುನಾದಿ  ತರಬೇತಿ ಪ್ರತಿಕ್ಷಣಾಥರ್ಿಗಳಿಂದ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತ್ತು.  ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.  ಖಜಾನೆ ಇಲಾಖೆಯ ನಿವೃತ್ತ ಮುಖ್ಯ ಲೆಕ್ಕಿಗ ಮೈಲಾರರಾವ ಕುಲಕರ್ಣಿ , ಕಂದಾಯ ಇಲಾಖೆ ನಿವೃತ್ತ ಶಿರಸ್ತದಾರ ಲಾಯಕ್ ಅಲಿ, ಶಿರಸ್ತದಾರ ಬಿ.ಎಸ್. ಸೊಬರದ ಮತ್ತು ಉಪನ್ಯಾಸಕ ಮಹಾಂತಗೌಡ ಸೇರಿದಂತೆ ಮತ್ತಿತರರ ಉಪಸ್ಥಿತಿಯಲ್ಲಿ ಪ್ರಶಿಕ್ಷಣಾಥರ್ಿಗಳು ಸಸಿಗಳನ್ನು ನೀಡಿ ಸ್ವಾಗತಿಸಿ ನಂತರ ಕೇಕ್ ಕತ್ತರಿಸುವ ಮುಖಾಂತರ ಶಿಕ್ಷಕ ದಿನಾಚರನೆಯನ್ನು ಆಚರಿಸಲಾಯಿತು.  

ಮೈಲಾರರಾವ ಕುಲಕಣರ್ಿ ಹಾಗೂ ಲಾಯಕ್ ಅಲಿ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಶ್ವೇತಾ ಮತ್ತು ಸಂಗೀತ ಕಾರ್ಯಕ್ರಮ ನಿರೂಪಿಸಿದರು.  ಶರಣಪ್ಪ ಹುಡೇದ್ ಮತ್ತು ಪವನ ಕುಮಾರ ಶಿಕ್ಷಕರ ದಿನಾಚರನೆಯ ಕುರಿತು ಅನಿಸಿಕೆಯನ್ನು ಹೇಳಿದರು.