ಲಕ್ಷ್ಮಣ ಹಿರೇಕುರಬರ
ತಾಂಬಾ 16: ವಿಜಯಪುರ ಜಿಲ್ಲೆ ಬರಗಾಲದಿಂದ ನೀರಿನ ಮೂಲಗಳು ಬತ್ತಿವೆ. ಬೇಡಿಕೆಗೆ ಅನುಗುಣವಾಗಿ ನಿಂಬೆ ಹಣ್ಣು ಮಾರುಕಟ್ಟೆಗೆ ಬಾರದ್ದರಿಂದ, ನಿಂಬೆ ಧಾರಣೆಯಲ್ಲಿ ಹೆಚ್ಚಳವಾಗಿದೆ.
ಬೇಸಿಗೆ ಆರಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ನಿಂಬೆ ಮಾರುಕಟ್ಟೆಗೆ ಅವಕವಾಗುತ್ತಿತ್ತು. ಖರಿದಿದಾರರು ಕೊಡಾ ಹೆಚ್ಚು ಯೋಚಿಸದೆ ಖರಿದಿಸುತ್ತಿದ್ದರು ಆದರೆ ಪ್ರಸ್ತುತ ಮಾರುಕಟ್ಟೆಗೆ ನಿಂಬೆ ಆವಕ ಇಳಿಕೆ ಆಗಿದೆ. ಗುಣಮಟ್ಟವೂ ಇಲ್ಲದಾಗಿದೆ. ಆದಾಗ್ಯೂ, ನಿಂಬೆ ಖರಿದಿ ಅನಿವಾರ್ಯವಾಗಿದೆ.
ಇಲ್ಲಿಯ ಮಾರುಕಟ್ಟೆಯಲ್ಲಿ ಶುಕ್ರವಾರ ಗುಣಮಟ್ಟದ ಆಧಾರದ ಮೇಲೆ ಚೀಲಕ್ಕೆ 1500 ರಿಂದ 4ಸಾವಿರ ವರೆಗೆ ಮಾರಾಟವಾಗಿದೆ. ಹೋದ ವಾರಕ್ಕೆ ಹೋಲಿಸಿದರೆ ಈ ವಾರ 500ರಿಂದ 600 ದರ ಹೆಚ್ಚಾಗಿದೆ. ವಾರದಿಂದ ವಾರಕ್ಕೆ ಧಾರಣೆ ಏರಿಕೆ ಆಗುತ್ತಿದ್ದು, ಬೇಸಿಗೆಯಲ್ಲಿ ಇನ್ನೂ ಹೆಚ್ಚಳಗೊಳ್ಳಲಿದೆ. ಜತೆಗೆ ಕೊರತೆಯೂ ಆಗಲಿದೆ ಎಂದು ವ್ಯಾಪಾರಿಗಳು ರೈತರು ಹೇಳುತ್ತಾರೆ.
ಬೇಸಿಗೆಯಲ್ಲಿ 5-6 ಚೀಲ ನಿಂಬೆ ತರುವ ರೈತರು, ಸದ್ಯ 1-2 ಚೀಲ ತರುತ್ತಿದ್ದಾರೆ. ಧಾರಣೆ ಹೆಚ್ಚಿರುವ ಕಾರಣ ಮಾಗದ ಕಾಯಿಗಳನ್ನೂ ತರುತ್ತಿದ್ದಾರೆ. ಹೀಗಾಗಿ, ಮಾರುಕಟ್ಟೆಗೆ ಆವಕವಾಗುತ್ತಿರುವ ನಿಂಬೆಯಲ್ಲಿ ಗುಣ ಮಟ್ಟ ಇಲ್ಲ.ರೈತರ ಹಿತದೃಷ್ಟಿಯಿಂದ ಹೆಚ್ಚಿನ ಬೆಲೆಗೆ ಸವಾಲು ಮಾಡಲಾಗುತ್ತಿದೆ. ಆದರೆ, ಇದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ, ಎಂದು ನಿಂಬೆ ವ್ಯಾಪಾರಿ ಎಮ್.ಎಮ್.ಮನಗೊಳಿ
ನಮ್ಮ ತೋಟದಲ್ಲಿ 180 ನಿಂಬೆ ಗಿಡಗಳಿವೆ 10ವರ್ಷಗಳಿಂದ ನೀರು ಗೊಬ್ಬರ ಹಾಕಿ ಬೆಳೆಸಿದ್ದೆನೆ. ಗಿಡಗಳು ಸಣ್ಣ ಇರುವುದರಿಂದ ಹೋದ ವರ್ಷ 85ಸಾವಿರ ಆದಾಯ ಬಂದಿತ್ತು ಈವರ್ಷ ಹೆಚ್ಚಿನ ಆದಾಯದ ನಿರೀಕ್ಷೇಇದೆ. ಆದರೆ, ಕೋಳವೆಬಾವಿ ನೀರು ಕಡಿಮೆ ಆಗಿದ್ದು ದರ ಹೆಚ್ಚಿದ್ದರೂ ನಿಂಬೆ ಇಲ್ಲ. ನೀರಿನ ಕೊರತೆಯಿಂದ ಬೆಸಿಗೆಯಲ್ಲಿ ಹಿಡಗಳು ಉಳಿಯುತ್ತವೆಯೋಇಲ್ಲವೋ ಎಂಬ ಆತಂಕಕಾಡುತ್ತಿದೆ ಎಂದು ರೈತ ಭೀರಪ್ಪ ಮ್ಯಾಗೇರಿ ಹೇಳಿದರು.