ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ಕಲಿಸಿ: ಸಿದ್ದರಾಮಶ್ರೀ
Teach good manners with education: Siddaramasree
ತಾಳಿಕೋಟಿ 05: ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣ ಕೊಟ್ಟರೆ ಸಾಲದು ಇದರ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಕಲಿಸುವ ಅಗತ್ಯವಿದೆ ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ ಎಂದು ರನ್ನ ಬೆಳಗಲಿಯ ಖ್ಯಾತ ಪ್ರವಚನಕಾರ ಪೂಜ್ಯ ಸಿದ್ದರಾಮ ಶಿವಯೋಗಿಗಳು ಹೇಳಿದರು.
ಶನಿವಾರ ಪಟ್ಟಣದ ಬಾಲ ಭಾರತಿ ವಿದ್ಯಾ ಮಂದಿರ ಪ್ರಾಥಮಿಕ ಶಾಲೆ ಹಾಗೂ ಲಕ್ಷ್ಮಣಸಿಂಗ್ ಉಮರಸಿಂಗ್ ಹಜೇರಿ ವಿದ್ಯಾಭಾರತಿ ಪ್ರೌಢಶಾಲೆ ಇದರ 2025-26 ನೇ ಸಾಲಿನ ಶಾಲಾ ಸಂಸತ್ತು ಹಾಗೂ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳು ಬದುಕಿಗೆ ಶ್ರೇಷ್ಠ ಗುರಿಯನ್ನು ಇಟ್ಟುಕೊಂಡು ಅದಕ್ಕಾಗಿ ನಿರಂತರ ಪರಿಶ್ರಮ ಪಡಬೇಕು. ಒಳ್ಳೆಯ ಸಂಸ್ಕಾರಗಳನ್ನು ಪಡೆದುಕೊಂಡು ಹೆತ್ತವರ ಪಾಲಿಗೆ ಅನುಗ್ರಹವಾಗಬೇಕು, ನಿಮ್ಮ ಜೀವನದಲ್ಲಿ ತಾಯಿಯ ಸ್ಥಾನ ಅತ್ಯಂತ ಪವಿತ್ರವಾದದ್ದು ಅವಳ ಪಾದದಡಿಯಲ್ಲಿ ಸ್ವರ್ಗವಿದೆ. ಸದಾ ಅವಳ ಸಂಪ್ರೀತಿಗೆ ಪಾತ್ರರಾಗಿ, ಅವಳನ್ನು ಗೌರವ ಭಾವದಿಂದ ಕಾಣಿ ಜೀವನದಲ್ಲಿ ಒಳ್ಳೆಯ ಸಾಧನೆಯನ್ನು ಮಾಡಿ ಹೆತ್ತವರ ಗುರುಗಳ ಕಲಿತ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ತರಲು ಪ್ರಯತ್ನಿಸಿ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಹಿರಿಯ ಪತ್ರಕರ್ತ ಜಿ.ಟಿ.ಘೋರೆ್ಡ ಮಾತನಾಡಿ ಬಾಲ ಭಾರತಿ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಸ್ತು, ಭಾರತೀಯ ಸಂಸ್ಕೃತಿಯ ಪರಿಚಯ ಹಾಗೂ ದೇಶಾಭಿಮಾನವನ್ನು ಬೆಳೆಸುವ ಪಟ್ಟಣದ ಒಂದು ಒಳ್ಳೆಯ ಸಂಸ್ಥೆಯಾಗಿದೆ ಇಲ್ಲಿ ಶಿಕ್ಷಣ ಮುಗಿಸಿದ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಇದ್ದಾರೆ.ಈ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರ ಸೇವಾ ಮನೋಭಾವ ಶ್ಲಾಘನೀಯವಾಗಿದೆ ಎಂದರು.
ಸಿಆರಿ್ಸ ರಾಜು ವಿಜಾಪುರ ಮಾತನಾಡಿದರು. ಶಿಕ್ಷಕ ರಮೇಶ ಕುಲಕರ್ಣಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಚಿದಂಬರ ಕರಮರಕರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ಅಮರಸಿಂಗ್ (ಬಾಬು)ಹಜೇರಿ, ನಿವೃತ್ತ ಶಿಕ್ಷಕ ಸಿ.ಎಂ. ಹಿರೇಮಠ, ಪತ್ರಕರ್ತರಾದ ಅಬ್ದುಲಗನಿ ಮಕಾಂದಾರ, ಸಂಜಯ ಸಿಂಗ್ ರಜಪೂತ, ಸಂಗನಗೌಡ ಗಬಸಾವಳಗಿ ಸಂಭಾಜಿರಾವ್ ವಾಡ್ಕರ್, ಶ್ಯಾಮ್ ಹಂಚಾಟೆ, ತಮ್ಮಣ್ಣ ದೇಶಪಾಂಡೆ, ಮಲ್ಲಿಕಾರ್ಜುನ್ ಹಿಪ್ಪರಗಿ, ಪ್ರಕಾಶ ಕಟ್ಟಿಮನಿ, ನೌಕರ ಸಂಘದ ಅಧ್ಯಕ್ಷ ವೆಂಕೋಬ ನಾಯ್ಕೋಡಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಹೇಶ್ ಓದಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರದೀಪ ಆರ್. ಗೊಂಡ, ಆಡಳಿತಾಧಿಕಾರಿ ಪ್ರದೀಪ ಸಿರಸಿ,ಮುಖ್ಯ ಗುರುಮಾತೆ ಸುಮಂಗಲಾ ಯಾಳವಾರ, ಶಿಕ್ಷಕರಾದ ಈರಣ್ಣ ಶರಣರ, ರೂಪಾ ನಾಗಾವಿ, ಶಶಿಕಲಾ ಕುಂಟೋಜಿ( ಕಂಪ್ಯೂಟರ್ ಶಿಕ್ಷಕಿ) ಶಿಕ್ಷಕ ವೃಂದ, ಮಕ್ಕಳ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 