ಟ್ಯಾಕ್ಸಿ ಚಾಲಕರ ಬದುಕು ಅತಂತ್ರವಾಗಿದೆ : ವೈಟ್ ಬೋರ್ಡ್ ವಾಹನಗಳ ಬಾಡಿಗೆ ನಿಯಂತ್ರಣ ಮಾಡಲು ಮನವಿ
Taxi drivers' lives are precarious: Whiteboard appeals to regulate vehicle rentals
ಟ್ಯಾಕ್ಸಿ ಚಾಲಕರ ಬದುಕು ಅತಂತ್ರವಾಗಿದೆ : ವೈಟ್ ಬೋರ್ಡ್ ವಾಹನಗಳ ಬಾಡಿಗೆ ನಿಯಂತ್ರಣ ಮಾಡಲು ಮನವಿ
ಕಾರವಾರ : ವೈಟ್ ಬೋರ್ಡ್ ವಾಹನಗಳ ಹಾವಳಿ ಹೆಚ್ಚುತ್ತಿರುವಾಗಲೇ, ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಐಆರಿ್ಬ ಅಧಿಕಾರಿಗಳು ಟ್ಯಾಕ್ಸಿ ನಿಲ್ದಾಣವನ್ನು ತೆರವು ಮಾಡಲು ಮುಂದಾಗಿದ್ದಾರೆ. ಈ ಕಾರಣ ಟ್ಯಾಕ್ಸಿ ಚಾಲಕರ ಬದುಕು ಅತಂತ್ರವಾಗಿದೆ ಎಂದು ಭಟ್ಕಳ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ ಆರೋಪಿಸಿದರು. ಜಿಲ್ಲಾಧಿಕಾರಿಗೆ ಈ ಸಂಬಂಧ ಮನವಿ ನೀಡಿದ ನಂತರ ಕಾರವಾರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಭಟ್ಕಳದ ಬಸ್ ನಿಲ್ದಾಣದ ಬಳಿಯೇ ಟ್ಯಾಕ್ಸಿ ನಿಲ್ದಾಣವಿದೆ. ಆದರೆ ಟ್ಯಾಕ್ಸಿ ನಿಲುಗಡೆಗೆ ಪರ್ಯಾಯ ಸ್ಥಳ ಗುರುತಿಸದೇ, ಏಕಾಏಕಿ ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ತಾತ್ಕಾಲಿಕವಾಗಿ ಜಾಗ ಗುರುತು ಮಾಡದ ಹೊರತು ನಾವು ಏಳುವುದಿಲ್ಲ.
ಈ ನಡೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಶಿರಾಲಿ ಮಾತನಾಡಿ, ಭಟ್ಕಳದಲ್ಲಿ ಕೆಲವು ಆಟೋ ಚಾಲಕರು ಕುಂದಾಪುರ, ಸಿಗಂದೂರು ಸೇರಿದಂತೆ ವಿವಿಧೆಡೆ ನಿಯಮ ಮೀರಿ ಬಾಡಿಗೆ ಹೋಗುತ್ತಾರೆ. ಅದರಿಂದ ಟ್ಯಾಕ್ಸಿ ಚಾಲಕರಿಗೆ ನಷ್ಠವಾಗುತ್ತುದೆ. ಖಾಸಗಿ ವಾಹನಗಳು ಕೂಡ ಧರ್ಮಸ್ಥಳ, ಗೋವಾ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಡಿಗೆ ಹೋಗುತ್ತಾರೆ.
ಭಟ್ಕಳದಲ್ಲಿ ಖಾಸಗಿ ಬಸ್‌ಗಳು ಪರವಾನಿಗೆ ಇಲ್ಲದೆ ಉಡುಪಿ, ಮಂಗಳೂರು ವರೆಗೆ ಓಡಿಸುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಸಂಘದ ಉಪಾದ್ಯಕ್ಷ ಮಹಮದ್ ಮುಶ್ತಾಕ್ ಮಾತನಾಡಿ, ಸಾರ್ವಜನಿಕರು ಖಾಸಗಿ ವಾಹನಗಳ ಬಗ್ಗೆ ಜಾಗೃತರಾಗಬೇಕು. ವಿಮಾನ ನಿಲ್ದಾಣ, ಪ್ರವಾಸದಂತಹ ದೂರ ಪ್ರಯಾಣಕ್ಕೆ ಟ್ಯಾಕ್ಸಿ ಬದಲು, ಖಾಸಗಿ ವಾಹನಗಳ ಬಳಕೆ ಮಾಡಿದರೆ, ಅಪಘಾತ ಸಂಭವಿಸಿದರೆ , ಅಪಘಾತ ವಿಮೆ ಪರಿಹಾರ ಸಿಗುವುದಿಲ್ಲ.
ಚಾಲಕ ಪ್ರಯಾಣಿಕರಿಗೆ ಪರಿಹಾರ ಅಸಾಧ್ಯ. ವಾಹನದ ಇನ್ಸುರೆನ್ಸ ಮಾಲೀಕರ ಹೆಸರಲ್ಲಿ ಇರುತ್ತದೆ. ಪ್ರಯಾಣಿಕರು ಬೇರೆ ಆದ ಕಾರಣ ಅಪಘಾತ ವಿಮೆ ಲಾಘು ಆಗಲ್ಲ.ಈ ಬಗ್ಗೆ ಜಾಗ್ರತೆ ಅವಶ್ಯಕ ಎಂದರು. ಬರಲಿರುವ ಶಿರಸಿ ಜಾತ್ರೆಗೂ ಖಾಸಗಿ ವಾಹನಗಳು ಹೊರಡುತ್ತವೆ. ಇದು ಸರಿಯಲ್ಲ ಎಂದ ಅವರು, ಇದರ ಬಗ್ಗೆ ಪ್ರತಿಭಟನೆ ಮಾಡುತ್ತೇವೆ. ಎಲ್ಲಾ ಚೆಕ್ ಪೋಸ್ಟಿನಲ್ಲಿ ಖಾಸಗಿ ವಾಹನಗಳ ಪರೀಶೀಲನೆ ಮಾಡುತ್ತೇವೆ. ಭಟ್ಕಳದಲ್ಲಿ 250 ಕ್ಕೂ ಹೆಚ್ಚು ಟ್ಯಾಕ್ಸಿಗಳಿವೆ, ಆದರೆ 200 ಕ್ಕೂ ಹೆಚ್ಚು ಖಾಸಗಿ ವಾಹನಗಳು ಓಡಾಡುತ್ತಿದ್ದು ಅವುಗಳಿಂದ ಬಾಡಿಗೆ ಸಿಗುವುದೇ ಕಷ್ಟವಾಗಿದೆ ಎಂದರು. ಟ್ಯಾಕ್ಸಿ ಚಾಲಕರಾದ ಫೈಜಲ್, ರಮೇಶ ಮಹಾದೇವ ನಾಯ್ಕ, ಮಹಮದ್ ಅದ್ನಾನ, ಶ್ರೀನಿವಾಸ ಮಂಜಯ್ಯ ನಾಯ್ಕ, ಗಜಾನನ, ರಾಘು ಶೇಟ್, ಮಹಮ್ಮದ್ ಸಲೀಮ್, ರಮೇಶ ಮಂಜಪ್ಪ ನಾಯ್ಕ, ಅಬ್ದುಲ್, ಸಲ್ಮಾನ್ ಹಾಗೂ ಇತರರು ಇದ್ದರು.....
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 